ಪುತ್ತೂರು: ಹಲವು ವರ್ಷಗಳ ಹಿಂದೆ ಪುತ್ತೂರು ಕಲ್ಲಾರೆ ಮುಖ್ಯರಸ್ತೆಯಲ್ಲಿ ಅಂಬಾಸಿಡರ್, ಪಿಯೆಟ್ ಕಾರುಗಳ ಗ್ಯಾರೇಜ್ ಮಾಲಕರಾಗಿದ್ದ ಲಿಂಗಪ್ಪ ಗೌಡ (93ವ)ರವರು ಫೆ.13ಕ್ಕೆ ನಿಧನರಾದರು.
ಆರ್ಯಾಪು ಗ್ರಾಮದ ಖಂಡಿಗ ನಿವಾಸಿ ಲಿಂಗಪ್ಪ ಗೌಡ ಅವರು ಹಲವು ವರ್ಷಗಳ ಹಿಂದೆ ಪುತ್ತೂರು ಕಲ್ಲಾರೆ ಮುಖ್ಯರಸ್ತೆಯ ಬಳಿ ಅಂಬಾಸಿಡರ್ ಮತ್ತು ಪಿಯೆಟ್ ಕಾರುಗಳ ದುರಸ್ಥಿ ಗ್ಯಾರೇಜ್ ನಡೆಸುತ್ತಿದ್ದರು. ಬಳಿಕ ಅವರು ನಿವೃತ್ತಿಹೊಂದಿದ್ದು, ಮನೆಯಲ್ಲೇ ಇದ್ದರು. ಮೃತರು ಪತ್ನಿ, ಪುತ್ರ, 6 ಮಂದಿ ಪುತ್ರಿಯರನ್ನು ಅಗಲಿದ್ದಾರೆ.