ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 123ನೇ ಆವೃತ್ತಿಯಲ್ಲಿ ಬೆಂಗಳೂರಿನ ವಿದುಷಿ ದಿವ್ಯಾ ಪ್ರಭಾತ್‌ರವರು ಭರತನಾಟ್ಯ ಪ್ರಸ್ತುತಿ ನೀಡಿದರು.

ಸರಸ್ವತಿ, ಕಪಾಲೇಶ್ವರ ಶಿವ, ಗುಮ್ಮನ ಕರೆಯದಿರೆ ಮತ್ತು ಸೀತೆಯ ಲಾಲಿ ಹಾಡಿನ ನೃತ್ಯಗಳಿಗೆ ಅಭಿನಯ ನೀಡಿದರು. ಹೋಟೆಲ್ ಸಂತೃಪ್ತಿಯ ಮಾಲಕ ಗಿರೀಶ್ ಎಂ ರವರು ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿ ನೃತ್ಯಾಂತರಂಗದ ವೇದಿಕೆ ಪುತ್ತೂರಿನಲ್ಲಿ ಒಂದು ಉನ್ನತ ಗುಣಮಟ್ಟದ ಪ್ರೇಕ್ಷಕರನ್ನು ತಯಾರು ಮಾಡುತ್ತಿದೆ ಎಂದರು.

ಸಂಸ್ಥೆಯ ಪುಟಾಣಿ ಮಕ್ಕಳಾದ ಶೌರಿ ಕೃಷ್ಣ, ಅಕ್ಷರ, ಪ್ರೇರಣಾ, ಅಕ್ಷರಿ, ತನ್ವಿ, ಸಂವಿತ, ಧೃತಿ, ವೈಭವಿ ಕಿವಿ, ಆರುಷಿ ರೈ ಪ್ರಾರ್ಥಿಸಿದರು. ಮಾತಂಗಿ ವಿಷಯ ಮಂಡನೆ, ಆದ್ಯ ಮತ್ತು ಸೃಷ್ಟಿ ಎಂ ಕಲಾವಿದರ, ಅಭ್ಯಾಗತರ ಪರಿಚಯ, ಕು. ಜಾಹ್ನವಿ ಪಂಚಾಂಗ ವಾಚನ ಮಾಡಿ ವಿದ್ವಾನ್ ದೀಪಕ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ನಿವೇದಿತ ಪ್ರೇಕ್ಷಕರ ಪರವಾಗಿ ಅಭಿಪ್ರಾಯ ಮಂಡಿಸಿದರು. ವಿದುಷಿ ಅಪೂರ್ವ ಗೌರಿ ಕಾರ್ಯಕ್ರಮ ನಿರೂಪಿಸಿದರು.
