ಶಿಬಿರಾರ್ಥಿಗಳ ನಿಸ್ವಾರ್ಥ ಸೇವೆಗೆ ನಾವು ಅಭಾರಿಯಾಗಿದ್ದೇವೆ: ತ್ರಿವೇಣಿ ಪಲ್ಲತ್ತಾರು
ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರವು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ದರ್ಬೆತ್ತಡ್ಕ ಇಲ್ಲಿ 7 ದಿನಗಳ ಕಾಲ ನಡೆದ ಶಿಬಿರದ ಸಮಾರೋಪ ಸಮಾರಂಭ ಫೆ.13 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳ ಮೂಲಕ ಸ್ವಯಂಸೇವಕರಿಗೆ ಶಿಬಿರದ ಯಶಸ್ವಿಗಾಗಿ ಅಭಿನಂದಿಸುವರೊಂದಿಗೆ ಶಿಬಿರಾಧಿಕಾರಿಯಾದ ಡಾ. ಲಾಯ್ಡ್ ವಿಕ್ಕಿ ಡಿಸೋಜಾ ಸ್ವಾಗತಿಸಿದರು. ಘಟಕ ನಾಯಕ ನಾಯಕಿಯರುಗಳಾದ ಮನೀಶ್, ಸುಚಿತಾ, ರಂಜಿತ್ ,ಮಮತಾ ಇವರು ಸಪ್ತ ದಿನದ ಸಂಪೂರ್ಣ ವರದಿಯನ್ನು ವಾಚಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಒಳಮೊಗ್ರು ಗ್ರಾ.ಪಂ. ತ್ರಿವೇಣಿ ಪಳ್ಳತ್ತಾರುರವರು ಮಾತನಾಡಿ, ಸ್ವಯಂಸೇವಕರಿಂದ ಶಿಬಿರದ ನಂತರ ಶಾಲಾ ಪರಿಸರದಲ್ಲಿ ಆದ ಬದಲಾವಣೆ, ಊರಿನವರಿಗೆ ಸಿಕ್ಕ ಪ್ರೀತಿ ಮತ್ತು ಸತ್ಕಾರ ಹಾಗು ನಿಸ್ವಾರ್ಥ ಸೇವೆಗೆ ಶಿಬಿರಾರ್ಥಿಗಳನ್ನು ಪ್ರಶಂಶಿಸಿದರು. ನಿವೃತ್ತ ಎಎಸ್‌ಐ ಶ್ರೀಧರ ಮಣಿಯಾಣಿರವರು ಸ್ವಯಂಸೇವಕರಿಗೆ ಶುಭ ಹಾರೈಸುತ್ತಾ ಇನ್ನು ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿದ್ದ ರಮೇಶ್ ಆಳ್ವ ಮಾಲಕರು, ರಾಯಲ್ ಸೂಪರ್ ಬಜಾರ್ ಇವರು ಸ್ವಯಂಸೇವಕರ ಸೇವೆಗೆ ಅಭಿನಂದಿಸುತ್ತ ಉತ್ತಮ ಜೀವನ ನಿಮ್ಮದಾಗಲಿ ಎಂದು ಶುಭ ಹಾರೈಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪ್ರಸಾದ್ ಪಾಣಾಜೆ ಸ್ವಯಂಸೇವಕರಿಗೆ ಅಭಿನಂದಿಸಿದರು.
ಸಮಾರೋಪ ಭಾಷಣವನ್ನು ನಡೆಸಿಕೊಟ್ಟ ರವೀಂದ್ರ ಮಣಿಯಾಣಿ ಇವರು ಸ್ವಯಂಸೇವಕರ ಸೇವೆಗೆ ಅಭಿನಂದಿಸುತ್ತಾ ತಮ್ಮ ಸಹಕಾರ ಸದಾ ತಮ್ಮೊಂದಿಗಿರುತ್ತದೆ ಎಂದು ಹೇಳಿದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಡಾ. ವರದರಾಜ ಚಂದ್ರ ಗಿರಿ ಇವರು ಎನ್‌ಎಸ್‌ಎಸ್ ನ ಉತ್ತಮ ಸಾಧನೆ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು ಹಾಗೂ ಎನ್‌ಎಸ್‌ಎಸ್ ಸ್ವಯಂಸೇವಕರ ಸೇವೆಗೆ ವಂದಿಸಿದರು.

ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ನಡೆದ ಊರುದ ಗೊಬ್ಬು ಎಂಬ ಸಾರ್ವಜನಿಕ ಕ್ರೀಡಾಕೂಟ ದಲ್ಲಿ ವಿಜೇತರಾದ ಎಲ್ಲರಿಗೂ ಬಹುಮಾನ ವಿತರಣೆಯನ್ನು ನಡೆಸಲಾಯಿತು. ದರ್ಬೆತ್ತಡ್ಕ ಶಾಲಾ ಸಹಶಿಕ್ಷಕ ರಾಜು ಎಸ್. ಟಿ, ಉದ್ಯಮಿ ಮೋಹನ್‌ದಾಸ್ ರೈ ಕುಂಬ್ರ, ,ಶ್ರೀ ವಿಷ್ಣು ಸೇವಾ ಬಳಗ ದರ್ಬೆತ್ತಡ್ಕ ಅಧ್ಯಕ್ಷ ಪುಷ್ಪರಾಜ್ ಕುಡ್ಚಿಲ , ಊರಿನ ಜನರು, ಶಾಲಾ ಮಕ್ಕಳು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಶಿಬಿರಾಧಿಕಾರಿಯಾದ ಡಾ| ಲಾಯ್ಡ್ ವಿಕ್ಕಿ ಡಿಸೋಜಾ ಸ್ವಾಗತಿಸಿದರು. ಶಿಬಿರಾಧಿಕಾರಿಯಾದ ಡಾ| ಯೋಗಿಶ್ ಎಲ್ ಎನ್ ಶಿಬಿರದ ಯಶಸ್ಸಿಗೆ ಸಹಕಾರಿಸಿದ ಸರ್ವರನ್ನು ಸ್ಮರಿಸುತ್ತ ವಂದಿಸಿದರು. ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಿಬಿರ ಜ್ಯೋತಿಯೊಂದಿಗೆ ಶಿಬಿರವು ಸಂಪನ್ನಗೊಂಡಿತು.