ಏತಡ್ಕ ಬ್ರಹ್ಮಕಲಶ, ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ತಾಳಮದ್ದಳೆ

0


ಪುತ್ತೂರು: ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಧೀಶಕ್ತಿ ಮಹಿಳಾ ಯಕ್ಷಬಳಗ, ತೆಂಕಿಲ ಪುತ್ತೂರು ಇವರಿಂದ ಶ್ರೀ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ “ಶಿವಭಕ್ತ ವೀರಮಣಿ” ಯಕ್ಷಗಾನ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಪುಣ್ಚಿತ್ತಾಯ, ಮದ್ದಳೆಯಲ್ಲಿ ಅಂಬೆಮೂಲೆ ಶಿವಶಂಕರ ಭಟ್, ಚೆಂಡೆಯಲ್ಲಿ ರಾಜೇಂದ್ರ ಪ್ರಸಾದ್ ಪುಂಡಿಕಾಯಿ ,ಚಕ್ರತಾಳದಲ್ಲಿ ಮುರಳೀಧರ ಭಟ್, ಬಟ್ಯಮೂಲೆ ಸಹಕರಿಸಿದ್ದರು. ಮುಮ್ಮೇಳದಲ್ಲಿ, ಪದ್ಮಾ ಕೆ ಆರ್ ಆಚಾರ್ಯ ( ಹನುಮಂತ),ಜಯಲಕ್ಷ್ಮಿ ವಿ ಭಟ್ ( ವೀರಮಣಿ), ಶಾಲಿನಿ ಅರುಣ್ ಶೆಟ್ಟಿ (ಈಶ್ವರ), ಶುಭಾ ಪಿ ಆಚಾರ್ಯ (ಶತ್ರುಘ್ನ), ಅರ್ಥವಾದಿಗಳಾಗಿ ಭಾಗವಹಿಸಿದ್ದರು. ನವಿನ್ ಚಂದ್ರ ಏತಡ್ಕ ಕಾರ್ಯಕ್ರಮ ನಿರೂಪಿಸಿದರು.


ಕಾರ್ಯಕ್ರಮದ ಕೊನೆಯಲ್ಲಿ ದೇವಳದ ವತಿಯಿಂದ ಖ್ಯಾತ ಯಕ್ಷಗಾನ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿಗಳು, ಮದಂಗಲ್ಲು ಆನಂದ ಭಟ್, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಡಾ| ವೈ ಸುಬ್ರಾಯ ಭಟ್, ಪುತ್ತೂರಿನ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಮೊದಲಾದ ಗಣ್ಯರು ಕಲಾವಿದರನ್ನು ಶಾಲು ಹೊದಿಸಿ ಅಭಿನಂದನಾ ಪತ್ರ, ಪ್ರಸಾದ ಮತ್ತು ರುದ್ರಾಕ್ಷಿ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here