ಬೆಟ್ಟಂಪಾಡಿ: ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ ವಾರ್ಡ್ ನ ಜಲಜೀವನ್ ಮಿಷನ್ ನ ಘರ್ ಘರ್ ಗಂಗಾ ಯೋಜನೆಯ ನೀರಿನ ಟ್ಯಾಂಕ್ ನ್ನು ಇತ್ತೀಚೆಗೆ ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷೆ ವಿದ್ಯಾಶ್ರೀ ಸುರೇಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ‘ಈ ಟ್ಯಾಂಕ್ ನಿಂದ ಸರಬರಾಜು ಆಗುವ ಫಲಾನುಭವಿಗಳಿಗೆ ಉತ್ತಮ ಕುಡಿಯುವ ನೀರಿನ ಸೌಲಭ್ಯ ಸಿಗುವಂತಾಗಲಿ’ ಎಂದರು.
ಗೌರವಾರ್ಪಣೆ
ನೀರಿನ ಟ್ಯಾಂಕ್ ನಿರ್ಮಿಸಲು ಜಾಗ ಮಾಡಿಕೊಟ್ಟ ರಾಮಚಂದ್ರ ಮನೋಳಿತ್ತಾಯರನ್ನು ಇದೇ ವೇಳೆ ಗೌರವಿಸಲಾಯಿತು. ಗ್ರಾ.ಪಂ. ಸದಸ್ಯ ವಿನೋದ್ ಕುಮಾರ್ ರೈ ಗುತ್ತು ಪ್ರಾಸ್ತಾವಿಕ ಮಾತನಾಡಿದರು.
ಗ್ರಾ.ಪಂ. ಉಪಾಧ್ಯಕ್ಷ ಮಹೇಶ್ ಕೋರ್ಮಂಡ, ಸದಸ್ಯರಾದ ಗಂಗಾಧರ ಎಂ.ಎಸ್., ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಸಂದೀಪ್ ರೈ ಬಾಜುವಳ್ಳಿ, ಬಿಜೆಪಿ ಮಿತ್ತಡ್ಕ ಬೂತ್ ಅಧ್ಯಕ್ಷ ಶಾಂತರಾಮ ಎಂ.ಎ., ಕಾರ್ಯದರ್ಶಿ ಗಣೇಶ್ ನಾಯರಡ್ಕ, ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರಿ ಸಂಘದ ನಿರ್ದೇಶಕಿ ನಿಕಿತ ಉಮೇಶ್, ನೀರು ಸರಬರಾಜು ನಿರ್ವಾಹಕಿ ಜಯಂತಿ ಎಂ.ಎಲ್., ಹಾಗೂ ಫಲಾನುಭವಿಗಳು ಈ ವೇಳೆ ಉಪಸ್ಥಿತರಿದ್ದರು. ಬೆಟ್ಟಂಪಾಡಿ ಗ್ರಾ.ಪಂ. ಕಾರ್ಯದರ್ಶಿ ಬಾಬು ನಾಯ್ಕ್ ವಂದಿಸಿದರು. ಉಮೇಶ್ ಮಿತ್ತಡ್ಕ ನಿರೂಪಿಸಿದರು.