ಅರಿವು ಕೃಷಿ ಕೇಂದ್ರದಲ್ಲಿ ಮೊಜಂಟಿ ಜೇನು ತರಬೇತಿ ಕಾರ್ಯಕ್ರಮ

0

ಪುತ್ತೂರು: ಅರಿವು ಎಂಟರ್ಪ್ರೈಸಸ್, ಅರಿವು ಕೃಷಿ ಕೇಂದ್ರದ ಸಹಯೋಗದೊಂದಿಗೆ ಮೊಜಂಟಿ ಜೇನು ತರಬೇತಿ ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ನಲ್ಲಿ ಫೆ.16 ರಂದು ನಡೆಯಿತು.

ವಿ.ಕೆ. ಭಟ್ ಅವರು ಮೊಜಂಟಿ ಜೇನು ಸಾಕಾಣಿಕೆ ಹಾಗೂ ಉತ್ಪಾದನೆಗಳ ಬಗ್ಗೆ ತರಬೇತಿ ಹಾಗೂ ಪ್ರಾತ್ಯಕ್ಷತೆ ನೀಡಿದರು.

ಪುತ್ತೂರು, ನೆಲ್ಯಾಡಿ, ಉಪ್ಪಿನಂಗಡಿ, ಬೆಳ್ತಂಗಡಿ, ಹಾಸನ ಕಡೆಯ 25 ರಿಂದ 30 ಮಂದಿ ತರಬೇತಿಯಲ್ಲಿ ಭಾಗವಹಿಸಿ, ಮೊಜಂಟಿ ಜೇನು ಸಾಕಾಣಿಕೆ ಹಾಗೂ ಉತ್ಪಾದನೆಗಳ ಬಗ್ಗೆ ಮಾಹಿತಿ ಪಡೆದರು.ತರಬೇತಿಯ ನಂತರ ಕೆಲವರು ಮೊಜಂಟಿ ಜೇನು ಕುಟುಂಬ ಖರೀದಿಸಿದರು.

ಅರಿವು ಕೃಷಿ ಕೇಂದ್ರದ ಹರಿಣಿ ಸ್ವಾಗತಿಸಿ, ವಂದಿಸಿದರು. ಚೈತ್ರಾ ಮಧುಚಂದ್ರ ಸಹಕರಿಸಿದರು.

LEAVE A REPLY

Please enter your comment!
Please enter your name here