ವಿಟ್ಲ: ಶೌರ್ಯ ವಿಪತ್ತು ಘಟಕದಿಂದ ಸೇವಾ ಕಾರ್ಯಕ್ರಮ

0

ಪುತ್ತೂರು: ವಿಟ್ಲ ಮೇಗಿನಪೇಟೆ ಚಂದ್ರಸ್ವಾಮೀ ಬಸದಿಯಲ್ಲಿ ನಡೆದ ಪಂಚ ಕಲ್ಯಾಣ ಮಹೋತ್ಸವಕ್ಕೆ ಪೂರಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕೇಪು, ಮಾಣಿ ವಲಯದ ಸೇವಾಪ್ರತಿನಿಧಿಗಳು, ಸಿ.ಎಸ್.ಸಿ ಸೇವಾದಾರರು, ಶೌರ್ಯ ತಂಡದ ಸದಸ್ಯರು ಹಾಗೂ ಒಕ್ಕೂಟದ ಪದಾಧಿಕಾರಿಗಳು ಒಟ್ಟು ಸೇರಿ 5ನೇ ದಿನದ ಕಾರ್ಯಕ್ರಮಕ್ಕೆ ಪೂರಕವಾಗಿ ಎಲ್ಲಾ ಕೆಲಸಗಳು ಅತ್ಯುತ್ತಮ ಕೆಲಸ ಕಾರ್ಯ ಮಾಡಿದರು.

ಈ ಸಂದರ್ಭದಲ್ಲಿ ಪ್ರಾದೇಶಿಕ ನಿರ್ದೇಶಕರಾದ ದುಗ್ಗೇಗೌಡ, ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್, ಯೋಜನಾಧಿಕಾರಿ ರಮೇಶ್, ಕೃಷಿ ಅಧಿಕಾರಿ ಚಿದಾನಂದ ಕೇಪು, ವಲಯ ಮೇಲ್ವಿಚಾರಕರಾದ ಜಗದೀಶ್, ಮಾಣಿ ವಲಯದ ಮೇಲ್ವಿಚಾರಕಿ ಆಶಾ ಪಾರ್ವತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here