ಪುತ್ತೂರು: ಬೆಳ್ಳಿಪ್ಪಾಡಿ ಕೋರ್ಯ ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ನೀಡಿದ ರೂ. 1 ಲಕ್ಷ ರೂಪಾಯಿಯ ಚೆಕ್ಕನ್ನು ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಡಾ. ಬಿ. ರಘು ಬೆಳ್ಳಿಪ್ಪಾಡಿರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಹಸ್ತಾಂತರಿಸಿದರು.
ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆನಂದ ಕಜೆ, ಜನ ಜಾಗೃತಿ ವೇದಿಕೆಯ ವಲಯಾಧ್ಯಕ್ಷ ರಾಮಣ್ಣ ಗೌಡ ಗು೦ಡೋಳೆ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಮೋಹನ ಪಕ್ಕಳ ಕುಂಡಾಪು, ಸ್ಥಳೀಯರಾದ ಸು೦ದರ ಸಾಲ್ಯಾನ್ ಬಾರ್ಪಾದೆ, ವಸ೦ತ ಪೋಳ್ಯ, ವಾಸು ಆಚಾರಿ, ರವಿ ಬೆಳ್ಳಿಪ್ಪಾಡಿ, ಸುರೇಶ್ ನೆಕ್ಕರೆ, ಮೋನಪ್ಪ ಕಾಪಿಕಾಡು ಮತ್ತು ಪದ್ಮ ಕಾಪಿಕಾಡು ಉಪಸ್ಥಿತರಿದ್ದರು.