ಫಲಿಸಿದ ಸಂಕಲ್ಪ: ಸಂಸದ ಕ್ಯಾ| ಚೌಟರ ನೇತೃತ್ವದಲ್ಲಿ ಉಪ್ಪಿನಂಗಡಿಯಲ್ಲಿ ಶತರುದ್ರಾಭಿಷೇಕ

0

ಉಪ್ಪಿನಂಗಡಿ: ಅಂದು ಲೋಕಸಭಾ ಚುನಾವಣೆಯ ವೇಳೆ ಮತಯಾಚನೆಗೆ ಬಂದಿದ್ದ ಬಿಜೆಪಿ ಅಭ್ಯರ್ಥಿ ಕ್ಯಾ. ಬೃಜೇಶ್ ಚೌಟರ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸುವ ವೇಳೆ , ಚುನಾವಣೆಯಲ್ಲಿ ಗೆಲುವು ಪ್ರಾಪ್ತಿಯಾಗಿಸಿದರೆ ಶ್ರೀ ದೇವರಿಗೆ ಶತರುದ್ರಾಭಿಷೇಕ ಸೇವೆ ಸಲ್ಲಿಸಲಾಗುವುದೆಂದು ಸಂಕಲ್ಪಿಸಿದಂತೆ ಸೋಮವಾರದಂದು ಸಂಸದರ ಉಪಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಶ್ರೀ ದೇವರಿಗೆ ಶತ ರುದ್ರಾಭಿಷೇಕ ಸೇವೆಯು ನಡೆಯಿತು.


ಉಪ್ಪಿನಂಗಡಿ ಬಿಜೆಪಿ ಮಹಾಶಕ್ತಿ ಕೇಂದ್ರ ಹಾಗೂ ಕಣಿಯೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಕಲ್ಪದ ರೂವಾರಿ ಕರುಣಾಕರ ಸುವರ್ಣ ಬಿಜೆಪಿ ಮುಖಂಡರಾದ ಸಂಜೀವ ಮಠಂದೂರು, ದಯಾನಂದ ಉಜಿರೆಮಾರ್ , ಸುನಿಲ್ ಕುಮಾರ್ ದಡ್ಡು, ಶಿವಕುಮಾರ್ ಕಳ್ಳಿಮಾರ್, ಸಾಜ ರಾಧಕೃಷ್ಣ ಆಳ್ವ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಚನಿಲ ತಿಮ್ಮಪ್ಪ ಶೆಟ್ಟಿ, ಬಾಲಕೃಷ್ಣ ಮುಗೇರೋಡಿ, ಉಷಾ ಮುಳಿಯ, ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ, ಯತೀಂದ್ರ ಕೊಚ್ಚಿ, ವಿದ್ಯಾಧರ ಜೈನ್, ಸುರೇಶ್ ಅತ್ರಮಜಲು, ಮೋಹನ್ ಪಕ್ಕಳ, ರಾಮಚಂದ್ರ ಮಣಿಯಾಣಿ, ಕಂಗ್ವೆ ವಿಶ್ವನಾಥ ಶೆಟ್ಟಿ, ಪ್ರಸನ್ನ ಮಾರ್ಥ, ಸುಧಾಕರ ಶೆಟ್ಟಿ , ಎನ್. ಉಮೇಶ್ ಶೆಣೈ, ಆದೇಶ ಶೆಟ್ಟಿ, ಸುದರ್ಶನ, ರವಿಂದ್ರ ಆಚಾರ್ಯ, ತಿಮ್ಮಪ್ಪ ಗೌಡ, ಸುನೀಲ್ ಅನಾವು, ಧನಂಜಯ್ ನಟ್ಟಿಬೈಲು, ಶೋಭಾ ದಯಾನಂದ, ರಾಧಾ ಯು. , ಶ್ಯಾಮಲಾ ಶೆಣೈ, ಪುರುಷೋತ್ತಮ ಮುಂಗ್ಲಿಮನೆ, ಲಕ್ಷ್ಮಣ ಗೌಡ ನೆಡ್ಚಿಲು, ಹರೀಶ್ ನಟ್ಟಿಬೈಲ್, ಪ್ರಸಾದ್ ಬಂಡಾರಿ, ದಯಾನಂದ ಸರೋಳಿ, ವಸಂತ ಪಿಜಕ್ಕಳ, ಸುಬ್ರಹ್ಮಣ್ಯ ಅಗರ್ತ, ಸಂತೋಷ್ ಕುಮಾರ್ ಪಂರ್ದಾಜೆ, ಬಾಲಕೃಷ್ಣ ಗೌಡ , ಪ್ರಶಾಂತ್ ನೆಕ್ಕಿಲಾಡಿ, ಲಕ್ಷ್ಮಣ್ ಬೆಳ್ಳಿಪ್ಪಾಡಿ, ಗಂಗಾಧರ ಬಿ.ಎಸ್., ಹರಿರಾಮಚಂದ್ರ ಮೊದಲಾದವರು ಭಾಗವಹಿಸಿದ್ದರು.


ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ , ದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಧಾಕೃಷ್ಣ ನಾಯಕ್, ಸದಸ್ಯರಾದ ದೇವಿದಾಸ್ ರೈ, ಅರ್ತಿಲ ಕೃಷ್ಣ ರಾವ್, ವೆಂಕಪ್ಪ ಪೂಜಾರಿ , ಡಾ ರಮ್ಯ ರಾಜಾರಾಮ್, ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ ಸಂಸದರನ್ನು ಶ್ರೀ ಕ್ಷೇತ್ರದ ವತಿಯಿಂದ ಸ್ವಾಗತಿಸಿದರು. ದೇವಳದ ವ್ಯವಸ್ಥಾಪಕ ವೆಂಕಟೇಶ್ ರಾವ್ , ಪದ್ಮಾನಾಭ ಕುಲಾಲ್, ಕೃಷ್ಣಪ್ರಸಾದ್ ಸಹಕರಿಸಿದರು.

LEAVE A REPLY

Please enter your comment!
Please enter your name here