ಪುತ್ತೂರು: ಬಜತ್ತೂರು ಗ್ರಾಮದ ಮಣಿಕ್ಕಳ ಓಲೆಬಳ್ಳಿ ನಿವಾಸಿ ಕೃಷಿಕ ಶೀನಪ್ಪ ಗೌಡ ಅವರ ಪುತ್ರ ಜಗದೀಶ ಗೌಡ (27ವ.) ಅಲ್ಪ ಕಾಲದ ಅಸೌಖ್ಯದಿಂದ ಫೆ.18ರಂದು ಮುಂಜಾನೆ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತ ಯುವಕ ಕೂಲಿಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಮೃತರು ತಂದೆ ಶೀನಪ್ಪ ಗೌಡ, ತಾಯಿ ಜಾನಕಿ ಹಾಗೂ ತಮ್ಮ ಲೊಕೇಶ್ ಅವರನ್ನು ಅಗಲಿದ್ದಾರೆ.