ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯ

0

ಫೆ.20ರಿಂದ ಮಾ.25ರವರೆಗೆ ಕಾಲಾವದಿ ಜಾತ್ರೆ, ಮಖೆ ಜಾತ್ರೆ ಮತ್ತು ಉತ್ಸವ

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ಕಾಲಾವದಿ ಜಾತ್ರೆ, ಮಖೆ ಜಾತ್ರೆ ಮತ್ತು ಉತ್ಸವಾದಿಗಳು ಫೆ.20ರಿಂದ ಆರಂಭಗೊಂಡು ಮಾ.25ರವರೆಗೆ ವೇ.ಮೂ. ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪವಿತ್ರಪಾಣಿ ಕರಾಯ ವಿಷ್ಣುಮೂರ್ತಿ ಕುದ್ದಣ್ಣಾಯರ ಉಪಸ್ಥಿತಿಯಲ್ಲಿ ಜರಗಲಿದೆ.


ಫೆ.20ರಂದು ಅಷ್ಟಮಿ 1ನೇ ಮಖೆಕೂಟ ನಡೆಯಲಿದ್ದು, ರಾತ್ರಿ 8ರಿಂದ ಬಲಿ ಹೊರಟು ಉತ್ಸವ, ರಥೋತ್ಸವ, ಬಲಿ, ಮಹಾಪೂಜೆ ನಡೆಯಲಿದೆ. ಫೆ.21ರಂದು ಪ್ರಾತಃಕಾಲದಲ್ಲಿ ತೀರ್ಥಸ್ನಾನ, ಬೆಳಗ್ಗೆ 7:30ರಿಂದ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಫೆ.24ರಂದು ಶ್ರೀ ದೇವರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಪೂರ್ವಾಹ್ನ ಗಣಪತಿ ಹೋಮ, ಶತರುದ್ರಾಭಿಷೇಕ, ಸೀಯಾಳಾಭಿಷೇಕ, ಚಂಡಿಕಾ ಹೋಮ, ಅನ್ನಸಂತರ್ಪಣೆ ನಡೆಯಲಿದೆ.


ಫೆ.26ರಂದು ಮಹಾಶಿವರಾತ್ರಿ ಎರಡನೇ ಮಖೆಕೂಟ ನಡೆಯಲಿದ್ದು, ರಾತ್ರಿ 8ರಿಂದ 9ರವರೆಗೆ ರುದ್ರಪಾರಾಯಣ, ಬಲಿ ಹೊರಟು ಉತ್ಸವ, ಮಹಾಪೂಜೆ ನಡೆಯಲಿದೆ. ಫೆ.27ರಂದು ಪ್ರಾತಃಕಾಲದಲ್ಲಿ ತೀರ್ಥಸ್ನಾನ, ಬೆಳಗ್ಗೆ 6:30ರಿಂದ ಬಲಿ ಹೊರಟು ರಥೋತ್ಸವ, ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಡುವುದು, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಮಾ.11ರಂದು ಬೆಳಗ್ಗೆ 7:30ಕ್ಕೆ ಧ್ವಜಾಹೋರಣ, ಸಂಜೆ 7ರಿಂದ ಉತ್ಸವ, ಮಾ.12ರಂದು ಬೆಳಗ್ಗೆ ಉತ್ಸವ, ಸಂಜೆ 7ರಿಂದ ಉತ್ಸವ ನಡೆಯಲಿದೆ.


ಮಾ.13ರಂದು ಹುಣ್ಣಿಮೆ 3ನೇ ಮಖೆಕೂಟ ನಡೆಯಲಿದ್ದು, ರಾತ್ರಿ 8:30ರಿಂದ ಬಲಿ ಹೊರಟು ಉತ್ಸವ, ಬ್ರಹ್ಮರಥ ಸೇವೆ, ರಥೋತ್ಸವ, ಬಲಿ, ಮಹಾಪೂಜೆ ನಡೆಯಲಿದೆ. ಮಾ.14ರಂದು ಪ್ರಾತಃಕಾಲ ತೀರ್ಥಸ್ನಾನ, ಬೆಳಗ್ಗೆ 7:30ರಿಂದ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಡುವುದು, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 7ರಿಂದ ಉತ್ಸವ ನಡೆಯಲಿದೆ. ಮಾ.15ರಿಂದ ಉತ್ಸವ, ಸಂಜೆ 7ರಿಂದ ಉತ್ಸವ, ಮಾ.16ರಿಂದ ಬೆಳಗ್ಗೆ ಉತ್ಸವ, ಸಂಜೆ 7ರಿಂದ ಉತ್ಸವ, ಶ್ರೀ ದೇವರ ಶಯನೋತ್ಸವ ನಡೆಯಲಿದೆ.

ಮಾ.17ರಂದು ಬೆಳಗ್ಗೆ 6ರಿಂದ ಕವಾಟೋದ್ಘಾಟನೆ, ಸಂಜೆ 7ರಿಂದ ದೇವರು ಬಲಿ ಹೊರಟು ರಥಬೀದಿಯಿಂದ ಹಳೆ ಬಸ್ ನಿಲ್ದಾಣದವರೆಗೆ ಹೋಗಿ ಕಟ್ಟೆಪೂಜೆಯಾಗಿ ಸರಕಾರಿ ಪ್ರಾಥಮಿಕ ಶಾಲಾ ಮಾರ್ಗವಾಗಿ ಬಂದು ಸಂಗಮದಲ್ಲಿ ಅವಭೃತ ಸ್ನಾನವಾಗಿ ಧ್ವಜಾವರೋಹಣ ನಡೆಯಲಿದೆ. ಮಾ.21ರಂದು ರಾತ್ರಿ ಮಹಾಕಾಳಿ ಮೆಚ್ಚಿ ನಡೆಯಲಿದ್ದು, ರಾತ್ರಿ 9ರಿಂದ ಅನ್ನ ಸಂತರ್ಪಣೆ ನಡೆಯಲಿದೆ. ಮಾ.25ರಂದು ರಾತ್ರಿ 8ಕ್ಕೆ ಕದಿಕ್ಕಾರು ಬೀಡಿನಿಂದ ಭಂಡಾರ ಬಂದು ದೇವಾಲಯದ ಸಂತೆ ಮಜಲಿನಲ್ಲಿ ದೊಂಪದ ಬಲಿ ನೇಮೋತ್ಸವ ನಡೆಯಲಿದೆ.


ಸಾಂಸ್ಕೃತಿಕ ಕಾರ್ಯಕ್ರಮಗಳು:
ಫೆ.20ರಂದು ರಾತ್ರಿ 7ರಿಂದ ಸಾನ್ಸಿ ಮೆಲೋಡಿಸ್ (ಪುಷ್ಪಾಂಜಲಿ) ರಾಮನಗರ ಇವರಿಂದ ಭಕ್ತಿ ಭಾವ ಗಾನವೈಭವ, ರಾತ್ರಿ 10:30ರಿಂದ ಉಪ್ಪಿನಂಗಡಿಯ ರಂಗಸಂಗಮ ಕಲಾವಿದರಿಂದ ‘ವಸಂತಿಯಕ್ಕ ಓಲ್ಲೆರ್‌ಗೆ…? ತುಳು ಹಾಸ್ಯಮಯ ನಾಟಕ ನಡೆಯಲಿದೆ. ಫೆ.24ರಂದು ಸಂಜೆ 3ರಿಂದ ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಕಲಾ ಸೇವಾ ಸಂಘದ ವತಿಯಿಂದ ‘ಕುಮುದಾಕ್ಷಿ ಕಲ್ಯಾಣ’ ತಾಳಮದ್ದಳೆ ಜರಗಲಿದೆ.

ಫೆ.26ರಂದು ರಾತ್ರಿ 7ರಿಂದ ನಟೆವರ್ ನೃತ್ಯ ಸಂಗೀತ್ ಪೆರಿಯಡ್ಕ ಇವರಿಂದ ಭಕ್ತಿ- ಭಜನ್- ಸಂಗೀತ ನಡೆಯಲಿದ್ದು, ರಾತ್ರಿ 10ರಿಂದ ಯಕ್ಷನಂದನ ಕಲಾ ಸಂಘ ಗೋಕುಲನಗರ ಇವರಿಂದ ‘ಭಾರತರತ್ನ- ಸೌದಾಸ ಚರಿತ್ರೆ’ ಯಕ್ಷಗಾನ ಬಯಲಾಟ ನಡೆಯಲಿದೆ. ಮಾ.1ರಂದು ಸಂಜೆ 6ರಿಂದ ಟೀಂ ದಕ್ಷಿಣ ಕಾಶಿ ಇವರಿಂದ ಉಬಾರ್ ಉತ್ಸವ ನಡೆಯಲಿದ್ದು, ಮಾ.13ರಂದು ಸಂಜೆ 6:30ರಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಉಪ್ಪಿನಂಗಡಿ ಘಟಕದಿಂದ ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಇವರಿಂದ ಶ್ರೀ ದೇವಿ ಲಲಿತೋಪಖ್ಯಾನ ಯಕ್ಷಗಾನ ಬಯಲಾಟ ನಡೆಯಲಿದೆ.

ಮಾ.21ರಂದು ಸಂಜೆ 7:30ರಿಂದ ಪುತ್ತೂರಿನ ಯಕ್ಷಶ್ರೀ ಹವ್ಯಾಸಿ ಬಳಗದವರಿಂದ ತಾಳಮದ್ದಳೆ ನಡೆಯಲಿದ್ದು, ಮಾ.25ರಂದು ರಾತ್ರಿ 7:30ರಿಂದ ಗಯಾಪದ ಕಲಾವಿದೆರ್ ಉಬಾರ್ ಇವರಿಂದ ‘ನಾಗ ಮಾಣಿಕ್ಯ’ ಚಾರಿತ್ರಿಕ ಪೌರಣಿಕ ನಾಟಕ ನಡೆಯಲಿದೆ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆ. ರಾಧಾಕೃಷ್ಣ ನಾಯ್ಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here