ಪುತ್ತೂರು: ಕನಕಮಜಲಿನಲ್ಲಿ ವಾಹನ ಡಿಕ್ಕಿಯಾಗಿ ಇರ್ವರ ಸಾವಿಗೆ ಕಾರಣವಾಗಿದ್ದ ಆರೋಪಿ, ಇಕೋ ವಾಹನ ಚಾಲಕ ಅವ್ಯಕ್ತ ರಾಮಕೃಷ್ಣ ಭಟ್ ಅವರು ನಿನ್ನೆ ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ಕಚೇರಿಗೆ ಹಾಜರಾಗಿದ್ದು, ಆತನನ್ನು ಪೊಲೀಸ್ ಠಾಣೆಯಲ್ಲಿ ಜಾಮೀನು ಪಡೆದು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಫೆ.8 ರಂದು ರಾತ್ರಿ ಅಪಘಾತ ನಡೆದಿತ್ತು. ಗುದ್ದಿ ವಾಹನವನ್ನು ಪಾದಚಾರಿಗಳಾದ ಜನಾರ್ದನ ರೈ ಮತ್ತು ರಾಮಯ್ಯ ರೈ ಯವರಿಗೆ ಗುದ್ದಿ ನಿಲ್ಲಿಸದೆ ಪರಾರಿಯಾಗಿದ್ದ ಅವ್ಯಕ್ತ ಸುಳ್ಯ ಬೀರಮಂಗಲದಲ್ಲಿರುವ ತನ್ನ ಮನೆಗೆ ಬಂದು ವಾಹನ ನಿಲ್ಲಿಸಿ ಮರುದಿನ ಪೊಲೀಸರು ಸಿ.ಸಿ. ಕ್ಯಾಮರಾ ಪರಿಶೀಲನೆ ನಡೆಸಿದ ಬಳಿಕ ವಾಹನ ಯಾರದೆಂದು ಪತ್ತೆ ಹಚ್ಚಿ ಅವರ ಮನೆಗೆ ಬರುವ ವೇಳೆಗೆ ಊರು ಬಿಟ್ಟು ಪರಾರಿಯಾಗಿದ್ದರು. ಆತ ಗೋವಾ, ಮುಂಬೈ ಮೊದಲಾದೆಡೆಗೆ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದರು.
ಆ ಬಳಿಕ ನಿನ್ನೆ ಸಂಜೆ ಲಾಯರ್ ಜತೆ ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ಕಚೇರಿಗೆ ಬಂದು ಹಾಜರಾದ ಆತನನ್ನು ಠಾಣೆಯಲ್ಲಿ ಜಾಮೀನು ಪಡೆದು ಬಿಡುಗಡೆಗೊಳಿಸಲಾಯಿತೆಂದೂ, ಪೊಲೀಸರು ಆತನ ಡ್ರೈವಿಂಗ್ ಲೈಸೆನ್ಸ್ ಮುಟ್ಟುಗೋಲು ಹಾಕಿಕೊಂಡಿರುವುದಾಗಿಯೂ ತಿಳಿದು ಬಂದಿದೆ.