ಪುತ್ತೂರು: ಜೈ ತುಲುನಾಡ್ ಕೇಂದ್ರ ಸಮಿತಿ ವತಿಯಿಂದ ದರ್ಬೆತ್ತಡ್ಕ ಕುಂಟಾಪು ಧರ್ಮದೈವ ಮತ್ತು ಪರಿವಾರ ದೈವಗಳ ದೈವಸ್ಥಾನದ ದೈವಗಳ ಪುನಃ ಪ್ರತಿಷ್ಠಾ ಕಾರ್ಯಕ್ರಮದಲ್ಲಿ “ಬಲೆ ತುಲು ಲಿಪಿ ಟ್ ಪುದರ್ ಬರೆಕ” ಕಾರ್ಯಕ್ರಮ ಫೆ.16ರಂದು ನಡೆಯಿತು.
ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುತ್ಯಾಡಿ ತುಲು ಲಿಪಿಯಲ್ಲಿ ಹೆಸರು ಬರೆದು ಉದ್ಘಾಟಿಸಿದರು. ಧಾರ್ಮಿಕ ಸಭಾ ಕಾರ್ಯಕ್ರಮದ ಅತಿಥಿಗಳಾದ ಶ್ರೀಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಖ್ಯಾತ ಕ್ಯಾನ್ಸರ್ ತಜ್ಞ ಡಾ.ರಘು ಬೆಳ್ಳಿಪ್ಪಾಡಿ, ಉಳ್ಳಾಲದ ಉಪ ತಹಶೀಲ್ದಾರ್ ವಿಜಯ ವಿಕ್ರಮ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ದುರ್ಗಾಪ್ರಸಾದ್ ರೈ ಕುಂಬ್ರ, ಸುಳ್ಯ ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಲ್ಲತ್ತಡ್ಕ, ಕರಾಟೆ ಶಿಕ್ಷಕ ಶೇಖರ್ ಬಿ. ಮಾಡಾವು ಸೇರಿದಂತೆ ಅನೇಕ ಗಣ್ಯರು ಮತ್ತು ತರವಾಡು ಕುಟುಂಬಸ್ಥರು ಲಿಪಿಯಲ್ಲಿ ತಮ್ಮ ಹೆಸರನ್ನು ಬರೆದು ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಜೈ ತುಲುನಾಡ್ ಕೇಂದ್ರ ಸಮಿತಿಯ ಜೊತೆ ಸಂಘಟನಾ ಕಾರ್ಯದರ್ಶಿ ಮತ್ತು ಶಿಕ್ಷಕಿ ಚಿತ್ರಾಕ್ಷಿ ಮುಗೇರ ತೆಗ್ಗು, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸುಕೇಶ್ ಗೌಡ ಪುತ್ತೂರು, ಜೈ ತುಲುನಾಡ್ ಕುಡ್ಲ ವಲಯದ ಕಾರ್ಯಕಾರಿ ಸಮಿತಿ ಸದಸ್ಯ ಶರತ್‌ರಾಜ್ ನಡೆಸಿಕೊಟ್ಟರು.