ಪುತ್ತೂರು: ಕೆಟಿಎಂ ಬೈಕೊಂದು ಹಿಂಬದಿಯಿಂದ ಡಿಕ್ಕಿಯಾಗಿ ಜ್ಯುಪಿಟರ್ ಸ್ಕೂಟರ್ ಸವಾರ ಸಾವಿಗೀಡಾಗಿದ್ದ ಪ್ರಕರಣದಲ್ಲಿ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದ ಕೆಟಿಎಂ ಸವಾರನನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಅರಿಯಡ್ಕ ಗ್ರಾಮದ ಅಮೈ ಕೊಲ್ಲಾಜೆ ಎಂಬಲ್ಲಿ 2021ರ ದ.20ರಂದು ಬೆಳಿಗ್ಗೆ ಅಪಘಾತ ಸಂಭವಿಸಿತ್ತು. ಕೆಟಿಎಂ ಮೋಟಾರ್ ಸೈಕಲ್ ಜ್ಯುಪಿಟರ್ ಸ್ಕೂಟರ್‌ಗೆ ಹಿಂಬದಿಯಿಂದ ಡಿಕ್ಕಿಯಾಗಿದ್ದರಿಂದ ಸ್ಕೂಟರ್ ಸಮೇತ ಮಗುಚಿ ಬಿದ್ದು ಉಂಟಾದ ಗಾಯದಿಂದ ಸ್ಕೂಟರ್ ಸವಾರ ಸಂಪಾಜೆ ಕಲ್ಲುಗುಂಡಿ ನೆಲ್ಲಿಕುಮೇರು ಕಾಲನಿ ಮುತ್ತುಸ್ವಾಮಿ ಎಂಬವರ ಮಗ ಸೆಲ್ವ ಕುಮಾರ್ (43ವ.)ರವರು ಮೃತಪಟ್ಟಿದ್ದರು.
ಘಟನೆಗೆ ಸಂಬಂಧಿಸಿ ಕೆಟಿಎಂ ಬೈಕ್ ಸವಾರ ಧನುಷ್ ಎಂಬವರ ವಿರುದ್ಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ದೇವರಾಜ್ ಅವರು ಆರೋಪಿ ಧನುಷ್ ದೋಷಮುಕ್ತ ಎಂದು ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.ಆರೋಪಿ ಪರ ವಕೀಲರಾದ ಶ್ರೀಹರಿ,ಪ್ರಸಾದ್ ಕುಮಾರ್,ಪ್ರವೀಣ್ ಬಂಬಿಲ, ಉಲ್ಲಾಸ್ ವಾದಿಸಿದ್ದರು.