ಪುತ್ತೂರು:ಇತ್ತೀಚೆಗೆ ಕನಕಮಜಲಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಬೆಟ್ಟಂಪಾಡಿಯ ರಾಮಯ್ಯ ರೈ ಮತ್ತು ಅವರ ಅಳಿಯ ಜನಾರ್ಧನ ರೈ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಮೂಲಕ ತಂದೆಯನ್ನು ಕಳೆದುಕೊಂಡ ಬಿಕಾಂ ವಿದ್ಯಾರ್ಥಿನಿ ಹಿತಶ್ರೀ ಅವರಿಗೆ ವಿದ್ಯಾಭ್ಯಾಸದ ಸಹಾಯಾರ್ಥಯಾಗಿ ಕುಂಬ್ರ ಆಶಾದೀಪ ಸಹಾಯ ಹಸ್ತ ಟ್ರಸ್ಟ್ ಗೆ ಆರ್ಲಪದವು ಅನಿಲ್ ಕುಟಿನ್ನ ಅವರು ಕೊಡಮಾಡಿದ ರೂ 10000/ (ಹತ್ತು ಸಾವಿರ ) ವನ್ನು ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಆಶಾ ದೀಪ ಸಹಾಯ ಹಸ್ತ ಟ್ರಸ್ಟ್ ನ ಅಧ್ಯಕ್ಷ ಶ್ಯಾಮ್ ಸುಂದರ್ ರೈ ಕೊಪ್ಪಳ, ಕೋಶಾಧಿಕಾರಿ ಸಂಶುದ್ದೀನ್ ಎ.ಆರ್, ಉಪಾಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ, ಪ್ರಧಾನ ಕಾರ್ಯದರ್ಶಿ ಮೆಲ್ವಿನ್ ಮೊಂತೆರೋ ಉಪಸ್ಥಿತರಿದ್ದರು.