ಕಾಣಿಯೂರು: ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಹಸುಗಳಿಗೆ ಸಾಮೂಹಿಕ ಜಂತುಹುಳ ಔಷಧಿ ನೀಡುವ ಕಾರ್ಯಕ್ರಮವು ಫೆ 20 ರಂದು ನಡೆಯಿತು.
ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಕಲ್ಲೂರಾಯ ಅವರು ಪ್ರಕಾಶ್ ಮುದುವ ಇವರ ಹಸುಗಳಿಗೆ ಔಷಧಿ ನೀಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರರಾದ ವಸಂತ ದಲಾರಿ, ಸಂಘದ ಕಾರ್ಯದರ್ಶಿ ದಮಯಂತಿ ಮದುವ, ಸಿಬ್ಬಂದಿಗಳಾದ ನಿಶ್ಚಿತ್, ತಿಲಕ್, ಉಪಸ್ಥಿತರಿದ್ದರು.