ನಿಡ್ಪಳ್ಳಿ: ಇಲ್ಲಿಯ ಶ್ರೀ ಶಾಂತದುರ್ಗಾ ದೇವಿಯ ಪ್ರತಿಷ್ಟಾ ಉತ್ಸವ ಹಾಗೂ ಜಾತ್ರೋತ್ಸವ ಮಾ.13 ರಂದು ನಡೆಯಲಿದ್ದು ಅದರ ಆಮಂತ್ರಣ ಪತ್ರ ಬಿಡುಗಡೆ ಫೆ.19 ರಂದು ದೇವಸ್ಥಾನದಲ್ಲಿ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ನವೀನ್ ಹೆಬ್ಬಾರ್ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥಿಸಿ, ಬಿಡುಗಡೆ ಮಾಡಿದರು.
ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ರೈ ಕೊಪ್ಪಳ, ಕಾರ್ಯದರ್ಶಿ ಕುಮಾರ ನರಸಿಂಹ ಭಟ್, ಸದಸ್ಯರಾದ ನಾಗೇಶ ಗೌಡ ಪುಳಿತ್ತಡಿ , ರಾಮಚಂದ್ರ ಮಣಿಯಾಣಿ ಬೊಳುಂಬುಡೆ ಹಾಗೂ ರಾಧಾಕೃಷ್ಣ ರೈ ಪಟ್ಟೆ, ಸುನೀಲ್ ಕುಮಾರ್ ಕೊಪ್ಪಳ, ವಿಶ್ವೇಶ್ವರ ಭಟ್ ಮುಂಡೂರು ಉಪಸ್ಥಿತರಿದ್ದರು.