ಫೆ.22:ಪುತ್ತೂರು ತ್ರಿಶೂಲ್ ಫ್ರೆಂಡ್ಸ್‌ರವರಿಂದ ಕಿಲ್ಲೆ ಮೈದಾನದಲ್ಲಿ ಅಹರ್ನಿಶಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

0

ಆಯ್ದ ತಾಲೂಕಿನ 8/ಮುಕ್ತ 8 ತಂಡಗಳ ಬಿಗ್ ಫೈಟ್ | ನಾಕೌಟ್ ಪಂದ್ಯಾಟ

ಪುತ್ತೂರು: ತ್ರಿಶೂಲ್ ಫ್ರೆಂಡ್ಸ್ ಪುತ್ತೂರು ಇದರ ಸಹಯೋಗದಲ್ಲಿ ಪುತ್ತೂರು ತಾಲೂಕಿನ ಎಂಟು ಬಲಿಷ್ಟ ತಂಡಗಳು ಜೊತೆಗೆ ಮುಕ್ತ ಎಂಟು ತಂಡಗಳ ನಿಗದಿತ ಓವರ್‌ಗಳ, ನಾಕೌಟ್ ಮಾದರಿಯ ಅಹರ್ನಿಶಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಫೆ.22 ರಂದು ಕಿಲ್ಲೆ ಮೈದಾನದಲ್ಲಿ ನಡೆಯಲಿದೆ.


ವಿಜೇತ ತಂಡಕ್ಕೆ ರೂ.50 ಸಾವಿರ ನಗದು ಹಾಗೂ ತ್ರಿಶೂಲ್ ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ.25 ಸಾವಿರ ನಗದು ಹಾಗೂ ತ್ರಿಶೂಲ್ ಟ್ರೋಫಿ ಇದರ ಜೊತೆಗೆ ಸರಣಿಶ್ರೇಷ್ಟ, ಉತ್ತಮ ಬ್ಯಾಟರ್, ಉತ್ತಮ ಬೌಲರ್, ಉತ್ತಮ ಕ್ಷೇತ್ರರಕ್ಷಕ, ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಂಜೆ ಜರಗಲಿದೆ.


ಬೆಳಿಗ್ಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯರವರು ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಪುತ್ತೂರು ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಆಂಜನೇಯ ರೆಡ್ಡಿ, ಪುತ್ತೂರು ನಗರಸಭೆ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕೃಷ್ಣನಗರ, ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಆಡಳಿತ ಮೊಕ್ತೇಸರ ಸಂಜೀವ ಪೂಜಾರಿ ಕೂರೇಲು, ಹೊಟೇಲ್ ಅಶ್ವಿನಿ ಮಾಲಕ ಕರುಣಾಕರ ರೈ ದೇರ್ಲ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ವಿನಾಯಕ ಅಲ್ಯೂಮಿನಿಯಂನ ನವೀನ್ ಪುತ್ತೂರು, ನೋಟರಿ ಹಾಗೂ ನ್ಯಾಯವಾದಿಗಳಾದ ಭಾಸ್ಕರ ಗೌಡ ಕೋಡಿಂಬಾಳ, ಚಿದಾನಂದ ಬೈಲಾಡಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು, ಪುತ್ತೂರು ಮಾಯಿದೆ ದೇವುಸ್ ಚರ್ಚ್ ನಿಕಟಪೂರ್ವ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಎ.ವಿ.ಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಸಂಚಾಲಕ ಎ.ವಿ ನಾರಾಯಣ, ಪಿಪಿಎಲ್ ಆಯೋಜಕ ಭಾನುಪ್ರಕಾಶ್, ಅಮರ್ ಅಕ್ಬರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿ ಸ್ಥಾಪಕ ರಝಾಕ್ ಬಿ.ಎಚ್ ಬಪ್ಪಳಿಗೆ, ಎಎಫ್‌ಸಿ ಫ್ರೆಂಡ್ಸ್ ಕ್ಲಬ್‌ನ ಶರತ್ ಕೇಪುಳು, ಕೋರ್ಟ್‌ರಸ್ತೆ ಪಂಚಮುಖಿ ಫ್ರೆಂಡ್ಸ್‌ನ ಪ್ರವೀಣ್ ಆಚಾರ್ಯ, ಶಿವಕೃಪಾ ಜನರಲ್ ಸ್ಟೋರ್ ಮಾಲಕ ನಾಗೇಶ್ ರಾವ್‌ರವರು ಉಪಸ್ಥಿತಲಿದ್ದಾರೆ.


ಸಮಾರೋಪ ಸಮಾರಂಭ:
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಪುತ್ತೂರು ನಗರ ಪೊಲೀಸ್ ಠಾಣೆಯ ನಿರೀಕ್ಷಕ ಜಾನ್ಸನ್ ಡಿ’ಸೋಜ, ದರ್ಬೆ ಆರ್‌ಇಬಿ ಎಂಕ್ಲೇವ್ ಜಂಕ್ಷನ್‌ನ ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್ ಸೀತಾರಾಮ ರೈ ಕೆದಂಬಾಡಿಗುತ್ತು, ಕರ್ನಾಟಕ ಸರಕಾರ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ಶ್ರೀಮತಿ ದಿವ್ಯಪ್ರಭಾ ಗೌಡ ಚಿಲ್ತಡ್ಕ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬೆಂಗಳೂರು ಎಂ.ಆರ್ ಗ್ರೂಪ್ಸ್‌ನ ಮನ್ವಿತ್ ರೈ ಓಲೆಮುಂಡೋವು, ಬೆಂಗಳೂರು ಉದ್ಯಮಿ ಗೌರವ್ ಶೆಟ್ಟಿ ನೆಲ್ಲಿಕಟ್ಟೆ, ಸಿಝ್ಲರ್ ಪುತ್ತೂರ್‌ನ ಪ್ರಸನ್ನ ಕುಮಾರ್ ಶೆಟ್ಟಿ, ಅಜಿತ್ ರೈ ಸೊರಕೆ ಬೆಂಗಳೂರು, ಪುತ್ತೂರು ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಹೊಟೇಲ್ ಅಶ್ವಿನಿಯ ಅಶ್ವಿನ್ ರೈ, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ್ ಶೆಟ್ಟಿ ಉಜಿರೆಮಾರು, ಹಿಂದೂ ಮುಖಂಡ ಮುರಳೀಕೃಷ್ಣ ಭಟ್ ಹಸಂತಡ್ಕ, ಕಾಮಧೇನು ಗ್ರೂಪ್ಸ್ ಎಂ.ಡಿ ಮಾಧವ ಗೌಡ, ನ್ಯಾಯವಾದಿ ಚಿನ್ಮಯ್ ಈಶ್ವರಮಂಗಲ, ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಕ.ರ.ವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಟೆಂಪಲ್ ಆರ್ಕಿಟೆಕ್ಚರ್ ರಾಜೇಂದ್ರ, ಪುತ್ತೂರು ಕಿಲ್ಲೆ ಮೈದಾನ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಭಿಜಿತ್ ಶೆಟ್ಟಿ, ಯುವ ಉದ್ಯಮಿ ರಂಜಿತ್ ಬಂಗೇರರವರು ಭಾಗವಹಿಸಲಿದ್ದಾರೆ ಎಂದು ತ್ರಿಶೂಲ್ ಫ್ರೆಂಡ್ಸ್ ಪ್ರಕಟಣೆ ತಿಳಿಸಿದೆ.

ಮುಕ್ತ ಪೂಲ್..
-ಮಹಾಲಿಂಗೇಶ್ವರ ಕಾರ್ಕಳ
-ಜೆಡಿ ಬಾಯ್ಸ್ ಬಂಟ್ವಾಳ
-ಕೆಜಿಎಫ್ ಕೈಕಂಬ
-ಇಚ್ಛಾ ಲಯನ್ಸ್ ಬಪ್ಪಳಿಗೆ
-ಎಸ್‌ಎಂಡಿ ಅರ್ಕ
-ಝಮಾನ್ ಬಾಯ್ಸ್ ಕಲ್ಲಡ್ಕ
-ಬ್ರದರ್ಸ್ ಕೂರ್ನಡ್ಕ
-ಡಮ್ಮಿ

ಲೋಕಲ್ ಪೂಲ್..
-ಎನ್‌ಎಫ್‌ಸಿ ಕುಂಬ್ರ
-ಬಿಶಾರಾ ಕೋಲ್ಫೆ
-ಸ್ವಾತಿ ಪಡೀಲು
-ಪಟ್ಲ ಫ್ರೆಂಡ್ಸ್ ಕಲ್ಲೇಗ
-ಇಚ್ಛಾ ಲಯನ್ಸ್ ಬಪ್ಪಳಿಗೆ
-ಟಿಪಿಸಿ ಮುಕ್ವೆ
-ಎಸ್೨ಎನ್‌ಎನ್ ಉರ್ಲಾಂಡಿ
-ಪರ್ಲ್ ಸಿಟಿ ಪುತ್ತೂರು

LEAVE A REPLY

Please enter your comment!
Please enter your name here