ದಕ್ಷಿಣ ಕನ್ನಡ ಮ್ಯೂಚುಯಲ್ ಬೆನಿಫಿಟ್ ನಿಧಿ ಲಿಮಿಟೆಡ್ ನ 4ನೇ ವರ್ಷದ ಯಶಸ್ವಿ ಪ್ರಯಾಣ- ಸಂಭ್ರಮಾಚರಣೆ

0

ಪುತ್ತೂರು: ಭಾರತ ಸರ್ಕಾರದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ನೊಂದಾಯಿಸಲಾದ ದ.ಕ ಮ್ಯೂಚುವಲ್‌ ಬೆನಿಫಿಟ್ ನಿಧಿ ಲಿಮಿಟೆಡ್ ಸಂಸ್ಥೆಯ 4ನೇ ವರ್ಷದ ಸಂಭ್ರಮಾಚರಣೆ ಪುತ್ತೂರು ಶಾಖೆಯಲ್ಲಿ ಜರಗಿತು.

ಈ ಸಂದರ್ಭದಲ್ಲಿ ಪುತ್ತೂರಿನ ಇನ್ನೊಂದು ಕಮರ್ಶಿಯಲ್ ಕಾಂಪ್ಲೆಸ್ಕ್‌ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಖೆಯಲ್ಲಿ ದೀಪ ಉದ್ಘಾಟಿಸುವುದರ ಮೂಲಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸ್ಥಾಪಕ ಸದಸ್ಯರಾದ ಆಲ್ವಿನ್ ಜೋಯಲ್ ನೆರೊನ್ಡಾ ವಹಿಸಿ ಮಾತನಾಡಿ, ನಮ್ಮ ಸಂಸ್ಥೆಯು ಫೆ.19 2001 ರಲ್ಲಿ ಪ್ರಾರಂಭಗೊಂಡು ಇದೀಗ ನಾಲ್ಕು ವರ್ಷಗಳ ಯಶಸ್ಸಿನ ಪಯಣವನ್ನ ಪೂರ್ಣಗೊಳಿಸಿ 5ನೇ ವರ್ಷಕ್ಕೆ ದಾಪುಗಾಲಿಡುತ್ತಿದೆ. ಪಾರದರ್ಶಕ ವ್ಯವಹಾರ, ವಿಶ್ವಾಸಾರ್ಹ ಸೇವೆ ನೀಡಿದ ಕಾರಣ ಡಿ.ಕೆ ಗ್ರೂಪ್‌ ಆಫ್‌ ಕಂಪನಿಸ್-‌ ಮಂಗಳೂರು ಇಂದು ಬ್ಯಾಂಕೇತರ ಹಣಕಾಸು ವಲಯ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದೆ. 4 ವರ್ಷಗಳಲ್ಲಿ 11 ಶಾಖೆಗಳನ್ನು ತೆರೆದು 7000 ಮಿಕ್ಕಿ ಗ್ರಾಹಕರನ್ನು ಹೊಂದಿರುವ ಸಂಸ್ಥೆ ಮುಂದಿನ 5 ವರ್ಷಗಳಲ್ಲಿ ಒಟ್ಟು 100 ಶಾಖೆಗಳನ್ನು ತೆರೆದು ಸಾವಿರ ಕೋ.ರೂ ವಹಿವಾಟು ನಡೆಸಲು ಮುಂದಾಗಿದೆ ಎಂದರು.

ಕಾರ್ಯಕ್ರಮ ಆತಿಥ್ಯವನ್ನು ವಹಿಸಿದ ವಾಗ್ಮಿ, ಚಿಂತಕ, ಧಾರ್ಮಿಕ ಮುಖಂಡ ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿ, ನಗುಮೊಗದ ಸೇವೆ ಮತ್ತು ಪ್ರಾಮಾಣಿಕ ಸೇವೆಯೇ ಗ್ರಾಹಕರಿಗೆ ನೀಡುವ ಅತ್ಯಮೂಲ್ಯ ಸೇವೆ ಎಂದು ಹೇಳಿದರು. ಇನ್ನೋರ್ವ ಅತಿಥಿ, ಮಧ್ಯಸ್ಥರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮನ್ಮಥ ಶೆಟ್ಟಿ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರ ದಕ್ಷಿಣ ಕನ್ನಡದವರ ರಕ್ತದಲ್ಲಿ ಬಂದ ಉದ್ಯಮ. ಈ ಒಂದು ಸಂಸ್ಥೆ ಕರ್ನಾಟಕದಾದ್ಯಂತ ಬೆಳೆಯಲಿ ಎಂದರು.

ವೇದಿಕೆಯಲ್ಲಿ ಕಡಬ ಶಾಖಾಧ್ಯಕ್ಷರು ಸತೀಶ್‌ ನಾಯಕ್‌ ಮತ್ತು ಪುತ್ತೂರು ಶಾಖಾಧ್ಯಕ್ಷ ಪುನೀತ್‌ ವಿ ಜೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಖಾ ಉಪಾಧ್ಯಕ್ಷ ಮಾಲತಿ ಹಾಗೂ ಡಿ.ಜಿ. ಯ್‌ ವಿನ್ಸನ್‌ ಮತ್ತು ಎಂ ಜೋಯ್ಲಿನ್‌ ಥಾಮಸ್‌, ಶಾಖಾ ಸಿಬ್ಬಂದಿಗಳಾದ ಹರ್ಷಿತ, ಅಶ್ವಿತ್‌, ವೀಕ್ಷಿತಾ, ಪೂಜಾ, ಸುಶ್ಮಿತಾ, ಸಂಜಯ್‌ ಉಪಸ್ಥಿತರಿದ್ದರು. ಶಾಖಾಧ್ಯಕ್ಷ ಪುನೀತ್‌ ವಿ ಜೆ ವಂದಿಸಿ, ಪುನೀತ್‌ ಕುಮಾರ್‌ ಕೆ.ವಿ ಕಾರ್ಯಕ್ರಮ ನಿರೂಪಿಸಿದರು.

4ನೇ ವರ್ಷದ ಸಂಭ್ರಮ ಆಚರಣೆಯ ಪ್ರಯುಕ್ತ FD ಯಲ್ಲಿ 12% ಹಾಗೂ ಹಿರಿಯ ನಾಗರಿಕರಿಗೆ 0.5% ಹೆಚ್ಚಿನ ಆಕರ್ಷಕ ಬಡ್ಡಿದರ ಲಭ್ಯವಿದೆ. ಹಾಗೂ ಮಾಸಿಕ ಆದಾಯ ವಿನಿಮಯ ಮಿತಿ 12.5% ಬಡ್ಡಿದರ ಈ ತಿಂಗಳ 28/02/2025 ರ ವರೆಗೆ ಲಭ್ಯವಿದೆ. ಹಾಗೂಈ RO, DD ಗಳ ಮೇಲೆ ಉತ್ತಮ ಬಡ್ಡಿದರ ನೀಡಲಾಗುತ್ತಿದ್ದೆ. ಪಿಗ್ಮಿ ಆದಾರದ ಮೇಲೆ ಸಾಲ ಸೌಲಭ್ಯವಿದೆ.

LEAVE A REPLY

Please enter your comment!
Please enter your name here