ಉಪ್ಪಿನಂಗಡಿಯಲ್ಲಿ ಅಷ್ಟಮಿ 1ನೇ ಮಖೆಕೂಟ : ಶ್ರೀ ದೇವರ ಭಕ್ತಿ ಸಡಗರದ ರಥೋತ್ಸವ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ಅಷ್ಟಮಿ ಒಂದನೇ ಮಖೆ ಜಾತ್ರೆಯ ಪ್ರಯುಕ್ತ ಗುರುವಾರದಂದು ರಾತ್ರಿ ಭಕ್ತಿ ಸಡಗರದ ರಥೋತ್ಸವವು ಜರಗಿತು.


ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದು, ಬಲಿ ಹೊರತು ಉತ್ಸವವು ಜರಗಿತು. ಬಳಿಕ ಶ್ರೀ ದೇವರು ರಥಾರೂಢರಾಗಿ ರಥ ಬೀದಿಯಲ್ಲಿ ರಥೋತ್ಸವವು ನಡೆಯಿತು. ಬಳಿಕ ಬಲಿ ಉತ್ಸವ ಜರಗಿ ಮಹಾಪೂಜೆ ನಡೆಯಿತು.


ಶುಕ್ರವಾರ ನಸುಕಿನಿಂದಲೇ ನದಿ ಸಂಗಮ ಸ್ಥಳದಲ್ಲಿ ಮಖೆ ತೀರ್ಥ ಸ್ನಾನವು ನೂರಾರು ಭಕ್ತರಿಂದ ನಡೆಯಿತು. ಬಳಿಕ ದೇವಾಲಯದಲ್ಲಿ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ಮಹಾಪೂಜೆ ನಡೆಯಿತು. ಬಳಿಕ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆಯು ಜರಗಿತು.


ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯ್ಕ್, ಸದಸ್ಯರಾದ ಹರೀಶ್ ಉಪಾಧ್ಯಾಯ, ಸೋಮನಾಥ, ಡಾ ರಮ್ಯ ರಾಜಾರಾಮ್ , ಅನಿತಾ ಕೇಶವ ಗೌಡ, ಬಿ. ಗೋಪಾಲಕೃಷ್ಣ ರೈ, ಬಿ. ಕೃಷ್ಣ ರಾವ್ ಅರ್ತಿಲ , ದೇವಿದಾಸ್ ರೈ ಬಿ., ಎಂ. ವೆಂಕಪ್ಪ ಪೂಜಾರಿ ದೇವಳದ ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ, ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ಕೃಷ್ಣಪ್ರಸಾದ್ ಬಡಿಲ, ಪದ್ಮನಾಭ, ದಿವಾಕರ, ಸುಧಾಕರ ಶೆಟ್ಟಿ ಗಾಂಧಿಪಾರ್ಕ್ ಮುಂಚೂಣಿಯಲ್ಲಿ ನಿಂತು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಮಾಜಿ ಶಾಸಕ ಸಂಜೀವ ಮಠಂದೂರು, ಪ್ರಮುಖರಾದ ಕಂಗ್ವೆ ವಿಶ್ವನಾಥ ಶೆಟ್ಟಿ , ಹರಿರಾಮಚಂದ್ರ , ಕೈಲಾರ್ ರಾಜಗೋಪಾಲ ಭಟ್, ಸುನಿಲ್ , ಪ್ರೇಮಲತಾ ಕಾಂಚನ, ಡಾ. ರಾಜಾರಾಮ್ ಕೆ.ಬಿ. ಜಯಂತ ಪೊರೋಳಿ, ಉಷಾಚಂದ್ರ ಮುಳಿಯ, ಸುಂದರ ಗೌಡ , ಸಂಜೀವ ಗಾಣಿಗ, ರಾಮಚಂದ್ರ ಮಣಿಯಾಣಿ, ಗೋವಿಂದ ಭಟ್, ಶೋಭಾ ದಯಾನಂದ್, ಗಾಯತ್ರ್ರಿ ವಸಂತ್, ಸುಜಾತ ಕೃಷ್ಣ ಆಚಾರ್ಯ, ಕಾಮಾಕ್ಷಿ ಜಿ. ಹೆಗ್ಡೆ, ಐ. ಚಿದಾನಂದ ನಾಯಕ್, ಹೇರಂಭ ಶಾಸ್ತ್ರಿ, ಶರತ್ ಕೋಟೆ, ಪ್ರಶಾಂತ್ ನೆಕ್ಕಿಲಾಡಿ, ಶಶಿಕಲಾ ಭಾಸ್ಕರ್, ಜಯರಾಮ ಶೆಟ್ಟಿ , ಆದೇಶ್ ಶೆಟ್ಟಿ , ಚಂದ್ರಹಾಸ ಹೆಗ್ಡೆ, ಡಾ. ಗೋವಿಂದ ಪ್ರಸಾದ್ ಕಜೆ , ಕೃಷ್ಣ ಶೆಣೈ, ಗೋಪಾಲ ಹೆಗ್ಡೆ, ಸದಾನಂದ ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here