ಪುತ್ತೂರು: ಬ್ರಹ್ಮರಕೊಟ್ಲುವಿನಲ್ಲಿ ಸುಮಾರು 12 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಟೋಲ್ ಗೇಟ್ ಅಸಮರ್ಪಕ ಹಾಗೂ ಅವೈಜ್ಞಾನಿಕವಾಗಿರುವುದಾಗಿ ಆರೋಪಿಸಿ ಎಸ್ಡಿಪಿಐವತಿಯಿಂದ ಹಲವು ರೀತಿಯ ಹೋರಾಟ ನಡೆಯುತ್ತಿದ್ದು, ಇದೀಗ ಟೋಲ್ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಸಾರ್ವಜನಿಕರಿಂದ ಸಹಿ ಅಭಿಯಾನ ನಡೆಯುತ್ತಿದೆ.
ಫೆ.22ರಂದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸಹಿ ಅಭಿಯಾನ ಆರಂಭಗೊಂಡಿದ್ದು, ಪುತ್ತೂರು ಗಾಂಧಿಕಟ್ಟೆಯ ಬಳಿ ಸಹಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು, ಉಪಾದ್ಯಕ್ಷ ಹಮೀದ್ ಸಾಲ್ಮರ ಸಹಿ ಅಭಿಯಾನಕ್ಕೆ ಚಾಲನೆ ನೀಡಿದರು. ಪುತ್ತೂರಿನ ದರ್ಬೆ, ಕುಂಬ್ರ, ಉಪ್ಪಿನಂಗಡಿ, ವಿಟ್ಲ, ಕಬಕದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ ಎಂದವರು ತಿಳಿಸಿದರು.
