ಅಳಕೆಮಜಲು ಕಿ.ಪ್ರಾ. ಶಾಲೆಯಲ್ಲಿ ಎಫ್.ಎಲ್.ಎನ್ ಕಲಿಕಾ ಹಬ್ಬ

0

ವಿಟ್ಲ: 2024-25ನೇ ಸಾಲಿನ ಕಂಬಳಬೆಟ್ಟು ಕ್ಲಸ್ಟರ್ ಮಟ್ಟದ ಎಫ್.ಎಲ್.ಎನ್ ಕಲಿಕಾ ಹಬ್ಬವು ಅಳಕೆಮಜಲು ಕಿ.ಪ್ರಾ.ಶಾಲೆಯಲ್ಲಿ‌ ನಡೆಯಿತು.


ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಇಡ್ಕಿದು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪದ್ಮನಾಭ ಸಪಲ್ಯ ರವರು ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ತಿರುಮಲೇಶ್ವರ ನಾಯ್ಕ್, ಮಕ್ಕಳ ಕಲಾ ಲೋಕ ಬಂಟ್ವಾಳ ತಾಲೂಕಿನ ಅಧ್ಯಕ್ಷರಾದ ರಮೇಶ್ ಬಾಯಾರು, ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿ ಜ್ಯೋತಿ, ಶಾಲಾ ಮುಖ್ಯಶಿಕ್ಷಕ ಇಸ್ಮಾಲಿ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಲಿಕಾ ಹಬ್ಬದ ವಿವಿಧ ಚಟುವಟಿಕೆಗಳು ಬೇರೆ ಬೇರೆ ಹಂತಗಳಲ್ಲಿ ಯಶಶ್ವಿಯಾಗಿ ಮೂಡಿದವು. ಪೋಷಕರಿಗೆ ವಿವಿಧ ಚಟುವಟಿಕೆಗಳನ್ನು ಕುಂಡಡ್ಕ ಶಾಲೆಯ ಜಯಪ್ರಕಾಶ್‌ರವರು ನೆರವೇರಿಸಿದರು. ಕಲಿಕಾ ಹಬ್ಬದ ವಿವಿಧ ಚಟುವಟಿಕೆಗಳನ್ನು ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರು ನೆರವೇರಿಸಿದರು.


ಅಳಕೆಮಜಲು ಶಾಲೆಯ ವಿದ್ಯಾರ್ಥಿನಿ ಜಾಹ್ನವಿ ಕಾರ್ಯಕ್ರಮ ನಿರೂಪಿಸಿದರು. ಓಜಾಲ ಶಾಲೆಯ ವಿದ್ಯಾರ್ಥಿನಿ ನೇಹಾ ಬಿ.ಎಸ್, ವಂದಿಸಿದರು. ಓಜಾಲ, ಮಿತ್ತೂರು, ಸೂರ್ಯ, ನಾಟೆಕಲ್, ಅಳಕೆಮಜಲು, ಕುಂಡಡ್ಕ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಬಾಗವಹಿಸಿ ಸಹಕರಿಸಿದ್ದರು.

LEAVE A REPLY

Please enter your comment!
Please enter your name here