ಪುತ್ತೂರು: ನಗರಸಭೆ, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇದರ ಎನ್.ಎಸ್.ಎಸ್ ಘಟಕ ಹಾಗೂ ಬೊಳುವಾರು ಸ.ಹಿ.ಪ್ರಾಥಮಿಕ ಶಾಲೆ ಇದರ ಹಿರಿಯ ವಿದ್ಯಾರ್ಥಿ ಸಂಘಟನೆಯ ವತಿಯಿಂದ ವಾರ್ಡ್ ನಂಬರ್ 15 ಬೊಳುವಾರು ಸರಕಾರಿ ಶಾಲಾ ವಠಾರ ಹಾಗೂ ನಿಯೋಜಿತ ಮಹಿಳಾ ಕಾಲೇಜಿನ ಪರಿಸರದಲ್ಲಿ ಬೃಹತ್ ಶ್ರಮದಾನ ಹಾಗೂ ಸ್ವಚ್ಚತಾ ಅಭಿಯಾನ ಫೆ.22 ರಂದು ನಡೆಯಿತು.

ಅಭಿಯಾನದಲ್ಲಿ ರಾಷ್ಟ್ರೀಯ ಯೋಜನಾಧಿಕಾರಿ ಡಾ. ಸುಚಿತ್ರ ಎಸ್.ಆರ್, ಡಾ.ಸುಕೇಶ್, ನಗರ ಸಭಾ ಸದಸ್ಯ ಸಂತೋಷ್ ಕುಮಾರ್ , ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ರೇಷ್ಮಾ , ಶಾಲೆಯ ಹಿರಿಯ ವಿದ್ಯಾರ್ಥಿಗಳು, ಮಹಿಳಾ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿನಿಯರು, ಬೊಳುವಾರು ಸ.ಹಿ.ಪ್ರಾ. ಶಾಲೆಯ ಮುಖ್ಯಗುರು ಮೋನಿಕಾ ಪಿ ಮಾಡ್ತಾ ಹಾಗೂ ಶಿಕ್ಷಕಿ ಮಲ್ಲಿಕಾ ಸಹಿತ ಹಲವರು ಪಾಲ್ಗೊಂಡಿದ್ದರು.
