ಪುತ್ತೂರು: ಕಲ್ಲಡ್ಕದ ಬಾಯಿಲ ವಾಮನ ಪ್ರಭು( 79 ವ) ರವರು ಫೆ. 21 ರಂದು ಸವಣೂರಿನ ಸೃಗೃಹದಲ್ಲಿ ನಿಧನರಾದರು.
ಪುತ್ತೂರಿನಲ್ಲಿ ಸುಮಾರು 30 ವರುಷ ಆಟೋ ಚಾಲಕರಾಗಿ ದುಡಿದ ವಾಮನ ಪ್ರಭು ಪುತ್ತೂರು ಪರಿಸರದಲ್ಲಿ ಚಿರಪರಿಚಿತರಾಗಿದ್ದರು. ಪುತ್ತೂರಿನಲ್ಲಿ ಆರಂಭಗೊಂಡ ಆಟೋ ವ್ಯವಸ್ಥೆಯಲ್ಲಿ ಇವರದ್ದು 3ನೇ ಆಟೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಮೃತರು ಪತ್ನಿ ಸುಜಾತ ಪ್ರಭು, ಪುತ್ರರಾದ ಸವಣೂರು ಚಂದ್ರಭವನ ಹೋಟೆಲ್ ಉದ್ಯಮಿ ರಾಮಕೃಷ್ಣ ಪ್ರಭು, ಪುತ್ತೂರು ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಂಸ್ಥೆಯ ಉದ್ಯೋಗಿ ಶಿವರಾಮ ಪ್ರಭು, ಮಂಗಳೂರು ಎಂ.ಆರ್. ಪಿ.ಎಲ್ ಸಂಸ್ಥೆಯ ಉದ್ಯೋಗಿ ಕರುಣಾಕರ ಪ್ರಭು, ಪುತ್ರಿ ಶಾರದಾ ಪ್ರಭು ಮತ್ತು ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಮನೆಗೆ ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಂಘ- ಸಂಸ್ಥೆಗಳ ಮುಖಂಡರು, ಬಂಧುಗಳು ಭೇಟಿ ನೀಡಿ ಸಂತಾಪ ಸೂಚಿಸಿದರು.