ತಾ| ಯುವ ಬಂಟರ ಸಂಘದ ಸಾರಥ್ಯದಲ್ಲಿ ಪುತ್ತೂರು ತಾ| ಕ್ರೀಡಾಂಗಣದಲ್ಲಿ ಪುತ್ತೂರ್ದ ಬಂಟ ಜವನೆರೆ ಗೊಬ್ಬು-ಫೆ.23ರಂದು ಸಮಾರೋಪ

0

ಪುತ್ತೂರು: ತಾಲೂಕು ಯುವ ಬಂಟರ ಸಂಘದ ಸಾರಥ್ಯದಲ್ಲಿ ಸಹಕಾರಿ ಧುರೀಣ ಎ.ಜೀವನ್ ಭಂಡಾರಿ ಸಿದ್ಯಾಳ ಸ್ಮರಣಾರ್ಥ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ಪುತ್ತೂರ್ದ ಬಂಟ ಜವನೆರೆ ಗೊಬ್ಬು( ಬಂಟ್ಸ್ ಪ್ರೀಮಿಯರ್ ಲೀಗ್-2025) ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಫೆ. 22ರಂದು ಪುತ್ತೂರು ತಾಲೂಕು ಕೊಂಬೆಟ್ಟು ಕ್ರೀಡಾಂಗಣದಲ್ಲಿ ಆರಂಭಗೊಂಡಿದ್ದು, ಫೆ.23ರಂದು ಬೆಳಿಗ್ಗೆಯಿಂದ ಸಂಜೆ ತನಕ ನಡೆಯಲಿದೆ.



ಫೆ.22ರಂದು ಬೆಳಿಗ್ಗೆ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ಪಂದ್ಯಾಟಕ್ಕೆ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆಗೈದರು. ಬಳಿಕ ಧ್ವಜಾರೋಹಣಗೈದು ಮಾತನಾಡಿ ಸಹಕಾರ ಧುರಿಣರಾಗಿದ್ದ ಎ. ಜೀವನ್ ಭಂಡಾರಿಯವರು ಪುತ್ತೂರು ತಾಲೂಕು ಯುವ ಬಂಟರ ಸಂಘವನ್ನು ಕಟ್ಟಿ, ಯುವ ಬಂಟ ಯುವಕರರನ್ನು ಒಂದಡೆ ಸೇರಿಸುವ ಕಾಯಕವನ್ನು ಮಾಡಿದ್ದರು. ಅವರ ಅಂದಿನ ಪ್ರಯತ್ನದ ಫಲವಾಗಿ ಇಂದು ಯುವ ಬಂಟರು ಏಕತೆಯಿಂದ ಸಂಘಟನೆಯನ್ನು ಬೆಳೆಸುತ್ತಿದ್ದಾರೆ. ಬಂಟ ಸಮಾಜ ಎಲ್ಲಾ ಸಮಾಜದವರನ್ನು ಅಕ್ಕರೆಯಿಂದ ಕಾಣುವ ಸಮಾಜವಾಗಿದ್ದು, ಬಲಿಷ್ಠವಾದ ಬಂಟ ಸಮಾಜವನ್ನು ಕಟ್ಟುವ ಕಾಯಕವನ್ನು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು. ಯುವ ಬಂಟರ ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು ಅವರ ನೇತೃತ್ವದಲ್ಲಿ ಅವರ ತಂಡ ಹಮ್ಮಿಕೊಂಡಿರುವ ಈ ಕಾರ್‍ಯಕ್ರಮ ಅಚ್ಚುಕಟ್ಟಾಗಿ ನಡೆದಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಒಗ್ಗಟನ್ನು ಮೂಡಿಸಿದ್ದಾರೆ- ಶಶಿಕುಮಾರ್ ರೈ
ದ.ಕ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಕೀರ್ತಿಶೇಷ ಜೀವನ್ ಭಂಡಾರಿಯವರು ಯುವ ಬಂಟರ ಸಂಘವನ್ನು ಕಟ್ಟುವ ಮೂಲಕ, ಯುವ ಬಂಟರಲ್ಲಿ ಒಗ್ಗಟನ್ನು ಮೂಡಿಸಿದ್ದಾರೆ. ಅವರ ನೆನಪಲ್ಲಿ ಪ್ರತಿ ವರ್ಷ ಹಮ್ಮಿಕೊಂಡು ಬರುತ್ತಿರುವ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಿದೆ ಎಂದರು.

ಕ್ರೀಡಾಪ್ರೇಮ ಬೆಳೆಯಲಿ- ಸಾಜ ರಾಧಾಕೃಷ್ಣ ಆಳ್ವ
ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಸಾಜ ರಾಧಕೃಷ್ಣ ಆಳ್ವರವರು ಮಾತನಾಡಿ ದಿ.ಜೀವನ್ ಭಂಡಾರಿಯವರ ನೇತೃತ್ವದಲ್ಲಿ ಆರಂಭಗೊಂಡ ಯುವ ಬಂಟರ ಸಂಘದ ಸ್ಥಾಪನೆ ಹಾಗೂ ಕ್ರಿಕೆಟ್ ಪಂದ್ಯಾಟ ನಿರಂತರವಾಗಿ ನಡೆದುಕೊಂಡು ಬರುತ್ತಿದ್ದು, ಆಮೂಲಕ ಯುವ ಬಂಟರರಲ್ಲಿ ಕ್ರೀಡಾಪ್ರೇಮ ಬೆಳೆಯಲಿ ಎಂದು ಹಾರೈಸಿದರು.
ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು ಹಾಗೂ ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ್ ರೈಯವರು ಶುಭಹಾರೈಸಿದರು.

ಅದ್ಭುತವಾಗಿ ಬೆಳೆಯಿತು- ದುರ್ಗಾಪ್ರಸಾದ್ ರೈ
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ ಅಧ್ಯಕ್ಷತೆ ವಹಿಸಿ, ಮಾತನಾಡಿ ಯುವ ಬಂಟರನ್ನು ಒಂದಡೆ ಸೇರಿಸುವ ಮೂಲಕ ಯುವ ಬಂಟರ ಸಂಘದ ಸ್ಥಾಪನೆಯನ್ನು ಜೀವನ್ ಭಂಡಾರಿಯವರು ಮಾಡಿದರು. ಆ ಬಳಿಕ ಯುವ ಬಂಟರ ಸಂಘ ಹತ್ತುಹಲವು ಕಾರ್‍ಯದ ಮೂಲಕ ಅದ್ಭುತವಾಗಿ ಬೆಳೆಯಿತು ಎಂದರು.

ತಾಲೂಕು ಬಂಟರ ಸಂಘದ ನಿರ್ದೇಶಕ ದಂಬೆಕ್ಕಾನ ಸದಾಶಿವ ರೈಯವರು ಕ್ರೀಡಾಪಟುಗಳಿಗೆ ಪ್ರಮಾಣವಚನವನ್ನು ಬೋಧಿಸಿದರು.
ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ನಿರ್ದೇಶಕ ಜಯಪ್ರಕಾಶ್ ರೈ ನೂಜಿಬೈಲು, ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲು, ಬಂಟರ ಸಂಘದ ನಿರ್ದೇಶಕರುಗಳಾದ ಶಿವನಾಥ ರೈ ಮೇಗಿನಗುತ್ತು, ಶಶಿಕಿರಣ್ ರೈ ನೂಜಿಬೈಲು, ಪ್ರಕಾಶ್ ರೈ ಸಾರಕರೆ, ಹರಿಣಾಕ್ಷಿ ಜೆ.ಶೆಟ್ಟಿ, ಮಹಿಳಾ ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ಕುಸುಮ ಪಿ.ಶೆಟ್ಟಿ, ಕೋಶಾಧಿಕಾರಿ ಅರುಣಾ ಡಿ.ರೈ, ತಾಲೂಕು ಯುವ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ರಮೇಶ್ ರೈ ಡಿಂಬ್ರಿ, ಜಿ.ಪಂ, ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಉದ್ಯಮಿ ಪ್ರಸನ್ನ ಶೆಟ್ಟಿ ಸಾಮೆತಡ್ಕ, ಬಂಟರ ಸಂಘದ ಮಾಜಿ ಕಾರ್‍ಯದರ್ಶಿ ಮೋಹನ್ ರೈ ನರಿಮೊಗರು, ಉದ್ಯಮಿ ನಿಹಾಲ್ ಪಿ.ಶೆಟ್ಟಿ, ಮಾಜಿ ಸೈನಿಕ ಪಿ.ಬಿ.ಅಮ್ಮಣ್ಣ ರೈ ಪಾಪೆಮಜಲು, ಉದ್ಯಮಿ ಶಿವಪ್ರಸಾದ್ ಶೆಟ್ಟಿ ಕೆನರಾ ಪುತ್ತೂರು ನಗರ ಠಾಣೆಯ ಎಸ್‌ಐ ಅಂಜನೇಯ ರೆಡ್ಡಿ, ಜಿ.ಪಂ, ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಉಪಸ್ಥಿತರಿದ್ದರು.


ಎಲ್ಲರೂ ಪೂರ್ಣ ಸಹಕಾರವನ್ನು ನೀಡಿದ್ದಾರೆ- ಹರ್ಷಕುಮಾರ್ ರೈ
ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ ಸ್ವಾಗತಿಸಿ, ಮಾತನಾಡಿ ಯುವ ಬಂಟರ ಸಾರಥ್ಯದಲ್ಲಿ ನಡೆಯುವ ಜೀವನ್ ಭಂಡಾರಿ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟಕ್ಕೆ ಎಲ್ಲರೂ ಪೂರ್ಣ ಸಹಕಾರವನ್ನು ನೀಡಿದ್ದಾರೆ ಎಂದು ಹೇಳಿದರು. ಯುವ ಬಂಟರ ಸಂಘದ ಧಾರ್ಮಿಕ ಸಂಚಾಲಕ ಮನ್ಮಥ ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿ, ಪೃಧಾನ ಕಾರ್‍ಯದರ್ಶಿಗಳಾದ ರಂಜಿನಿ ಶೆಟ್ಟಿ, ಪ್ರಜ್ವಲ್ ರೈ ಸೊರಕೆ, ಕೋಶಾಧಿಕಾರಿ ಶಿವನಾಥ ರೈ, ಕ್ರೀಡಾಕೂಟದ ಮುಖ್ಯಕಾರ್‍ಯನಿರ್ವಹಣಾಧಿಕಾರಿ ದಯಾನಂದ ರೈ ಕೊರ್ಮಂಡ, ಕ್ರೀಡಾ ಸಂಚಾಲಕ ಕಾರ್ತಿಕ್ ರೈ, ರವಿಪ್ರಸಾದ್ ಶೆಟ್ಟಿ ಬನ್ನೂರು, ಗಣೇಶ್ ಶೆಟ್ಟಿ, ಶುಭ ರೈ ಸಹಕರಿಸಿದರು.

ಈ ವರ್ಷದ ಕೊನೆಯಲ್ಲಿ ತಾಲೂಕು ಬಂಟರ ಬಹೃತ್ ಕ್ರೀಡಾಕೂಟ- ಹೇಮನಾಥ ಶೆಟ್ಟಿ
ಮಧ್ಯಾಹ್ನ ಸಭಾ ಕಾರ್ಯಕ್ರಮವನ್ನು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿ ಬಂಟ ಸಮಾಜಕ್ಕೆ ಜಗತ್ತಿನಲ್ಲಿ ವಿಶೇಷವಾದ ಗೌರವ ಇದೆ. ಬಂಟ ಸಮಾಜಕ್ಕೆ ನಾಯಕತ್ವಗುಣ ರಕ್ತಗತವಾಗಿ ಬಂದಿದೆ. ನಮ್ಮ ಬಂಟ ಯುವಕರು ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು, ಈ ವರ್ಷದ ಕೊನೆಯಲ್ಲಿ ತಾಲೂಕು ಬಂಟರ ಬಹೃತ್ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಿದ್ದೇವೆ, ಆಮೂಲಕ ತಾಲೂಕಿನ ಎಲ್ಲ ಬಂಟರು ಒಂದಡೆ ಸೇರುವ ಕಾರ್‍ಯ ಆಗಲಿದೆ ಎಂದು ಹೇಳಿದರು.


ಪೂರ್ಣ ಸಹಕಾರ- ನವೀನ್ ಭಂಡಾರಿ
ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಜಿ ನಿರ್ದೇಶಕ ಸಹಕಾರ ರತ್ನ ಅಗರಿ ನವೀನ್ ಭಂಡಾರಿರವರು ಮಾತನಾಡಿ ನನ್ನ ಸಹೋದರ ಜೀವನ್ ಭಂಡಾರಿಯವರ ಸ್ಮರಣಾರ್ಥ ನಡೆಯುವ ಕ್ರೀಡಾಕೂಟಕ್ಕೆ ನಮ್ಮ ಕುಟುಂಬದ ಪೂರ್ಣ ಸಹಕಾರ ಇದೆ ಎಂದರು.

ತಾಲೂಕು ಬಂಟರ ಸಂಘದ ನಿರ್ದೇಶಕ ಸತೀಶ್ ರೈ ಕಟ್ಟಾವು, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ ದಯಾನಂದ ರೈ ಮನವಳಿಕೆಗುತ್ತು ಅವರುಗಳು ಸಂದಭೋಚಿತವಾಗಿ ಮಾತನಾಡಿದರು.

ಹೋಟೆಲ್ ಅಶ್ವಿನಿ ಮಾಲಕ ಕರುಣಾಕರ ರೈ ದೇರ್ಲ, ತಾಲೂಕು ಬಂಟರ ಸಂಘದ ಮಾಜಿ ನಿರ್ದೇಶಕ ಎ.ಕೆ.ಜಯರಾಮ ರೈ,, ಸಹಕಾರರತ್ನ ದಂಬೆಕ್ಕಾನ ಸದಾಶಿವ ರೈ, ತಾಲೂಕು ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಧಿಕಾರಿ ಸಂತೋಷ್ ಶೆಟ್ಟಿ ಸಾಜ, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕರಾದ ಜಯಪ್ರಕಾಶ್ ರೈ ನೂಜಿಬೈಲು, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕಿ ವಾಣಿ ಶೆಟ್ಟಿ ನೆಲ್ಯಾಡಿ, ಸ್ವರ್ಣಲತಾ ಜೆ.ರೈ, ಅನುಷಾ ರೈ, ತಾಲೂಕು ಬಂಟರ ಸಂಘದ ನಿರ್ದೇಶಕ ರವಿಪ್ರಸಾದ್ ಶೆಟ್ಟಿ ಬನ್ನೂರು, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಯುವ ಬಂಟರ ಸಂಘದ ಶುಭ ರೈ, ಯುವ ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿಗಳಾದ ರಂಜಿನಿ ಶೆಟ್ಟಿ, ಪ್ರಜ್ವಲ್ ರೈ ಸೊರಕೆ, ಕೋಶಾಧಿಕಾರಿ ಶಿವಶ್ರೀರಂಜನ್ ರೈ ದೇರ್ಲ, ಬಂಟರ ಸಂಘದ ನಿರ್ದೇಶಕ ಸಹಕಾರತ್ನ ದಂಬೆಕ್ಕಾನ ಸದಾಶಿವ ರೈ, ಶಶಿಕಿರಣ್ ರೈ ನೂಜಿಬೈಲು, ಹರಿಣಾಕ್ಷಿ ಜೆ.ಶೆಟ್ಟಿ , ನಿತಿನ್ ಪಕ್ಕಳ, ದಯಾನಂದ ರೈ ಕೊರ್ಮಂಡ, ಜಯಂತಿ ಎಂ.ರೈ ಮಾಡಾವು, ಸೂರ್‍ಯನಾಥ ಆಳ್ವ ಮಿತ್ತಳಿಕೆ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು.

ದತ್ತಿನಿಧಿ ವಿತರಣೆ
ಕುತ್ಯಾಡಿ ಸತೀಶ್ ರೈ ಕ್ರೀಡಾ ದತ್ತಿನಿಧಿ ವಿತರಣೆಯನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಯಾನಂದ ರೈ ಕೊರ್ಮಂಡರವರು ನೆಲ್ಲಿಕಟ್ಟಿ ಜಗದೀಶ್ ಶೆಟ್ಟಿ ಮತ್ತು ಹರಿಣಾಕ್ಷಿ ಜೆ.ಶೆಟ್ಟಿ ಪುತ್ರಿ ಸಮೃದ್ಧಿ ಜೆ.ಶೆಟ್ಟಿಯವರಿಗೆ ವಿತರಿಸಿದರು.

ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು ಸ್ವಾಗತಿಸಿ, ಮನ್ಮಥ ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್‍ಯದರ್ಶಿಗಳಾದ ರಂಜಿನಿ ಶೆಟ್ಟಿ, ಪ್ರಜ್ವಲ್ ರೈ ಸೊರಕೆ, ಕೋಶಾಧಿಕಾರಿ ಶಿವಶ್ರೀರಂಜನ್ ರೈ ದೇರ್ಲ, ರವಿಪ್ರಸಾದ್ ಶೆಟ್ಟಿ ಬನ್ನೂರು, ಶುಭ ರೈ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಕ್ರೀಡಾ ಸಂಚಾಲಕ ಕಾರ್ತಿಕ್ ರೈರವರುಗಳು ಸಹಕರಿಸಿದರು


ಫೆ.23ರಂದು ಸಮಾರೋಪ ಸಮಾರಂಭ
ಫೆ.23ರಂದು ಸಮಾರೋಪ ಸಮಾರಂಭ ಸಂಜೆ 4.30ರ ಬಳಿಕ ನಡೆಯಲಿದ್ದು, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‌ರವರು ಬಹುಮಾನ ವಿತರಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಾಜಿ ಶಾಸಕರಾದ ಮಲ್ಲಿಕಾ ಪ್ರಸಾದ್, ಶಕುಂತಳಾ ಟಿ.ಶೆಟ್ಟಿ ಸಹಿತ ಅನೇಕ ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪುತ್ತೂರುರ್ದ ಬಂಟ ಜವನೆರೆ ಗೊಬ್ಬು ಸಮಿತಿಯ ಗೌರವಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮುಖ್ಯ ಕಾರ್ಯನಿರ್ವಣಾಧಿಕಾರಿ ದಯಾನಂದ ರೈ ಕೋರ್ಮಂಡ, ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು, ಕ್ರೀಡಾ ಸಂಚಾಲಕ ಕಾರ್ತಿಕ್ ರೈ, ಪ್ರಧಾನ ಕಾರ್‍ಯದರ್ಶಿಗಳಾದ ರಂಜಿನಿ ಶೆಟ್ಟಿ, ಪ್ರಜ್ವಲ್ ರೈ ಸೊರಕೆ ಹಾಗೂ ಕೋಶಾಧಿಕಾರಿ ಶಿವಶ್ರೀರಂಜನ್ ರೈ ದೇರ್ಲರವರು ತಿಳಿಸಿದ್ದಾರೆ.


(ಬಂಟ್ಸ್ ಪ್ರೀಮಿಯರ್ ಲೀಗ್-2025)
ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಬಹುಮಾನ ರೂ. 75 ಸಾವಿರ ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ. 50 ಸಾವಿರ ಹಾಗೂ ಆಕರ್ಷಕ ಟ್ರೋಫಿ ಇರಲಿದೆ, ಉದ್ಘಾಟನಾ ಪ್ರದರ್ಶನ ಪಂದ್ಯಾಟದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಸಹಿತ 50 ವರ್ಷ ದಾಟಿದ ಪುತ್ತೂರಿನ ಯುವ ಸಾಮಾಜಿಕ ಮುಂದಾಳುಗಳು ಭಾಗವಹಿಸಿದರು. ಜೊತೆಗೆ ಬಂಟರ ಸಂಘದ 50 ವರ್ಷ ದಾಟಿದ ನಾಯಕರು ಆರಂಭಿಕ ಪಂದ್ಯಾಟದಲ್ಲಿ ಪಾಲ್ಗೊಂಡರು.
ಹರ್ಷಕುಮಾರ್ ರೈ ಮಾಡಾವು ಅಧ್ಯಕ್ಷರು,
ಯುವ ಬಂಟರ ಸಂಘ ಪುತ್ತೂರು ತಾಲೂಕು

LEAVE A REPLY

Please enter your comment!
Please enter your name here