ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕಿನ 68 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಪುತ್ತೂರು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್ಡಿ)ಬ್ಯಾಂಕ್ಗೆ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಭಾಸ್ಕರ ಎಸ್ ಗೌಡ ಇಚ್ಲಂಪಾಡಿ ಹಾಗೂ ಉಪಾಧ್ಯಕ್ಷರಾಗಿ ಪ್ರವೀಣ್ ರೈ ಪಂಜೊಟ್ಟು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಫೆ.25 ರಂದು ಬ್ಯಾಂಕಿನ ಸಭಾಭವನದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಭಾಸ್ಕರ ಎಸ್ ಗೌಡ ಇಚ್ಲಂಪಾಡಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರವೀಣ್ ರೈ ಪಂಜೊಟ್ಟು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಕಣದಲ್ಲಿ ಬೇರೆ ಯಾವುದೇ ಅಭ್ಯರ್ಥಿಗಳು ಇರದ ಕಾರಣ ಅವಿರೋಧವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು. ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ರಘು ಎಸ್.ಎಂ.ರವರು ನಡೆಸಿಕೊಟ್ಟರು. ಬ್ಯಾಂಕಿನ ವ್ಯವಸ್ಥಾಪಕ ಶೇಖರ್ ಮತ್ತು ಸಿಬ್ಬಂದಿಗಳು ಸಹಕರಿಸಿದರು.
ಬ್ಯಾಂಕಿನ ನಿರ್ದೆಶಕರಾದ ಸುಜಾತ ರಂಜನ್ ರೈ ಬೀಡು, ಯುವರಾಜ್ ಪೆರಿಯತ್ತೋಡಿ, ಯತೀಂದ್ರ ಕೊಚ್ಚಿ, ವಿಕ್ರಮ್ ರೈ ಸಾಂತ್ಯ, ಬಾಳಪ್ಪ ಯಾನೆ ಸುಂದರ ಪೂಜಾರಿ ಬಡಾವು, ಚಂದ್ರಾವತಿ ಅಭಿಕಾರ್, ಸ್ವಾತಿ ರೈ ಆರ್ತಿಲ, ಬಾಬು ಮುಗೇರ, ರಾಜು ಮೋನು ಪಿ.ಉಳಿಪು, ಕುಶಾಲಪ್ಪ ಗೌಡ ಅನಿಲ, ನಾರಾಯಣ ನಾಯ್ಕ ಏಣಿತ್ತಡ್ಕ, ಚೆನ್ನಕೇಶವ ಉಪಸ್ಥಿತರಿದ್ದರು.
ಬ್ಯಾಂಕಿನ ಆಡಳಿತ ಮಂಡಳಿಯ 14 ಸ್ಥಾನಗಳಲ್ಲಿ 12 ಸ್ಥಾನಗಳಲ್ಲಿ ಸಹಕಾರ ಭಾರತಿ ಹಾಗೂ 2 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.
ಅಭಿನಂದನಾ ಸಮಾರಂಭ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಭಿನಂದಿಸುವ ಸಮಾರಂಭ ಜರಗಿತು.
ಮಾದರಿ ಬ್ಯಾಂಕ್ ಆಗಿ ಹೆಸರನ್ನು ಪಡೆಯಲಿ- ಸಾಜ ರಾಧಾಕೃಷ್ನ ಆಳ್ವ
ಬಿಜೆಪಿ ಪುತ್ತೂರು ಮಂಡಲದ ನಿಕಟಪೂರ್ವಧ್ಯಾಕ್ಷ ಸಾಜ ರಾಧಾಕೃಷ್ಣ ಆಳ್ವ ಪುತ್ತೂರು ಪಿಎಲ್ಡಿ ಬ್ಯಾಂಕ್ನ ನೂತನ ಅಧ್ಯಕ್ಷ ಭಾಸ್ಕರ ಗೌಡ ಮತ್ತು ಉಪಾಧ್ಯಕ್ಷ ಪ್ರವೀಣ್ ರೈಯರನ್ನು ಆಭಿನಂದಿಸಿ, ಮಾತನಾಡಿ ಆಡಳಿತ ಮಂಡಳಿಯ ಎಲ್ಲರ ಸಹಕಾರ ಮತ್ತು ಪಕ್ಷದ ತೀರ್ಮಾನದಂತೆ ಇಲ್ಲಿ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲರನ್ನು ಅಭಿನಂದಿಸುವುದಾಗಿ ಹೇಳಿದರು. ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಸ್ ಗೌಡರವರು ಕಳೆದ 5 ವರ್ಷಗಳ ಅವಧಿಯಲ್ಲಿ ಬ್ಯಾಂಕಿನ ಅಧ್ಯಕ್ಷರಾಗಿದ್ದರು. ಪಿಎಲ್ಡಿ ಬ್ಯಾಂಕ್ಗೆ ಸುಮಾರು 30 ಲಕ್ಷ ರೂ, ಲಾಭವನ್ನು ತಂದಿತ್ತ ಹೆಗ್ಗಳಿಕೆ ಭಾಸ್ಕರ ಗೌಡರವರು ಮಾಡಿದ್ದಾರೆ ಹಾಗೂ ನೂತನ ಉಪಾಧ್ಯಕ್ಷ ಪ್ರವೀಣ್ ರೈಯವರು ಕಳೆದ 5 ವರ್ಷ ಬ್ಯಾಂಕಿನ ನಿರ್ದೇಶಕರಾಗಿ ಉತ್ತಮ ಕೆಲಸವನ್ನು ನಿರ್ವಹಿಸಿ, ಇದೀಗ ಉಪಾಧ್ಯಕ್ಷರಾಗಿದ್ದಾರೆ. ನೂತನ ಆಡಳಿತ ಮಂಡಳಿಯು ಉತ್ತಮ ಕೆಲಸವನ್ನು ಮಾಡಿ, ಬ್ಯಾಂಕ್ ಮಾದರಿ ಬ್ಯಾಂಕ್ ಆಗಿ ಹೆಸರನ್ನು ಪಡೆಯಲಿ ಎಂದು ಹಾರೈಸಿದರು.
ಸರ್ವತೋಮುಖ ಅಭಿವೃದ್ಧಿ ಸಾಧಿಸಲಿ- ಕೃಷ್ಣಕುಮಾರ್ ರೈ
ಪುತ್ತೂರು ತಾಲೂಕು ಸಹಕಾರ ಭಾರತೀಯ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು ಮಾತನಾಡಿ ಪಿಎಲ್ಡಿ ಬ್ಯಾಂಕ್ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಒಮ್ಮತದ ಆಯ್ಕೆ ನಡೆದಿದ್ದು, ಇನ್ನೂ ಮುಂದಿನ ದಿನಗಳಲ್ಲಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿ ಸಾಧಿಸಲಿ ಎಂದು ಹಾರೈಸಿದರು.
ಒಗ್ಗಟಾಗಿ ಸಹಕಾರವನ್ನು ನೀಡುತ್ತೇವೆ- ವಿಕ್ರಮ್ ರೈ
ಬ್ಯಾಂಕಿನ ನಿರ್ದೇಶಕ ವಿಕ್ರಮ್ ರೈ ಸಾಂತ್ಯ ಮಾತನಾಡಿ, ಬ್ಯಾಂಕಿನ ಅಭಿವೃದ್ಧಿಗೆ ನಾವೆಲ್ಲ ಒಗ್ಗಟಾಗಿ ಸಹಕಾರವನ್ನು ನೀಡುತ್ತೇವೆ ಎಂದು ಹೇಳಿದರು.
ಬಾಕಿ ಇರುವ ಹಣವನ್ನು ಕಾನೂನು ಪ್ರಕಾರವೇ ವಸೂಲಿ – ಭಾಸ್ಕರ್ ಎಸ್ ಗೌಡ
ನೂತನ ಅಧ್ಯಕ್ಷ ಭಾಸ್ಕರ ಎಸ್ ಗೌಡ ಮಾತನಾಡಿ ನಾನು ಪುತ್ತೂರಿನಿಂದ 45 ಕಿ. ಮೀ, ದೂರದ ಗ್ರಾಮೀಣ ಪ್ರದೇಶದಲ್ಲಿ ಇದ್ದರೂ, ಪಕ್ಷದ ಹಿರಿಯರು ನನ್ನನ್ನು ಗುರುತಿಸಿಕೊಂಡು ನನಗೆ ಕಳೆದ ಅವಧಿಯಲ್ಲಿ ಅಧ್ಯಕ್ಷ ಸ್ಥಾನವನ್ನು ಕೊಟ್ಟಿದ್ದರು. ಕೊಡುವಾಗ ಅವರು ನನಗೆ ಒಂದು ಮಾತು ಹೇಳಿದ್ದರು, ಬ್ಯಾಂಕ್ ಅನ್ನು ಲಾಭದಾಯಕವಾಗಿ ಮಾಡಿಕೊಡಬೇಕು ಎಂದು ಹೇಳಿದ್ದರು. ಕಳೆದ ಅವಧಿಯಲ್ಲಿ ಎರಡುವರೆ ವರ್ಷ ಕಾಲ ನಮಗೆ ಬ್ಯಾಂಕಿನ ಕಟ್ಟಡವನ್ನು ಪೂರ್ಣಗೊಳಿಸುವ ಜವಾಬ್ದಾರಿ ಇತ್ತು, ಅದನ್ನು ನಾವು ಪೂರ್ಣಗೊಳಿಸಿದೆವು, ಇದರ ಜೊತೆಗೆ ಎರಡು ಕಾಲು ಕೋಟಿ ರೂಪಾಯಿ ನಷ್ಟದಲ್ಲಿ ಇದ್ದ ಬ್ಯಾಂಕ್ ಅನ್ನು 39 ಲಕ್ಷ ರೂಪಾಯಿಯ ಲಾಭವನ್ನು ತಂದುಕೊಟ್ಟಿದ್ದೇವೆ. ಇದು ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂಧಿಗಳ ಸಹಕಾರದಿಂದ ಸಾಧ್ಯವಾಗಿದೆ, ಕಳೆದ 35 ವರ್ಷಗಳಿಂದ ಪಕ್ಷದಲ್ಲಿ ಕೆಲಸವನ್ನು ಮಾಡಿದ್ದೇನೆ, ಕಳೆದ ಅವಧಿಯಲ್ಲಿ ಬ್ಯಾಂಕಿನ ಒಮ್ಮತದ ತೀರ್ಮಾಣಕ್ಕೆ ಆಗಿನ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾಗಿದ್ದ ರಾಜಶೇಖರ್ ಜೈನ್ರವರು ಕೂಡ ಸಹಮತವನ್ನು ಸೂಚಿಸಿ, ಸಹಕರಿಸಿದ್ದರು ಎಂದು ನೆನಪಿಸಿಕೊಂಡರು. ಬ್ಯಾಂಕಿಗೆ ಅಗಮಿಸುವ ಗ್ರಾಹಕರರನ್ನು ನಗುಮುಖದಿಂದ ಗೌರವಿಸಿ, ಅವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ, ಬ್ಯಾಂಕಿಗೆ ಒಂದು ಕೋಟಿ 65 ಲಕ್ಷ ರೂಪಾಯಿ ಬರಲು ಬಾಕಿ ಇದೆ, ಬಡವರು ಸಾಲದ ಹಣ ಪಾವತಿ ಮಾಡುತ್ತಾರೆ, ಆದರೆ ಶ್ರೀಮಂತರು ಕಟ್ಟುವುದಿಲ್ಲ, ಇದು ರೈತರ ಹಣವಾಗಿದ್ದು, ಬಾಕಿ ಇರುವ ಹಣವನ್ನು ಕಾನೂನು ಪ್ರಕಾರವೇ ವಸೂಲಿ ಮಾಡುತ್ತೇವೆ ಎಂದು ಹೇಳಿ, ಎಲ್ಲರ ಸಹಕಾರವನ್ನು ಕೋರುತ್ತೇನೆ ಎಂದು ಹೇಳಿದರು.

ರೈತರ ಹಿತಕ್ಕಾಗಿ ನಾವು ದುಡಿಯುತ್ತೇವೆ- ಪ್ರವೀಣ್ ರೈ
ನೂತನ ಉಪಾಧ್ಯಕ್ಷ ಪ್ರವೀಣ್ ರೈ ಪಂಜೊಟ್ಟುರವರು ಮಾತನಾಡಿ ನಾನು ಎರಡನೇ ಅವಧಿಯಲ್ಲಿ ನಿರ್ದೇಶಕನಾಗಿದ್ದು, ಈಗ ನನಗೆ ಉಪಾಧ್ಯಕ್ಷ ಸ್ಥಾನವನ್ನು ಆಡಳಿತ ಮಂಡಳಿ ನೀಡಿದೆ ಎಂದು ಹೇಳಿ, ಎಲ್ಲರ ಸಹಕಾರವನ್ನು ಬಯಸುತ್ತಾ, ರೈತರ ಹಿತಕ್ಕಾಗಿ ನಾವು ದುಡಿಯುತ್ತೇವೆ ಎಂದು ಹೇಳಿದರು.ಬ್ಯಾಂಕಿನ ನಿರ್ದೇಶಕ ಯುವರಾಜ್ ಪೆರಿಯತ್ತೋಡಿ ವಂದಿಸಿದರು.
ಎಸ್ಸಿಡಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ, ಬಿಜೆಪಿ ನಗರ ಮಂಡಲ ಸಮಿತಿ ಅಧ್ಯಕ್ಷ ಶಿವಕುಮಾರ್, ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚ ಅಧ್ಯಕ್ಷ ಹರೀಶ್ ಬಿಜತ್ರೆ, ಸಹಕಾರ ಭಾರತೀಯ ಪ್ರಧಾನ ಕಾರ್ಯದರ್ಶಿ ಮೋಹನ್ ಪಕ್ಕಳ ಕುಂಡಾಪು, ಬಿಜೆಪಿ ಪ್ರಮುಖರಾದ ಹರಿಪ್ರಸಾದ್ ಯಾದವ, ವಿದ್ಯಧರ್ ಜೈನ್, ಸಂತೋಷ್ ಕುಮಾರ್ ರೈ ಕೈಕಾರ, ನಿತೇಶ್ ಕುಮಾರ್ ಶಾಂತಿವನ, ನಾಗೇಂದ್ರ ಬಾಳಿಗ, ಶಶಿಧರ್ ನಾಯಕ್, ನಿರಂಜನ್ ಕೊಂಬೆಟ್ಟು, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ನೆಲ್ಯಾಡಿ ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣೆಜಾಲು, ಕೊಯಿಲ ಬಿಜೆಪಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ ನೆಲ್ಯಾಡಿ, ಪುತ್ತುರು ಜೇನು ಸೊಸೈಟಿ ಮಾಜಿ ಅಧ್ಯಕ್ಷ ಭಾಸ್ಕರ್ ರೈ ಕಂಟ್ರಮಜಲು, ಹಿರಿಯ ಬಿಜೆಪಿ ಮುಂದಾಳು ಚಂದ್ರಶೇಖರ್ ರಾವ್ ಬಪ್ಪಳಿಗೆ ಸೇರಿದಂತೆ ಅನೇಕ ಮಂದಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಅಧ್ಯಕ್ಷ ಭಾಸ್ಕರ್ ಎಸ್ ಗೌಡರವರ ಪರಿಚಯ
ಇಚ್ಚಂಪಾಡಿ ನಿವಾಸಿ ಭಾಸ್ಕರ್ ಎಸ್ ಗೌಡರವರು 4 ನೇ ಬಾರಿ ಪುತ್ತೂರು ಪಿಎಲ್ ಡಿ ಬ್ಯಾಂಕ್ ನಿರ್ದೇಶಕರಾಗಿದ್ದು, ಮೊದಲ ಅವಧಿಯಲ್ಲಿ ಪಿಎಲ್ ಡಿ ಬ್ಯಾಂಕಿನ ಕೋಶಾಧಿಕಾರಿ, ಎರಡನೇ ಅವಧಿಯಲ್ಲಿ ಉಪಾಧ್ಯಕ್ಷರಾಗಿ, 3 ನೇ ಅವಧಿಯಲ್ಲಿ ಅಧ್ಯಕ್ಷರಾಗಿ, ಬಳಿಕ ಇದೀಗ ಮತ್ತೇ ಅಧ್ಯಕ್ಷರಾಗಿರುವ ಭಾಸ್ಕರ ಗೌಡರವರು ಈ ಹಿಂದೆ ಕ್ರೌಕ್ರಾಡಿ ಗ್ರಾಮ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ. ಕಲ್ಯಾ ತರವಾಡು ಮನೆಯ ದೈವಗಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ತಾಲೂಕು ಪಂಚಾಯತ್ ಕೌಕ್ರಾಡಿ ಕ್ಷೇತ್ರ ಸದಸ್ಯನಾಗಿ, ಸ್ಥಾಯಿ ಸಮಿತಿ ಅಧ್ಯಕ್ಷನಾಗಿಯೂ ಕರ್ತವ್ಯ ನಿರ್ವಹಣೆ, ಶ್ರೀ ಉಳ್ಳಾಕಲು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷನಾಗಿ 15 ವರ್ಷ ಸೇವೆ, ಇಚ್ಲಂಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಅಧ್ಯಕ್ಷ, ಇಚ್ಲಂಪಾಡಿ ರಾಜನ್ ದೈವದ ಮುಖ್ಯಸ್ಥನಾಗಿ, ನೆಲ್ಯಾಡಿ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷನಾಗಿ, ಪ್ರಸ್ತುತ ಸುಳ್ಯ ಬಿಜೆಪಿ ಮಂಡಲ ಸಮಿತಿ ಉಪಾಧ್ಯಕ್ಷ , ನೇರ್ಲ ಇಚ್ಲಂಪಾಡಿ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾಗಿ 20 ವರ್ಷ, ನೇರ್ಲ ಇಚ್ಲಂಪಾಡಿ ಸಿದ್ಧಿವಿನಾಯಕ ಭಜನಾ ಮಂದಿರದ ಗೌರವಾಧ್ಯಕ್ಷನಾಗಿ ಸೇವೆಸಲ್ಲಿಸಿದ್ದಾರೆ. ಪತ್ನಿ ರೇಖಾ ಬಿ, ಮಕ್ಕಳಾದ ವಂದನ್ ಗೌಡ, ಬಿ.ನಂದನ್ ಗೌಡರವರೊಂದಿಗೆ ವಾಸವಾಗಿದ್ದಾರೆ
ಉಪಾಧ್ಯಕ್ಷ ಪ್ರವೀಣ್ ರೈ ಪಂಜೊಟ್ಟು ಪರಿಚಯ
ಬೆಟ್ಟಂಪಾಡಿ ಗ್ರಾಮದ ಪಂಜೊಟ್ಟು ನಿವಾಸಿ ಪ್ರವೀಣ್ ರೈಯವರು ಎಳೆಯ ವಯಸಿನಲ್ಲಿಯೇ ಬಿಜೆಪಿ ಕಾರ್ಯಕರ್ತನಾಗಿ, ಬಳಿಕ ಬೆಟ್ಟಂಪಾಡಿ ಬೂತ್ ಸಮಿತಿ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು , ಪುತ್ತೂರು ಪಿಎಲ್ಡಿ ಬ್ಯಾಂಕ್ನಲ್ಲಿ ಇದೀಗ ಎರಡನೇ ಅವಧಿಯಾಗಿ ನಿರ್ದೇಶಕರಾಗಿದ್ದು, ಪ್ರಸ್ತುತ ಉಪಾಧ್ಯಕ್ಷರಾಗಿದ್ದಾರೆ, ಪತ್ನಿ ರೂಪಲತಾ, ಪುತ್ರಿ ಶ್ರಾವ್ಯ ಎಂಬಿಎ ವ್ಯಾಸಂಗ ಪೂರೈಸಿ, ಬೆಂಗಳೂರಿನಲ್ಲಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ, ಇನ್ನೂರ್ವ ಪುತ್ರಿ ಶ್ರೇಯಾ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ತೃತೀಯ ಬ್ಯಾಚ್ ವಿದ್ಯಾರ್ಥಿನಿ.