ಪುತ್ತೂರು: ಅದ್ಭುತ ಸಂದೇಶಗಳನ್ನೂಳಗೊಂಡ “ಸಿಲಿಕಾನ್ ಸಿಟಿ” ಕನ್ನಡ ಕಿರುಚಿತ್ರದಲ್ಲಿ ಪ್ರಮುಖವಾದ ಪಾತ್ರವೊಂದರಲ್ಲಿ ಆಧುನಿಕ ಭಗೀರಥ ಎಂದೇ ಪ್ರಸಿದ್ಧಿ ಪಡೆದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ ಅಮೈ ಅಡ್ಯನಡ್ಕ ಇವರು ಅಭಿನಯಿಸಿ ಗಮನ ಸೆಳೆದಿದ್ದಾರೆ. ಇದು ಚಿತ್ರದ ಹಲವಾರು ವೈಶಿಷ್ಠ್ಯಗಳಲ್ಲಿ ಒಂದಾಗಿದೆ.
ಅತ್ಯುತ್ತಮ ತಾಂತ್ರಿಕತೆಯಿಂದ ಮೂಡಿಬಂದ ಈ ಚಿತ್ರದ ಕಥೆ, ಸಂಭಾಷಣೆ, ನಿರ್ದೇಶನ ತುಕಾರಾಮ ಬಾಯಾರು, ನಿರ್ಮಾಪಕ ರಾಘಿ ಶರತ್ ಚಂದ್ರ ಬಾಯಾರು ಕಾರ್ಯನಿರ್ವಹಿಸಿದ್ದಾರೆ. ಬೀಟಾ ಪ್ರೊಡಕ್ಷನ್ಸ್ ಬ್ಯಾನರ್ನಡಿಯಲ್ಲಿ ತಯಾರಾದ ಈ ಕಿರುಚಿತ್ರದಲ್ಲಿ ಹಲವು ಕ್ಷೇತ್ರದ ಪ್ರಮುಖರು ಹಾಗೂ ಅತ್ಯುತ್ತಮ ಕಲಾವಿದರು ಅಭಿನಯಿಸಿರುವುದು ಈ ಚಿತ್ರದ ವಿಶೇಷ.