ಪುತ್ತೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕಳ ನೀಡಿದ ಆರೋಪದಲ್ಲಿ ಕೃಷ್ಣನಗರ ನಿವಾಸಿ ಯುವಕನೋರ್ವನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
9 ವರ್ಷ ಪ್ರಾಯದ ಅಪ್ರಾಪ್ತೆಗೆ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ತೋರಿಸಿ ಲೈಂಗಿಕ ಕಿರುಕುಳ ನೀಡಿರುವ ಕುರಿತು ಫೆ.21ರಂದು ಅಪ್ರಾಪ್ತೆಯ ಪೋಷಕರು ಮತ್ತು ಅಪ್ರಾಪ್ತೆಯ ದೂರಿನಂತೆ ಪೊಲೀಸರು ಆರೋಪಿ ಕೃಷ್ಣನಗರ ನಿವಾಸಿ ಮಹಮ್ಮದ್ ಇರ್ಷಾದ್(20 ವ)ಎಂಬಾತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.