ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನೌಕರರ ಸಂಘ ಪುತ್ತೂರು ವಿಭಾಗ – ಅಧ್ಯಕ್ಷ:ಜೈರಾಜ್,ಕಾರ್ಯದರ್ಶಿ:ಅಶೋಕ್ ಸಿ.ಸಿ,ಕೋಶಾಧಿಕಾರಿ:ರಾಜೇಂದ್ರ ಕೆ

0

ಪುತ್ತೂರು: ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನೌಕರರ ಸಂಘ(ರಿ.659) ಸ್ಥಳೀಯ ಸಮಿತಿ ಪುತ್ತೂರು ವಿಭಾಗದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಮೆಸ್ಕಾಂ ಕಂಪೆನಿ ಉಪಾಧ್ಯಕ್ಷ ಎಚ್.ಎಸ್ ಗುರುಮೂರ್ತಿ, ಸಂಘಟನಾ ಕಾರ್ಯದರ್ಶಿ ಶಂಕರ್ ಪ್ರಕಾಶ್ ಮತ್ತು ಪುತ್ತೂರು ಕೇಂದ್ರ ಸಮಿತಿ ಸದಸ್ಯರಾದ ಪುತ್ತು ಜೆ.ರವರ ಉಪಸ್ಥಿತಿಯಲ್ಲಿ ಇತ್ತೀಚೆಗೆ ನೆರವೇರಿತು.

ಅಧ್ಯಕ್ಷರಾಗಿ ಕುಂಬ್ರ ಸ್ಟೇಷನ್ ಆಪರೇಟರ್ ಜೈರಾಜ್, ಉಪಾಧ್ಯಕ್ಷರಾಗಿ ಸುಳ್ಯ ಪವರ್ ಮ್ಯಾನ್ ಜಯರಾಮ ನಾಯಕ್, ಕಾರ್ಯದರ್ಶಿಯಾಗಿ ಪುತ್ತೂರು ವಿಭಾಗದ ಸಹಾಯಕ ಅಶೋಕ್ ಸಿ.ಸಿ, ಜೊತೆ ಕಾರ್ಯದರ್ಶಿಯಾಗಿ ಬೆಟ್ಟಂಪಾಡಿ ಜ್ಯೂನಿಯರ್ ಪವರ್ ಮ್ಯಾನ್ ಬಂದೇ ನಮಾಜ, ಕೋಶಾಧಿಕಾರಿಯಾಗಿ ಕುಂಬ್ರ ಮೆಕ್ಯಾನಿಕ್ ದರ್ಜೆ-2 ರಾಜೇಂದ್ರ ಕೆ, ಸದಸ್ಯರಾಗಿ ಪುತ್ತೂರು ಪವರ್ ಮ್ಯಾನ್ ಉಮೇಶ್ ಕೆ, ಉಪ್ಪಿನಂಗಡಿ ಪವರ್ ಮ್ಯಾನ್ ಅಕ್ಬರ್ ಹುಸೇನ್, ಈಶ್ವರಮಂಗಲ ಪವರ್ ಮ್ಯಾನ್ ದಿತೀಶ್ ಎಸ್, ಸವಣೂರು ಮೆಕ್ಯಾನಿಕ್ ರಂಜಿತ್ ಕುಮಾರ್, ಮಹಿಳಾ ಸದಸ್ಯರಾಗಿ ಪುತ್ತೂರು ಜ್ಯೂನಿಯರ್ ಇಂಜಿನಿಯರ್ ಶ್ರೀಮತಿ ಗೀತಾ ಎಂ.ಕೆ, ಪುತ್ತೂರು ಮೇಲ್ವಿಚಾರಕಿ ಶ್ರೀಮತಿ ಕಮಲಾಕ್ಷಿ ಕೆ.ರವರು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here