ಪ್ರಥಮ:ಎಫ್ ಸಿ ಅರಿಯಡ್ಕ, ದ್ವಿತೀಯ:ಓಂ ಶಕ್ತಿ ಪದಡ್ಕ
ಪಟ್ಟೆ ಶ್ರೀ ಕೃಷ್ಣ ಯುವಕ ಮಂಡಲ ಇದರ ಆಶ್ರಯದಲ್ಲಿ ಪಟ್ಟೆ ಪ್ರೀಮಿಯರ್ ಲೀಗ್ ಹೊನಲು ಬೆಳಕಿನ ಬಲಿಷ್ಠ 8 ಐಕಾನ್ ಗಳನ್ನು ಒಳಗೊಂಡ ವಾಲಿಬಾಲ್ ಪಂದ್ಯಾಕೂಟ ಶ್ರೀ ಕೃಷ್ಣ ಟ್ರೋಫಿ 2025 ಪಂದ್ಯಾಟ ಪಟ್ಟೆ ಶ್ರೀ ಕೃಷ್ಣ ಶಾಲಾ ಕ್ರೀಡಾಂಗಣದಲ್ಲಿ ಫೆ.25ರಂದು ನಡೆಯಿತು.
ಪ್ರಮುಖ ತಂಡಗಳಾದ ಚಿಕ್ಕಮಂಗಳೂರು, ಉಡುಪಿ,ದ.ಕ ಆಟಗಾರರನ್ನು ಒಳಗೊಂಡ 8 ತಂಡಗಳ ಲೀಗ್ ಮ್ಯಾಚ್ ಇದಾಗಿದ್ದು,ಪಟ್ಟೆ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಯ ಪಂದ್ಯಾಟದಲ್ಲಿ ಪ್ರಥಮ ಸ್ಥಾನಿಯಾಗಿ 7025 ಮೊತ್ತಗಳೊಂದಿಗೆ ಎಫ್ ಸಿ ಅರಿಯಡ್ಕ ತನ್ನ ಮಡಿಲೇರಿಸಿಕೊಂಡಿತು. ಧ್ವಿತೀಯ ಸ್ಥಾನಿಯಾಗಿ 5025 ಮೊತ್ತದೊಂದಿಗೆ ಓಂ ಶಕ್ತಿ ಪದಡ್ಕ ಪಡೆದುಕೊಂಡಿತು. ತೃತೀಯ ಸ್ಥಾನಿಯಾಗಿ 3025 ಮೊತ್ತದೊಂದಿಗೆ ಕುದ್ಕಾಡಿ ಫ್ರೆಂಡ್ಸ್ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಎಸ್ ಕೆ ವೈ ಸಿ ಪಟ್ಟೆ ಚತುರ್ಥ ಸ್ಥಾನಿಯಾಗಿ 2025ರೂ ಮೊತ್ತಗಳೊಂದಿಗೆ ಪ್ರಶಸ್ತಿ ಪಡೆದುಕೊಂಡಿತು.