





ಪುತ್ತೂರು : ಕೆಯ್ಯೂರು ಗ್ರಾಮದ ಬೊಳಿಕ್ಕಳ ಮಠ ಶ್ರೀ ಸುಬ್ರಹ್ಮಣ್ಯ ದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ ಮಾ.4ರಿಂದ ಮಾ.6ರವರೆಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮತ್ತು ವಾಸ್ತು ತಜ್ಞ ಎಂ.ಎಸ್.ಪ್ರಸಾದ್ ಮುನಿಯಂಗಳ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ.


ಮಾ.4ರಂದು ಸಂಜೆ 5.30ರಿಂದ ದೇವತಾ ಪ್ರಾರ್ಥನೆ, ಆಚಾರ್ಯ ವರಣ,ಸ್ವಸ್ತಿ ಪುಣ್ಯಾಹವಾಚನ,ಪ್ರಾಸಾದ ಶುದ್ದಿ,ರಕ್ಷೋಘ್ನ ಹೋಮ,ವಾಸ್ತು ಹೋಮ,ವಾಸ್ತು ಪೂಜಾ ಬಲಿ,ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ,ಅನ್ನ ಸಂತರ್ಪಣೆ ನಡೆಯಲಿದೆ.





ಮಾ.5ರಂದು ಬೆಳಿಗ್ಗೆ 6.30ರಿಂದ ಮಹಾಗಣಪತಿ ಬಿಂಬ ಶುದ್ಧಿ,ಕಲಶ ಪೂಜೆ, ಶಾಂತಿಹೋಮ,ತತ್ವ ಹೋಮ,ತತ್ವಕಲಶ ಪೂಜೆ, ಅನುಜ್ಞಾ ಕಲಶಾಭಿಷೇಕ,ತತ್ವ ಕಲಶಾಭಿಷೇಕ,ಶಯ್ಯಾ ಪೂಜೆ,ಧ್ಯಾನ ಸಂಕೋಚ ಕ್ರಿಯೆ,ಜೀವ ಕಲಶ ಪೂಜೆ, ಜೀವೋದ್ವಾಸ,ಜೀವ ಕಲಶ ಶಯ್ಯಾರೋಹಣ ,ಮಧ್ಯಾಹ್ನ ಮಹಾಪೂಜೆ ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.ಸಂಜೆ 4 ರಿಂದ ಕುಣಿತ ಭಜನೆ,5.30ರಿಂದ ಕುಂಭೇಶ ಕರ್ಕರೀ ಪೂಜೆ, ಬ್ರಹ್ಮಕಲಶ ಪೂಜೆ, ಧ್ಯಾನಾಧಿವಾಸ ಕ್ರಿಯೆ,ಕಲಶಾಧಿವಾಸ,ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಮಾ.6ರಂದು ಬೆಳಿಗ್ಗೆ 6ರಿಂದ ಶ್ರೀ ಮಹಾಗಣಪತಿ ಹೋಮ,ನಾಂದೀ ಪುಣ್ಯಾಹ,7.37ರಿಂದ ಮೀನ ಲಗ್ನ ಸುಮಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಪುನರ್ ಪ್ರತಿಷ್ಠೆ ಜೀವ ಕಲಶಾಭಿಷೇಕ : ಬ್ರಹ್ಮಕಲಶಾಭಿಷೇಕ ನಡೆದು ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ವೈದಿಕ ಮಂತ್ರಾಕ್ಷತೆ ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.









