ಮಾ.1ಕ್ಕೆ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ

0

ಪುತ್ತೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಮಸೂದೆ 2024ರ ವಿರುದ್ಧ ವಕ್ಫ್ ಸಂರಕ್ಷಣಾ ಬೃಹತ್ ಪ್ರತಿಭಟನೆ ಮಾ.1ರಂದು ಬೆಳಿಗ್ಗೆ ಗಂಟೆ 10ಕ್ಕೆ ಪುತ್ತೂರು ತಾಲೂಕು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ನಡೆಯಲಿದೆ ಎಂದು ಮುಸ್ಲಿಂ ಯುವಜನ ಪರಿಷತ್ ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಮತ್ತು ಪುತ್ತೂರು ತಾಲೂಕು ಮುಸ್ಲಿಂ ಒಕ್ಕೂಟ ಇದರ ಆಶ್ರಯದಲ್ಲಿ ಈ ಪ್ರತಿಭಟನೆ ನಡೆಯಲಿದೆ ಎಂದ ಅವರು ವಕ್ಫ್ ತಿದ್ದುಪಡಿ ಮಸೂದೆಯ ಪ್ರಕಾರ ರಾಜ್ಯ ಕಂದಾಯ ಕಾನೂನುಗಳ ಅಡಿಯಲ್ಲಿ ಜಿಲ್ಲಾಧಿಕಾರಿಗಳು ವಕ್ಫ್ ಸಮೀಕ್ಷೆಗಳನ್ನು ನಡೆಸುತ್ತಾರೆ. ವಕ್ಪ್ ಆಸ್ತಿಗಳ ಇತರ ಸರಕಾರಿ ಸೊತ್ತಗಳಂತೆ ಸಾರ್ವತ್ರಿಕವಾಗಿರುತ್ತದೆ. ಕೇಂದ್ರ ಸರಕಾರವು ವಕ್ಫ್ ಸೊತ್ತುಗಳ ಮೇಲೆ ಅಧಿಕಾರ ಚಲಾಯಿಸುತ್ತದೆ ಎಂದವರು ಹೇಳಿದರು.


ಭೂಕಂದಾಯ ದಾಖಲೆಯಲ್ಲಿ ಇವತ್ತು ಕೂಡಾ ವಕ್ಪ್ ಹೆಸರಿನಲ್ಲಿದೆ:
ದ.ಕ.ಮುಸ್ಲಿಂ ಯುವಜನ ಪರಿಷತ್ ರಾಜ್ಯ ಸಂಚಾಲಕ ನ್ಯಾಯವಾದಿ ಮತ್ತು ನೋಟರಿ ಎಂ.ಪಿ.ಅಬೂಬಕ್ಕರ್ ಅವರು ಮಾತನಾಡಿ ಭಾರತವನ್ನು ಆಳಿದ ರಾಜ ಮಹಾರಾಜರು ದೊಡ್ಡ ದೊಡ್ಡ ಶ್ರೀಮಂತರು ಹೆಚ್ಚು ಕಡಿಮೆ ಸುಮಾರು ಒಂದೂವರೆ ಲಕ್ಷ ಭೂಮಿಯನ್ನು ವಕ್ಫ್‌ಗೆ ದಾನ ಮಾಡಿದ್ದರು. ಆದರೆ ನಮ್ಮಲ್ಲಿ ವಕ್ಫ್ ಕಮಿಟಿ ಸರಿಯಾದ ನಿಯಂತ್ರಣದಲ್ಲಿ ಇಲ್ಲದ ಕಾರಣ ಅದರಲ್ಲಿ ಇತ್ತೀಚೆಗೆ ಅದರಲ್ಲಿ ಹಲವಾರು ಸ್ಕೂಲ್, ಸರಕಾರಿ ಕಚೇರಿ, ದೇವಸ್ಥಾನಗಳು ಸಹಿತ ಬೇಸಾಯ ಮಾಡುತ್ತಿದ್ದಾರೆ. ಆದರೆ ಭೂಕಂದಾಯ ದಾಖಲೆಯಲ್ಲಿ ಇವತ್ತು ಕೂಡಾ ಅದು ವಕ್ಪ್ ಭೂಮಿ ಎಂದು ದಾಖಲೆ ಇದೆ. ಈಗ ವಕ್ಫ್ ಅಡಿಯಲ್ಲಿ ಕೇವಲ 15ಸಾವಿರ ಎಕ್ರೆ ಭೂಮಿಮಾತ್ರ ಇದೆ. ಇದು ಬಹಳ ದುರದೃಷ್ಟಕರ ವಿಚಾರ. ಸುಪ್ರೀಂ ಕೋರ್ಟ್ ಪ್ರಕಾರ ಒಮ್ಮೆ ವಕ್ಫ್ ಮಾಡಿದ್ದರೆ ಅದು ಯಾವತ್ತೂ ವಕ್ಫ್ ಆಗಿರುತ್ತದೆ. ಅದನ್ನು ಏನು ಮಾಡಲಾಗುವುದಿಲ್ಲ ಎಂದು ತೀರ್ಪು ನೀಡಿದೆ ಎಂದು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅಜಾದ್, ಮುಸ್ಲಿಂ ಯುವಜನ ಪರಿಷತ್ ಪ್ರಧಾನ ಕಾರ್ಯದರ್ಶಿ ನೌಷಾದ್ ಹಾಜಿ ಬೊಳುವಾರು. ಅನ್ಸಾರುದ್ದೀನ್ ಜಮಾಅತ್ ಕಮಿಟಿ ಸದಸ್ಯ ವಿ.ಕೆ ಶರೀಫ್ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here