
ಕಾಣಿಯೂರು: ಮುಹ್ಯದ್ದೀನ್ ಜುಮಾ ಮಸೀದಿ ಪಳ್ಳತ್ತಾರು ಬೆಳಂದೂರು ಇದರ ಅಧೀನದಲ್ಲಿ ಕಾರ್ಯಚರಿಸುವ ಪ್ರವಾಸಿ ಸಂಘಟನೆ ಖಿದ್ಮತುಲ್ ಇಸ್ಲಾಂ ಗಲ್ಫ್ ಸಮಿತಿಯ ವತಿಯಿಂದ ಜಮಾಅತ್ ಗೆ ಒಳಪಟ್ಟ ಮನೆಗಳಿಗೆ ರಂಝಾನ್ ಕಿಟ್ ಹಾಗೂ ಜಮಾಅತ್ ಮತ್ತು ಗುಂಡಿನಾರು,ತಕ್ವಾ ಮಸೀದಿಗಳ ಉಸ್ತಾದರುಗಳಿಗೆ ಹದಿಯ್ಯತು ರಮಳಾನ್ ವಿತರಣೆ ನಡೆಯಿತು.

ಜಮಾಅತ್ ಗೌರವಾಧ್ಯಕ್ಷರಾದ ಸಯ್ಯಿದ್ ಮುಹಮ್ಮದ್ ಮದನಿ ತಂಙಳ್ ಮೊಗ್ರಾಲ್ ಕಿಟ್ ವಿತರಣೆಗೆ ಚಾಲನೆ ನೀಡಿದರು.
ಜಮಾಅತ್ ಖತೀಬ್ ಮುಸ್ತಾಕ್ ಸಖಾಫಿ, ಅಧ್ಯಕ್ಷರಾದ ಉಪ್ಪಕುಂಞಿ ಹಾಜಿ , ಗಲ್ಫ್ ಸಮಿತಿ ಪ್ರತಿನಿಧಿಗಳಾದ ಅಶ್ರಫ್ ಅಮ್ಜದಿ ಬನಾರಿ, ಯಾಕುಬ್ ಹಾಜಿ ಬನಾರಿ, ರಫೀಕ್ ಕೂಂಕ್ಯ, ಶಮೀರ್ ನೇರೋಳ್ತಡಿ, ಆಸಿಫ್ ಗುಂಡಿನಾರು, ಶಾಫಿ ಬನಾರಿ, ಆರಿಫ್ ಗುಂಡಿನಾರು ಹಾಗೂ ಜಮಾಅತ್ ಕಮಿಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.