ಪುತ್ತೂರು: ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಭಾಗವಹಿಸಿದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಪೆರ್ಲಂಪಾಡಿ ನಿವಾಸಿ ಪುತ್ತೂರಿನ ಮುತ್ತು ಬಿರುದಾಂಕಿತ ಡಾ. ಮಹೇಶ್ ಗೌಡ ಅವರು ತ್ರಿವೇಣಿ ಸಂಗಮದ ಪವಿತ್ರ ಗಂಗಾಜಲವನ್ನು ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಮರ್ಪಣೆ ಮಾಡಿದರು.
ಕುಂಭ ಮೇಳದಲ್ಲಿ ಭಾಗವಹಿಸಿದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಡಾ. ಮಹೇಶ್ ಗೌಡ ಅವರು ಮೂಲತಃ ಪೆರ್ಲಂಪಾಡಿ ಕೊಳ್ತಿಗೆ ಗ್ರಾಮದವರಾಗಿದ್ದಾರೆ. ಕುಂಭ ಮೇಳದಲ್ಲಿ ಭಾಗವಹಿಸಿದ್ದ ಅವರು ಅಲ್ಲಿಂದ ಪವಿತ್ರ ಗಂಗಾಜಲವನ್ನು ತಂದು ಹಾಸನದಿಂದ ಸುಮಾರು 125 ಕಿ ಮೀ ದೂರ ಕಾಲ್ನಡಿಗೆಯ ಮೂಲಕ ಪಕ್ಷದ ಸುಮಾರು 250 ಕಾರ್ಯಕರ್ತರ ಜೊತೆ ತೆರಳಿ ಧರ್ಮಸ್ಥಳ ಸಹಿತ ಹಲವು ದೇವಸ್ಥಾನಗಳಿಗೆ ಸಮರ್ಪಣೆ ಮಾಡಿದ್ದಾರೆ. ಮಾ.2ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿ ಗಂಗಾಜಲವನ್ನು ಸಮರ್ಪಣೆ ಮಾಡಿದ್ದಾರೆ. ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಡಾ.ಮಹೇಶ್ ಗೌಡ ಅವರಿಗೆ ಪ್ರಸಾದ ನೀಡಿದರು. ಈ ಸಂದರ್ಭ ಮಹೇಶ್ ಗೌಡ ಅವರ ಸಹೋದರಿ ಅಮ್ಚಿನಡ್ಕ ನಿವಾಸಿ ಶೋಭಾ ಜೊತೆಗಿದ್ದರು.