ಪುತ್ತೂರು: ಬಸ್ ಹಾಗೂ ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದ ಘಟನೆ ಮಾ.2ರಂದು ಸಂಜೆ ನೆಹರುನಗರ ಮಂಜಲ್ಪಡ್ಪು ಮಧ್ಯೆ ಪೆಟ್ರೋಲ್ ಪಂಪ್ ಬಳಿ ನಡೆದಿದ್ದು, ಅಪಘಾತದಲ್ಲಿ ರಿಕ್ಷಾದಲ್ಲಿದ್ದ ಮಹಿಳೆ ಮತ್ತು ಮಗು ಮೃತಪಟ್ಟು ನಾಲ್ವರಿಗೆ ಗಾಯಗೊಂಡಿದ್ದಾರೆ.

ಕೆದಂಬಾಡಿ ಗ್ರಾಮದ ಗಟ್ಟಮನೆ ನಿವಾಸಿ ಮೇಸಿ ಮಹಮ್ಮದ್ರವರ ಪತ್ನಿ ಜಮೀಲಾ (52ವ.) ಹಾಗೂ ಮೊಮ್ಮಗ ತಬ್ಸೀರ್(4 ವ.) ಮೃತಪಟ್ಟವರು. ಆಟೋದಲ್ಲಿದ್ದ ಸಂಬಂಧಿಕೆ ಬಲ್ಕೀಸ್, ಬಾಲಕಿ ಜಾಹಿದಾ, ಚಾಲಕ ಮೊಹಮ್ಮದ್ ಮತ್ತು ಮಗುವೊಂದು ಗಾಯಗೊಂಡಿದ್ದು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ. ಮಹಮ್ಮದ್ ಎಂಬವರು ರಿಕ್ಷಾವನ್ನು ಕುಂಬ್ರ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಪುತ್ತೂರು ನೆಹರುನಗರ ಸಮೀಪ ವಿರುದ್ದ ದಿಕ್ಕಿನಿಂದ ಮಂಗಳೂರು ಕಡೆ ಹೋಗುತ್ತಿದ್ದ ಬಸ್ ನಡುವೆ ಈ ಅಪಘಾತ ನಡೆದಿದೆ. ಸಿಸಿ ಟಿ.ವಿ.ಯಲ್ಲಿ ಅಪಘಾತದ ದೃಶ್ಯ ದಾಖಲೆಯಾಗಿದೆ. ಪುತ್ತೂರು ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ.