ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಚುನಾವಣೆ-ಮತ ಎಣಿಕೆ

0

ಅನರ್ಹರಿಗೂ ಮತದಾನಕ್ಕೆ ಹೈಕೋರ್ಟ್ ಅವಕಾಶ-ಫಲಿತಾಂಶ ಘೋಷಣೆಗೆ ತಡೆ

ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆಗಾಗಿ ಮಾ.2ರಂದು ಬೆಳಿಗ್ಗೆ 9 ರಿಂದ ಸಂಜೆ 4ರ ತನಕ ಸಂಘದ ಪ್ರಧಾನ ಕಚೇರಿಯಲ್ಲಿ ಚುನಾವಣೆ ನಡೆಯಿತು. ಅನರ್ಹ ಮತದಾರರಿಗೂ ಮತದಾನಕ್ಕೆ ಹೈಕೋರ್ಟ್ ಅವಕಾಶ ನೀಡಿದ್ದು ಆದರೆ ಮತ ಎಣಿಕೆ ನಡೆಸಿ ಫಲಿತಾಂಶ ಘೋಷಣೆಗೆ ತಡೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಮತದಾನದ ಬಳಿಕ ಮತ ಎಣಿಕೆ ನಡೆದರೂ ಚುನಾವಣಾಧಿಕಾರಿಯವರು ಫಲಿತಾಂಶ ಘೋಷಣೆ ಮಾಡಿಲ್ಲ. ಹೈಕೋರ್ಟ್ ಆದೇಶದ ಬಳಿಕ ಫಲಿತಾಂಶ ಘೋಷಣೆಯಾಗಲಿದೆ ಎಂದು ಚುನಾವಣಾಧಿಕಾರಿ ಶಿವಲಿಂಗಯ್ಯ ಅವರು ತಿಳಿಸಿದ್ದಾರೆ.

ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕರ ಆಯ್ಕೆಗಾಗಿ ಚುನಾವಣೆ ನಡೆಯಿತು. ಒಟ್ಟು 24 ಅಭ್ಯರ್ಥಿಗಳು ಕಣದಲ್ಲಿದ್ದರು. ಸಹಕಾರ ಭಾರತಿಯ 12, ಸಂಘದ ಮಾಜಿ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ ಸಹಕಾರಿ ಬಳಗದ 11 ಹಾಗೂ ಕಾಂಗ್ರೆಸ್ ಬೆಂಬಲಿತ ಓರ್ವರು ಚುನಾವಣೆಗೆ ಸ್ಪರ್ಧಿಸಿದ್ದರು.

ಸಾಲಗಾರರ ಕ್ಷೇತ್ರದ ಸಾಮಾನ್ಯ ಸ್ಥಾನಕ್ಕೆ ಸಹಕಾರ ಭಾರತಿಯಿಂದ ಅಶೋಕ ಗೋಕುಲನಗರ, ಜನಾರ್ದನ ಪೂಜಾರಿ ಕದ್ರ, ಪ್ರಶಾಂತ ಆರ್.ಕೆ. ಕಾಜರುಕ್ಕು, ರಘುರಾಮ ಕೆ.ನವಕೇವಳ, ಸುಭಾನು ರೈ, ರಮೇಶ್ ಭಟ್ ಉಪ್ಪಂಗಳ ಸಹಕಾರಿ ಬಳಗದ ಉದಯ ಸಾಲಿಯಾನ್ ಮಾಯಿಲ್ಗ, ಕೇಶವ ಗೌಡ ಆಲಡ್ಕ, ದಯಾನಂದ ರೈ ಮನವಳಿಕೆ, ರಮೇಶ ಯು.ಉಪ್ಪಂಗಳ, ಶೇಖರ ಗೌಡ ಹಿರಿಂಜ, ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಸಹಕಾರ ಭಾರತಿಯ ಜಯಕರ ಪೂಜಾರಿ ಕಲ್ಲೇರಿ, ರಮೇಶ್ ಭಟ್ ಉಪ್ಪಂಗಳ ಸಹಕಾರಿ ಬಳಗದ ಶ್ರೀಮತಿ ವಿಜಯ ಎಸ್.ಅಂಬಾ, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ಸಹಕಾರ ಭಾರತಿಯ ದಯಾನಂದ ಎನ್ ಆಲಡ್ಕ, ರಮೇಶ್ ಭಟ್ ಉಪ್ಪಂಗಳ ಸಹಕಾರಿ ಬಳಗದ ಪದ್ಮಪ್ಪ ಗೌಡ ಕೆದುಂಬಾಡಿ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ರಮೇಶ್ ಭಟ್ ಉಪ್ಪಂಗಳ ಸಹಕಾರಿ ಬಳಗದ ಕುಂಞ ಮುಗೇರ, ಸಹಕಾರ ಭಾರತಿಯ ಮಾಧವ ಶಾಂತಿಗುರಿ, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ರಮೇಶ್ ಭಟ್ ಉಪ್ಪಂಗಳ ಬಳಗದ ಅಶೋಕ ಪೆರಾಬೆ, ಸಹಕಾರ ಭಾರತಿಯ ನಿರಂಜನ ಎನ್ ಏಣಿತ್ತಡ್ಕ, ಮಹಿಳಾ ಮೀಸಲು ಸ್ಥಾನದಿಂದ ಸಹಕಾರ ಭಾರತಿಯ ಗಾಯತ್ರಿ ಚಾಮೆತ್ತಡ್ಕ, ಸುಂದರಿ ಬರೆಂಬಾಡಿ, ಕಾಂಗ್ರೆಸ್ ಬೆಂಬಲಿತ ಮೇನ್ಸಿ ಸಜನ್ ಅಗತ್ತಾಡಿ, ರಮೇಶ್ ಭಟ್ ಉಪ್ಪಂಗಳ ಸಹಕಾರಿ ಬಳಗದ ರತ್ನಾ ಬಿ.ಕೆ ಕೊಂಡಾಡಿಕೊಪ್ಪ ಸ್ಪರ್ಧಿಸಿದ್ದರು.

ಸಾಲಗಾರರಲ್ಲದ ಕ್ಷೇತ್ರದ 1 ಸ್ಥಾನಕ್ಕೆ ರಮೇಶ್ ಭಟ್ ಉಪ್ಪಂಗಳ ಬಳಗದ ಲೋಕೇಶ ಕಮ್ಮಿತ್ತಿಲು, ಸಹಕಾರ ಭಾರತಿಯ ಸುಧೀಶ್ ಪಟ್ಟೆ ಸ್ಪರ್ಧೆ ಮಾಡಿದ್ದರು.

ಮತದಾನದ ವಿವರ:
ಸಾಲಗಾರ ಕ್ಷೇತ್ರದಲ್ಲಿ 2059 ಮತದಾರರಿದ್ದು ಈ ಪೈಕಿ 1808 ಮತದಾರರು ಮತಚಲಾವಣೆ ಮಾಡಿದ್ದು ಶೇ.88 ಮತದಾನ ನಡೆದಿದೆ. ಸಾಲಗಾರರಲ್ಲದ ಕ್ಷೇತ್ರದಲ್ಲಿ 412 ಮತದಾರರಿದ್ದು ಈ ಪೈಕಿ 300 ಮತದಾರರು ಮತ ಚಲಾವಣೆ ಮಾಡಿದ್ದು ಶೇ.75 ಮತದಾನವಾಗಿದೆ.

ಅನರ್ಹರಿಗೂ ಮತದಾನಕ್ಕೆ ಅವಕಾಶ:
ಸಂಘದ ಸದಸ್ಯರಾದವರು 5 ವರ್ಷದ ಅವಧಿಯಲ್ಲಿ 2 ಮಹಾಸಭೆಗೆ ಹಾಜರಿ, 5 ವರ್ಷದ ಅವಧಿಯಲ್ಲಿ ಕನಿಷ್ಟ 1 ವರ್ಷ ಸಂಘದಲ್ಲಿ ವ್ಯವಹಾರ ಮಾಡಿದಲ್ಲಿ ಮಾತ್ರ ಮತದಾನಕ್ಕೆ ಅವಕಾಶವಿದೆ. ಅಲ್ಲದೇ ವಾಯಿದೆ ದಾಟಿದ ಸಾಲಗಾರರಾಗಿದ್ದಲ್ಲಿ ಅವರಿಗೂ ಮತದಾನಕ್ಕೆ ಅವಕಾಶವಿಲ್ಲ.

ಈ ಹಿನ್ನೆಲೆಯಲ್ಲಿ ಅನರ್ಹಗೊಂಡಿದ್ದ ಮತದಾರರ ಪರವಾಗಿ ಎಲ್ಯಣ್ಣ ಪೂಜಾರಿ ಹಾಗೂ ಇತರರು ಹೈಕೋರ್ಟ್ ಮೊರೆ ಹೋಗಿದ್ದು ಇದರ ವಿಚಾರಣೆ ನಡೆಸಿದ ಹೈಕೋರ‍್ಟ್ 423 ಮಂದಿಗೆ ಮತದಾನಕ್ಕೆ ಅವಕಾಶ ನೀಡಿ ಮುಂದಿನ ಆದೇಶದ ತನಕ ಫಲಿತಾಂಶ ಘೋಷಣೆಗೆ ತಡೆ ನೀಡಿತ್ತು. ಹೈಕೋರ್ಟ್ ಆದೇಶದಂತೆ ಈ ಮತದಾರರಿಗೆ ಪ್ರತ್ಯೇಕ ಬೂತ್‌ನಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದ್ದು 356 ಮಂದಿ ಚಲಾಯಿಸಿದ್ದಾರೆ. ಈ ಮತದಾನದ ಮತ ಎಣಿಕೆಯೂ ಸಂಜೆ ನಡೆಯಿತು.

ಮಾತಿನಚಕಮಕಿ:
ಮತದಾನದ ಕೇಂದ್ರ ಹೊರಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಹಾಗೂ ರಮೇಶ್ ಭಟ್ ಉಪ್ಪಂಗಳ ಸಹಕಾರಿ ಬಳಗದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯೂ ನಡೆದ ಘಟನೆ ನಡೆದಿದೆ. ಎರಡೂ ಬಣದ ಕಾರ್ಯಕರ್ತರು ಮತದಾರರ ಮನವೊಲಿಕೆ ಮಾಡಿ ತಮ್ಮ ಬಣದ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಅಭ್ಯರ್ಥಿಗಳ ಕ್ರಮ ಸಂಖ್ಯೆ ಹಾಗೂ ಚಿಹ್ನೆಯಿದ್ದ ಚೀಟಿಯೊಂದನ್ನು ನೀಡುತ್ತಿದ್ದರು. ಈ ಚೀಟಿ ಹಂಚುವಿಕೆ ವಿಚಾರದಲ್ಲಿ ಎರಡೂ ಗುಂಪಿನ ಕಾರ್ಯಕರ್ತರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು.

ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಎರಡೂ ಗುಂಪಿನ ಕಾರ್ಯಕರ್ತರು ಕೇಸರು ಶಾಲು ಹಾಕಿ ಮತದಾರರ ಮನವೊಲಿಕೆ ಮಾಡುತ್ತಿದ್ದರು. ಚುನಾವಣೆ ಮುಕ್ತಾಯದ ಹಂತದಲ್ಲಿ ಎರಡು ಗುಂಪಿನವರೂ ಭಾರತ ಮಾತಾಕೀ ಜೈ, ನರೇಂದ್ರ ಮೋದಿಗೆ ಜೈಕಾರ ಕೂಗಿದರು.

ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ದ.ಕ.ಜಿಲ್ಲೆ ಮಂಗಳೂರು ಇಲ್ಲಿನ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ.ಅವರು ಚುನಾವಣಾಧಿಕಾರಿಯಾಗಿದ್ದರು.

LEAVE A REPLY

Please enter your comment!
Please enter your name here