ಪುತ್ತೂರು:ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರವು ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎನ್ನುವ ಧ್ಯೇಯದೊಂದಿಗೆ ಪುತ್ತೂರು ಶಾಂತಿಗೋಡು ದ.ಕ.ಜಿ.ಪ.ಹಿ.ಪ್ರಾ. ಶಾಲೆಯಲ್ಲಿ ಮಾ.2ರಂದು ಆರಂಭಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ರವರು, ರಾಷ್ಟ್ರೀಯ ಸೇವಾಯೋಜನೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುವುದರೊಂದಿಗೆ ವ್ಯಕ್ತಿತ್ವದ ವಿಕಸನವನ್ನು ಮಾಡುವುದರ ಜೊತೆಗೆ ಬದುಕುವ ಶೈಲಿಯನ್ನು ತಿಳಿಸಿಕೊಡುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಅತಿಥಿ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಸಾಮಾಜಿಕ ಬದ್ಧತೆಯನ್ನು ತಿಳಿಯಲು ಎನ್.ಎಸ್.ಎಸ್ ಸಹಕಾರಿ ಎಂದರು.
ಇನ್ನೋರ್ವ ಅತಿಥಿ ಶಿವಕುಮಾರ್ ಮುಕ್ರಂಪಾಡಿ ಎನ್.ಎಸ್.ಎಸ್.ಎಂಬುದು ಸಮಾಜಮುಖಿ ಕೆಲಸಕ್ಕೆ ಮೊದಲ ಹೆಜ್ಜೆ ಎನ್ನುವುದರ ಜೊತೆಗೆ ಶಿಭಿರಾರ್ಥಿಗಳು ಮುಂದಿನ ದಿನಗಳಲ್ಲಿ ಕನ್ನಡ ಶಾಲೆಗಳಿಗೆ ಸಮಯವನ್ನು ಮೀಸಲಿಡುವುದರ ಜೊತೆಗೆ, ಪರಿಸರ ಸ್ನೇಹಿಗಳಾಗಿ ಎಂದರು.
ದ.ಕ.ಜಿ.ಪ.ಹಿ.ಪ್ರಾ. ಶಾಲೆಯ ಮುಖ್ಯ ಗುರು ಡಾ. ವಿನುತಾ ವೈ.ಎಮ್ ರವರು ಎನ್.ಎಸ್.ಎಸ್ ಶಿಸ್ತು ಸಂಯಮವನ್ನು ತಿಳಿಸಿಕೊಡುತ್ತದೆ ಎಂದರು.
ದ.ಕ.ಜಿ.ಪ.ಹಿ.ಪ್ರಾ.ಶಾಲೆ ಶಾಂತಿಗೋಡು ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಆನಂದ ಬಲ್ಯಾಯ ರವರು ರಾಷ್ಟ್ರೀಯ ಸೇವಾಯೋಜನೆಯ ಇಂತಹ ಶಿಬಿರಗಳು ಉತ್ತಮ ಪ್ರಜೆಯಾಗಲು ಸಹಕಾರಿ ಎನ್ನುವುದರ ಜೊತೆಗೆ ಇಂತಹ ದುಡಿಮೆಯ ಫಲ ಸಾಧನೆಯ ಪ್ರತಿಫಲವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್.ಎಲ್ ಶೆಟ್ಟಿ ವಹಿಸಿದ್ದರು.
ವೇದಿಕೆಯಲ್ಲಿ ನರಿಮೊಗರು ಗ್ರಾಮಪಂಚಾಯತ್ ಸದಸ್ಯರಾದ ನಾಗಮ್ಮ ಬಾಲಕೃಷ್ಣ, ದ.ಕ.ಜಿ.ಪ.ಹಿ.ಪ್ರ.ಶಾಲೆ ಶಾಂತಿಗೋಡು ನ ಎಸ್.ಡಿ.ಎಂಸಿ ಅಧ್ಯಕ್ಷ ನಾಗೇಶ್ ಪೂಜಾರಿ ಸಾರಕೆರೆ, ಉಪಾಧ್ಯಕ್ಷರಾದ ಉಷಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಕೈಂದಾಡಿ, ವಿನೋದ್ ಸುವರ್ಣ ಕರ್ಪತಮೂಲೆ ,ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ರಾಜಲಕ್ಷ್ಮೀ ಎಸ್ ರೈ, ಉಪಪ್ರಾಂಶುಪಾಲ ಶೇಷಗಿರಿ ಎಂ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ನಿರಂಜನ್ ವಿ ಸ್ವಾಗತಿಸಿ, ಸಹ ಯೋಜನಾಧಿಕಾರಿ ಕೌಸಲ್ಯಾ ಎಸ್ ವಂದಿಸಿದರು. ಘಟಕ ವಿದ್ಯಾರ್ಥಿ ಸಂಘಟಕ, ದ್ವಿತೀಯ ಬಿ.ಎ ದೀಕ್ಷಿತ್ ಜಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಶಿಭಿರಾರ್ಥಿಗಳಾದ ಅಸ್ಮಿತಾ ಎ ಹಾಗೂ ನಂದಿನಿ ಎ.ಆರ್ ನಿರ್ವಹಿಸಿದರು.