ಪುತ್ತೂರು: ಮೂಡುಪಡುಕೋಡಿ ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರದ ವಿದ್ಯಾರ್ಥಿಗಳು ಚಿತ್ರದುರ್ಗದ ನವೋದಯ ಸಂಸ್ಥೆ ಸಂಘಟಿಸಿರುವ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಪರೀಕ್ಷೆಯಲ್ಲಿ ಕೊಡಂಬೆಟ್ಟು ಗ್ರಾಮದ ತಿಮ್ಮೊಟ್ಟು ನಿವಾಸಿ ಕರುಣಾಕರ ಮತ್ತು ಸುಜಾತ ದಂಪತಿಯ ಪುತ್ರಿಯಾದ ಒಂಭತ್ತನೇ ತರಗತಿಯ ಹನ್ಸಿಕಾ ರಾಷ್ಟ್ರ ಮಟ್ಟದಲ್ಲಿ ಪ್ರಥಮ, ಪಿಲಾತಬೆಟ್ಟು ಕುಮಂಗಿಲ ನಿವಾಸಿ ದೇಜಪ್ಪ ಪೂಜಾರಿ ಮತ್ತು ಜಯಲಕ್ಷ್ಮಿ ದಂಪತಿಯ ಪುತ್ರನಾದ ಒಂಭತ್ತನೇ ತರಗತಿಯ ಗೌರವ್ ರಾಜ್ಯ ಮಟ್ಟದಲ್ಲಿ ಪ್ರಥಮ, ಬೆದ್ರಮಾರ್ ನಿವಾಸಿ ನಾಗರಾಜ್ ಶೆಟ್ಟಿ ಮತ್ತು ಶಬರಿ ದಂಪತಿಯ ಪುತ್ರನಾದ ಏಳನೇ ತರಗತಿಯ ಪೂರ್ವಜ್ ಎಸ್. ಶೆಟ್ಟಿ, ವಾಮದಪದವು ನಿವಾಸಿ ಇಮ್ತಿಯಾಜ್ ಮತ್ತು ಶಾಹೇದ ಬಾನು ದಂಪತಿಯ ಪುತ್ರಿಯಾದ ಮೂರನೇ ತರಗತಿಯ ಫಾತಿಮ ಶಿಝಾ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಭಾಗವಹಿಸಿದ ಇತರ ವಿದ್ಯಾರ್ಥಿಗಳು ಪ್ರಶಸ್ತಿ ಪತ್ರ ಹಾಗೂ ಪದಕ ಪಡೆದಿರುತ್ತಾರೆ. ಬುರೂಜ್ ಶಾಲೆ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಉತ್ತಮ ಮುಖ್ಯ ಶಿಕ್ಷಕಿ ಮತ್ತು ಉತ್ತಮ ಸಂಘಟಕ ಪ್ರಶಸ್ತಿಯು ಲಭಿಸಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕ ವೃಂದ ಆಡಳಿತ ಮಂಡಳಿ,ಪೊಷಕರು ಶ್ಲಾಘಿಸಿದ್ದಾರೆ.