ಪುತ್ತೂರು: ಪುತ್ತೂರು ತಾಲ್ಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ಪುತ್ತೂರು ಹಾಗೂ ಕಡಬ ತಾಲೂಕು ಬಹುಮಟ್ಟದ ಪುನರ್ವಸತಿ ಕಾರ್ಯಕರ್ತರ /ಹಾಗೂ /ಗ್ರಾಮೀಣ /ನಗರ ಪುನರ್ ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನ ಸಭೆ ಮಾ.4ರಂದು ನಡೆಯಿತು.
ಪುತ್ತೂರು ವಿಕಲ ಚೇತನರ ನೋಡೆಲ್ ಅಧಿಕಾರಿ ವನಿತಾ ಅಧ್ಯಕ್ಷತೆಯಲ್ಲಿ ಹಾಗೂ ಪುತ್ತೂರು ತಾಲೂಕು ಪಂಚಾಯತ್ ಬಹುಮಟ್ಟದ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ರವರ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ತಾಲ್ಲೂಕು ಪಂಚಾಯತ್ ಬಹು ಮಟ್ಟದ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ಫೆಬ್ರವರಿ ತಿಂಗಳ ಪ್ರಗತಿ ಪರಿಶೀಲನ ಸಭೆಯ ವರದಿಯನ್ನು ವಾಚಿಸಿದರು. ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪುತ್ತೂರು ತಾಲೂಕು ಪಂಚಾಯತ್ ಸಂಜೀವಿನಿ ಸಂಘದ ವಲಯ ಮೇಲ್ವಿಚಾರಕಿ ನಳಿನಾಕ್ಷಿ ವಿಕಲ ಚೇತನರ ಸಂಘ ಹಾಗೂ ವಿಕಲ ಚೇತನರ ಆರೈಕೆದಾರರ ರಚನೆ ಹಾಗೂ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಪುತ್ತೂರು ಹಾಗೂ ಕಡಬ ತಾಲೂಕು ವಿಕಲ ಚೇತನರ ವಿಶೇಷ ಗ್ರಾಮ ಸಭೆ, ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಮಾನ್ಯ ವಿಕಲ ಚೇತನರ ನಿರ್ದೇಶಕರ ಆದೇಶದಂತೆ ವಿಕಲ ಚೇತನರ ಸಂಘ ಹಾಗೂ ವಿಕಲ ಚೇತನರ ಸಂಘ ರಚನೆ ಮಾಡುವ ಕುರಿತು ಪುತ್ತೂರು ತಾಲೂಕು ಪಂಚಾಯತ್ ಬಹು ಮಟ್ಟದ ಪುನರ್ ವಸತಿ ಕಾರ್ಯಕರ್ತ ನವೀನ್ ಕುಮಾರ್ ಸಭೆಯಲ್ಲಿ ಮಾಹಿತಿ ನೀಡಿದರು.

ಪ್ರತಿ ತಿಂಗಳು ತಹಸೀಲ್ದಾರ್ ರವರ ಅಧ್ಯಕ್ಷತೆಯಲ್ಲಿ ವಿಕಲ ಚೇತನರ ಕುಂದು ಕೊರತೆ ಸಭೆ ಮಾಡುವಂತೆ ನಿರ್ಣಯ ಮಾಡಲಾಯಿತು.ಪ್ರತಿ ಗ್ರಾಮ ಪಂಚಾಯತ್ ನಲ್ಲಿ ವಿಕಲ ಚೇತನರ ಇಲಾಖೆ ಯೋಜನೆಗಳ ಮಾಹಿತಿ ಫಲಕ ಅಳವಡಿಸುವ ಬಗ್ಗೆ ಪ್ರಗತಿ ಪರಿಶೀಲನ ಚರ್ಚೆ ಮಾಡಲಾಯಿತು.
ಕಡಬ ತಾಲೂಕು ಪೆರಾಬೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಮುತ್ತಪ್ಪ ಗೌಡ ಸ್ವಾಗತಿಸಿದರು.ಪುತ್ತೂರು ತಾಲೂಕು ಬನ್ನೂರು ಗ್ರಾಮೀಣ ಪುನರ್ ವಸತಿ ಕಾರ್ಯಕರ್ತೆಯಾದ ಭವ್ಯ ವಂದಿಸಿದರು. ಪುತ್ತೂರು ಹಾಗೂ ಕಡಬ ತಾಲೂಕು ಎಲ್ಲಾ ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರು ಪ್ರಗತಿ ಪರಿಶೀಲನ ಸಭೆಯಲ್ಲಿ ಉಪಸ್ಥಿತರಿದ್ದರು.