ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಟು ದೇವಸ್ಥಾನದಲ್ಲಿ ಷಷ್ಠಿ ಮತ್ತು ಸಂಕ್ರಮಣ ತಂಬಿಲ ಸೇವೆಯು ಮಾ.5ರಂದು ತಿಂಗಳಿನ ಷಷ್ಠಿ ದಿವಸದ ಮಧ್ಯಾಹ್ನ ಪೂಜೆಯ ಬಳಿಕ ಅನ್ನ ಸಂತರ್ಪಣೆ ನಡೆಯಿತು.
ಅರ್ಚಕರಾದ ಯೋಗೀಶ್ ಕುಂಜತ್ತಾಯ ಹಾಗೂ ರಮೇಶ್ ಭಟ್ ರವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಸದಸ್ಯರಾದ ವಸಂತ ಕುಮಾರ್ ನಾಯ್ಕ, ಲಲಿತ ಕೆ, ರೇಖಾ ಬಿ.ಎಸ್, ಸೂರಪ್ಪ ಗೌಡ, ಚಂದ್ರಶೇಖರ ಕೆ, ರಕ್ಷಿತ್ ಎಸ್.ನಾಯ್ಕ್, ಮಹೇಶ್ ಬಿ ಸಹಿತ ನೂರಾರು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.