ಗೆಜ್ಜೆಗಿರಿಯಲ್ಲಿ ದೇಯಿ ಬೈದ್ಯೆತಿ ನೇಮೋತ್ಸವ, ಮಾತೆ ಮಕ್ಕಳ ಪುನೀತ ಸಮಾಗಮ, ಬೈದರ್ಕಳ ನೇಮೋತ್ಸವ

0

ಬಡಗನ್ನೂರು : ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ನಂದನಬಿತ್ತ್‌ಲ್ ಶ್ರೀ ಕ್ಷೇತ್ರ ಗೆಜ್ಜೆಗಿರಿ ಇಲ್ಲಿನ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ  ಮಾ.4 ರಂದು ಮೂಲಸ್ಥಾನ ಗರಡಿಯಲ್ಲಿ ಶುದ್ದಹೋಮ ಕಲಶ ಮೂಲಸ್ಥಾನ ಗರಡಿಯಲ್ಲಿ  ಕ್ಷೇತ್ರ ತಂತ್ರಿಗಳಾದ ಶಿವಾನಂದ ಶಾಂತಿ ನೇತೃತ್ವದಲ್ಲಿ ಶುದ್ದಹೋಮ ಕಲಶ, ಧೂಮಾವತಿ ಬಲಿ ಸೇವೆ, ಸತ್ಯಧರ್ಮ ಚಾವಡಿಯಲ್ಲಿ ದೀಪಾರಾಧನೆ ಮಹಾಪೂಜಾ ಕಾರ್ಯಕ್ರಮ ನೆರವೇರಿತು. ಬಳಿಕ ಮೂಲಸ್ಥಾನ ಗರಡಿಯಿಂದ ಒಲಿಮದೆಯಿಂದ ಹೊರಟು ದೇಯಿ ಬೈದ್ಯೆತಿ ನೇಮೋತ್ಸವ, ಮಾತೆ ಮಕ್ಕಳ ಪುನೀತ ಸಮಾಗಮ ದೇಯಿಬೈದೆತಿ ಪ್ರಸಾದ ವಿತರಣೆ ದೇಯಿ ಬೈದ್ಯೆತಿ ಸಮಾಧಿಯಲ್ಲಿ ದೀಪಾರಾಧನೆ, ಮೂಲಸ್ಥಾನ ಗರಡಿಯಲ್ಲಿ ಬೈದರ್ಕಳ ದರ್ಶನ ಸೇವೆ ಬೈದರ್ಕಳ ನೇಮೋತ್ಸವ, ಪ್ರಸಾದ ವಿತರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಸಂಸದ ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ  ರಕ್ಷಿತ್ ಶಿವರಾಂ, ಕರಾವಳಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಧಾರ್ಮಿಕ ದತ್ತಿ ಇಲಾಖಾ ರಾಜ್ಯ  ಸದಸ್ಯೆ ಮಲ್ಲಿಕಾ ಪಕ್ಕಳ, ಪುತ್ತೂರು ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಜಿ.ಪಂ ಮಾಜಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಕಾವು, ಭಾರತ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ,ಬಹುಭಾಷಾ  ಚಲನಚಿತ್ರ ನಟ ವಿನೋದ್ ಅಳ್ವ ಮೂಡಾಯೂರು, ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಕಾರ್ಯದರ್ಶಿ ಡಾ.ರಾಜಾರಾಮ್ ಕೆ.ಬಿ., ಗೌರವಾಧ್ಯಕ್ಷರಾದ ಪೀತಾಂಬರ ಹೇರಾಜೆ, ಜಯಂತ ನಡುಬೈಲು, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಮೊಕ್ತೇಸರ ಶ್ರೀಧರ ಪೂಜಾರಿ, ಕೋಶಾಧಿಕಾರಿ ಮೋಹನದಾಸ್ ಬಂಗೇರ, ಉಪಾಧ್ಯಕ್ಷರಾದ ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್ ಗುರುಪುರ, ಸಂಜೀವ ಪೂಜಾರಿ ಕೂಚಿಗುಡ್ಡೆ, ಚಂದ್ರಹಾಸ ಅಮೀನ್, ಅಜಿತ್ ಪಾಲೇರಿ, ಸುಧಾಕರ ಪೂಜಾರಿ, ಶಶಿಧರ ಕಿನ್ನಿಮಜಲು, ಡಾ.ಗೀತಾ ಪ್ರಕಾಶ್, ರಾಜೇಂದ್ರ ಚಿಲಿಂಬಿ, ನಾರಾಯಣ ಮಚ್ಚಿನ, ಜಯವಿಕ್ರಮ್ ಕಲ್ಲಾಪು, ಸೀತಾರಾಮ ರೈ ಕೆದಂಬಾಡಿ ಗುತ್ತು, ಆರ್.ಸಿ. ನಾರಾಯಣ, ಎಸ್.ಟಿ. ಮೋರ್ಚಾ ಜಿಲ್ಲಾ ಅಧ್ಯಕ್ಷ ಹರೀಶ್ ಬಿಜತ್ರೆ, ಅಜಿತ್ ಹೊಸಮನೆ, ಸಂತೋಷ್ ಪಡುಮಲೆ, ನಿತೀಶ್ ಶಾಂತಿವನ, ಜಯರಾಜ್ ಶೆಟ್ಟಿ ಅಣಿಲೆ ಮೊದಲಾದವರು ಉಪಸ್ಥಿತರಿದ್ದರು.

ಈ ಜಾತ್ರೆಯ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ತಾಯಿ ದೇಯಿಮಾತೆಯ ಇಷ್ಟಾರ್ಥದಂತೆ ಮಾತೆಯರಿಗೆ ಮಡಿಲು ತುಂಬಿಸಿ ಪ್ರಸಾದ ರೂಪದಲ್ಲಿ ನೀಡಿದ ಈ ಕಾರ್ಯಕ್ರಮ ಅದ್ಬುತವಾದ ಪರಿಕಲ್ಪನೆ ಪ್ರತಿ ವರುಷವು ಮುಂದುವರಿಸಿ ಎಂದು ಅಭಯದ ನುಡಿ  ನೀಡಿ ಮಾತೆಯರಿಗೆ ತಾನೆ ಪ್ರಸಾದ ನೀಡಿದ ಅಪೂರ್ವ ಸನ್ನಿವೇಶ ನಡೆಯಿತು.

ಮಾತೆ ಮಕ್ಕಳ ಸಮಾಗಮ ಸಹಸ್ರಾರು ಮಂದಿ ಭಾಗಿ :-
ಮಾತೆ ಮಕ್ಕಳ ಸಮಾಗಮದಲ್ಲಿ ಸಹಸ್ರಾರು ಮಂದಿ ಭಾಗವಹಿಸಿ ತಮ್ಮ ಸಂಕಷ್ಟಗಳ ಬಗ್ಗೆ ಪ್ರಾರ್ಥಿಸಿಕೊಂಡು ಪ್ರಸಾದ ಸ್ವೀಕರಿಸಿ, ಶ್ರೀ ಮಾತೆ ದೇಯಿಯ ಅಭಯದ ನುಡಿಯಿಂದ ಮನ ಸಂತುಷ್ಟರಾದರು.

LEAVE A REPLY

Please enter your comment!
Please enter your name here