ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಮಾ.2 ರಂದು ಚುನಾವಣೆ ನಡೆದಿದ್ದು. ಅನರ್ಹ ಮತದಾರರಿಗೆ ಉಚ್ಚನ್ಯಾಯಾಲಯ ಮತದಾನ ಮಾಡಲು ಅವಕಾಶ ನೀಡಿದ್ದು, ಈ ಪ್ರಕರಣದ ಅಂತಿಮ ತೀರ್ಪು ಪ್ರಕಟಗೊಂಡ ನಂತರ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿದ್ದು ಈ ಹಿನ್ನಲೆಯಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪುತ್ತೂರು ಉಪ ವಿಭಾಗದವರು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಕಡಬ ತಾಲೂಕು ಇದರ ಅಡಳಿತ ಮಂಡಳಿಯ ಸ್ಥಾನದಲ್ಲಿ ಶರತ್ .ಡಿ ಮೇಲ್ವಿಚಾರಕ ರು ಪುತ್ತೂರು ತಾಲೂಕು ದ.ಕ ಜಿಲ್ಲಾ ಕೇಂದ್ರ ಸಹಕಾರಿ ನಿಯಮಿತ ಬ್ಯಾಂಕ್ ಮಂಗಳೂರು ರವರನ್ನು ದಿನಾಂಕ 06/03/2025 ರಿಂದ ಅನ್ವಯವಾಗುವಂತೆ ಮುಂದಿನ 3 ತಿಂಗಳು ಆಥವಾ ಕರ್ನಾಟಕ ಉಚ್ಚನ್ಯಾಯಾಲಯ ಬೆಂಗಳೂರು ರವರ ತೀರ್ಪಿಗೆ ಒಳಪಟ್ಟು ಅಡಳಿತ ಮಂಡಳಿ ರಚನೆಯಾಗುವವರೆಗೆ ಇದರಲ್ಲಿ ಯಾವುದು ಮೊದಲು ಅಲ್ಲಿಯವರೆಗೆ ಅನ್ವಯವಾಗುವಂತೆ ವಿಶೇಷಾಧಿಕಾರಿಯಾಗಿ ಕಡಬ ತಾಲೂಕು ಎಡಮಂಗಲದ ದೋಣಿ ಮನೆಯ ಶರತ್.ಡಿ ಯವರನ್ನು ವಿಶೇಷದಿಕಾರಿಯಾಗಿ ನೇಮಿಸಿದೆ.