ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ತೀರ್ಥಾನಂದ ದುಗ್ಗಳ, ಉಪಾಧ್ಯಕ್ಷರಾಗಿ ಜನಾರ್ದನ ಗೌಡ ಮೈರಗುಡ್ಡೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಫೆ.22ರಂದು ನಡೆದ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 12 ಸ್ಥಾನಗಳಲ್ಲಿ 11 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತದ ಸಹಕಾರ ಭಾರತಿ, 1ರಲ್ಲಿ ಕಾಂಗ್ರೆಸ್ ಬೆಂಬಲಿತದ ರೈತಸ್ನೇಹಿ ಬಳಗದ ಅಭ್ಯರ್ಥಿ ಜಯ ಸಾಧಿಸಿತ್ತು.

ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಸಹಕಾರ ಭಾರತಿ ಅಭ್ಯರ್ಥಿಗಳಾಗಿದ್ದ ತೀರ್ಥಾನಂದ ದುಗ್ಗಳ, ಜನಾರ್ಧನ ಗೌಡ ಪಿ, ರಾಜೇಶ್ ಗೌಡ ಕುದುಳಿ, ಸತೀಶ್ ಪಾಂಬಾರು, ಕಾಂಗ್ರೆಸ್ ಬೆಂಬಲಿತರಾಗಿದ್ದ ಪವನ್ ದೊಡ್ಡಮನೆ, ಮಹಿಳಾ ಸ್ಥಾನದಿಂದ ಸಹಕಾರ ಭಾರತಿ ಅಭ್ಯರ್ಥಿಗಳಾಗಿದ್ದ ಜಲಜಾಕ್ಷಿ ಮಾಧವ ಗೌಡ ಕುಂಟಿಕಾನ, ಸುನಂದ ಲೋಕನಾಥ ಗೌಡ ಬಾಯಂಬಾಡಿ, ಹಿಂದುಳಿದ ವರ್ಗ ಬಿ ಸ್ಥಾನದಿಂದ ಪ್ರಭಾಕರ ರೈ ಕೊಂರ್ಬಡ್ಕ, ಹಿಂದುಳಿದ ವರ್ಗ ಎ ಸ್ಥಾನದಿಂದ ಪ್ರವೀಣ ಜಿ ಕೆ, ಪರಿಶಿಷ್ಟ ಪಂಗಡ ಸ್ಥಾನದಿಂದ ಅಣ್ಣಪ್ಪ ನಾಯ್ಕ ಬಿ, ಪರಿಶಿಷ್ಟ ಸ್ಥಾನದಿಂದ ಕರಿಯ, ಸಾಲಗಾರರಲ್ಲದ ಸ್ಥಾನದಿಂದ ಪ್ರೇಮಾ ಗಂಗಾಧರ ಗೌಡ ಕುಂಟಿಕಾನ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.
ಮಾ.7ರಂದು ನಡೆದ ಅಧ್ಯಕ್ಷ /ಉಪಾಧ್ಯಕ್ಷ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡಲಾಯಿತು.
ಶಿವಲಿಂಗಯ್ಯ ಎಂ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ, ದ.ಕ.ಜಿಲ್ಲೆ, ಮಂಗಳೂರು ಚುನಾವಣೆ ಪ್ರಕ್ರಿಯೆ ನಡೆಸಿದರು.