ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃಧ್ಧಿಯೋಜನೆ ಬಿ.ಸಿ ಟ್ರಸ್ಟ್ ಕಡಬ ಇದರ ಆಶ್ರಯ ಜ್ಞಾನ ವಿಕಾಸ ಕಾರ್ಯಕ್ರಮ ಅಡಿಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗಣಿತ ಮತ್ತು ವಿಜ್ಞಾನ ವಿಭಾಗದಲ್ಲಿ ಮೂರು ತಿಂಗಳ ಉಚಿತ ಶಿಕ್ಷಣದ ಸಮಾರೋಪ ಸಮಾರಂಭವು ಸವಣೂರು ಜೂನಿಯರ್ ಕಾಲೇಜ್ ನಲ್ಲಿ ಮಾ.7ರಂದು ನಡೆಯಿತು.
ಕಡಬ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ ಸವಣೂರುರವರು ಸಂದಭೋಚಿತವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ರಘು ಬಿ ಆರ್ ವಹಿಸಿದ್ದರು. ವಿಶೇಷ ತರಗತಿಯ ವಿಜ್ಞಾನ ಶಿಕ್ಷಕ ಕಿಶನ್ ಬಿ ವಿ,ಗಣಿತ ಶಿಕ್ಷಕಿ ನಯನ, ಯೋಜನೆಯ ಆಂತರಿಕ ಲೆಕ್ಕ ಪರಿಶೋಧಕಿ ಶೀಲಾವತಿ, ಜನ ಜಾಗೃತಿ ವೇದಿಕೆಯ ಸವಣೂರು ಗ್ರಾಮ ಸಮಿತಿ ಅಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ಉಪಸ್ಥಿತರಿದ್ದರು.
ಜ್ಞಾನ ವಿಕಾಸ ಸಮನ್ವಯಾಧಿಕಾರಿ ಚೇತನಾ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸೇವಾಪ್ರತಿನಿಧಿ ಅಮಿತ ಸ್ವಾಗತಿಸಿ, ಶಿಕ್ಷಕ ರಾದ ಕಿಶನ್ ವಂದಿಸಿದರು.
