ವಾಷಿಂಗ್ಟನ್: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಗುರುವಾರ ಸ್ಟಾರ್‌ಶಿಪ್‌ನ ರಾಕೆಟ್ ಅನ್ನು ಉಡಾವಣೆಗೊಳಿಸಿದೆ. ಆದರೆ ಉಡಾವಣೆಗೊಂಡ ಕೆಲವೇ ನಿಮಿಷಗಳಲ್ಲಿ ರಾಕೆಟ್ ಬಾಹ್ಯಾಕಾಶದಲ್ಲಿ ಸ್ಫೋಟಗೊಂಡಿದೆ. ರಾಕೆಟ್‌ನ ಅವಶೇಷಗಳು ಬೆಂಕಿಯ ಉಂಡೆಗಳಾಗಿ ಭೂಮಿಯ ಕಡೆಗೆ ವೇಗವಾಗಿ ಬರುತ್ತಿರುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.
ಎಲಾನ್ ಮಸ್ಕ್ ಅವರ ಬಾಹ್ಯಾಕಾಶ ಕಂಪನಿ ಸ್ಪೇಸ್‌ಎಕ್ಸ್‌ಗೆ ಇದರಿಂದ ದೊಡ್ಡ ಹಿನ್ನಡೆಯಾಗಿದೆ. ಕಂಪನಿಯ ಬೃಹತ್ ಸ್ಟಾರ್‌ಶಿಪ್ ಮೆಗಾ-ರಾಕೆಟ್ ವ್ಯವಸ್ಥೆಯು ತನ್ನ ಎಂಟನೇ ಪರೀಕ್ಷಾರ್ಥ ಹಾರಾಟದ ವೇಳೆ ಸ್ಫೋಟಗೊಂಡು ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿದೆ. ಈ ಘಟನೆಯು ಮಸ್ಕ್ ಅವರ ಮಹತ್ವಾಕಾಂಕ್ಷೆಯ ಮಂಗಳ ಗ್ರಹದ ಅನ್ವೇಷಣಾ ಯೋಜನೆಗೆ ಹಿನ್ನಡೆ ಎಂದು ಪರಿಗಣಿಸಲಾಗಿದೆ.
ಗುರುವಾರ ಟೆಕ್ಸಾಸ್‌ನಿಂದ ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆ ಸ್ಫೋಟಗೊಂಡಿದೆ. ಈ ವರ್ಷ ಎಲಾನ್ ಮಸ್ಕ್ ಅವರ ಮಂಗಳ ಗ್ರಹ ರಾಕೆಟ್ ಕಾರ್ಯಕ್ರಮಕ್ಕಾಗಿ ಅಣಕು ಉಪಗ್ರಹಗಳನ್ನು ನಿಯೋಜಿಸುವ ಪ್ರಯತ್ನವನ್ನು ಈ ಉಡಾವಣೆ ಹೊಂದಿತ್ತು. ಆದರೆ ಸ್ಟಾರ್‌ಶಿಪ್ ಬಾಹ್ಯಾಕಾಶದಲ್ಲಿ ಸ್ಫೋಟಗೊಂಡು ದಕ್ಷಿಣ ಫ್ಲೋರಿಡಾ ಮತ್ತು ಬಹಾಮಾಸ್ ಬಳಿ ಉರಿಯುತ್ತಿರುವ ಅವಶೇಷಗಳು ಭೂಮಿಗೆ ಅಪ್ಪಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳು ವೈರಲ್ ಆಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
https://x.com/i/status/1897808153221214299
https://twitter.com/i/status/1897800226515083519