ಸವಣೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಶಾಂತಿಗೋಡು, ಪುತ್ತೂರಿನಲ್ಲಿ ನಡೆಯುತ್ತಿದ್ದು ಸಮಾರೋಪ ಸಮಾರಂಭವು ದಿನಾಂಕ ಮಾ.8 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಗಳಾದ ಅಡ್ವೊಕೇಟ್ ಅಶ್ವಿನ್ ಎಲ್ ಶೆಟ್ಟಿ ವಹಿಸಿದ್ದು, ಹೇಳಿದ್ದನ್ನು ಮಾಡುವ ಮತ್ತು ಮಾಡಿದ್ದನ್ನು ಹೇಳುವ ಧೈರ್ಯ ಎಲ್ಲರಲ್ಲೂ ಬರಬೇಕು ಇದಕ್ಕೆ ಎನ್.ಎಸ್.ಎಸ್ ಸಹಾಯ ಮಾಡುತ್ತದೆ ಎಂದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಿರಾಡಿ ದೇವಸ್ಥಾನದ ಗೌರವ ಅದ್ಯಕ್ಷ ಶ್ಯಾಮ್ ಭಟ್ ಕೈಂದಾಡಿಯವರು ತಮ್ಮ ಉದ್ಘಾಟನಾ ಮಾತಿನಲ್ಲಿ ಆಧುನಿಕತೆಯ ಯಾಂತ್ರಿಕತೆಯ ಜೀವನ ಶೈಲಿಯಲ್ಲಿ ತಮ್ಮ ಒಡನಾಡಿಗಳೊಂದಿಗೆ ಹೇಗೆ ಬದುಕಿ ಬಾಳಬೇಕು ಎಂಬುದನ್ನು ಅರಿಯಲು ಎನ್.ಎಸ್.ಎಸ್ ಸಹಕಾರಿಯಗಿರಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸವಣೂರು ಕೆ.ಸೀತಾರಾಮ ರೈ ಯವರು ಶಿಬಿರವು ನಡೆದ ಶಾಂತಿಗೋಡಿನ ದ.ಕಜಿ.ಪ.ಹಿ.ಪ್ರಾ ಶಾಲೆಗೆ ೧೦,೦೦೦/- ರೂಪಾಯಿಗಳ ಕೊಡುಗೆಯನ್ನು ನೀಡಿ, ಸಹಕಾರ ನೀಡಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ನರಿಮೊಗರು ಗ್ರಾಮ ಪಂಚಾಯತ್ ನ ಸದಸ್ಯರಾದ ಆಶಾ ಸಚ್ಚೀಂದ್ರ ಬೊಳ್ಳಕ್ಕು ರವರು ಶಾಲೆಗಳಲ್ಲಿ ದೊರಕುವ ವಿದ್ಯೆಗಳ ಜೊತೆಗೆ ಶಿಬಿರವು ತಿಳಿಸಿಕೊಡುವ ಸಂಸ್ಕಾರಗಳು ಜೀವನಪೂರ್ತಿ ಶಿಬಿರಾರ್ಥಿಗಳಲ್ಲಿರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿಗಳಾಗಿದ್ದ ದ.ಕ.ಜಿ.ಪ.ಹಿ.ಪ್ರಾ. ಶಾಲೆ ಶಾಂತಿಗೋಡಿನ ಎಸ್.ಡಿ.ಎಂ.ಸಿ ಯ ಅಧ್ಯಕ್ಷ ನಾಗೇಶ ಪೂಜಾರಿ ಸಾರಕೆರೆಯವರು ವಿದ್ಯಾರ್ಥಿಗಳ ಶ್ರಮದಾನದ ಕುರಿತು ಶ್ಲಾಘನೆಯನ್ನು ವ್ಯಕ್ತಪಡಿಸಿದರು. ನರಿಮೊಗರು ಗ್ರಾಮ ಪಂಚಾಯತ್ ನ ಸದಸ್ಯ ಹೊನ್ನಪ್ಪ ಕೈಂದಾಡಿಯವರು ಆಧುನಿಕ ಯಾಂತ್ರಿಕ ಜೀವನ ಶೈಲಿಯಲ್ಲಿ
ತಮ್ಮ ಒಡನಾಡಿಗಳೊಂದಿಗೆ ಹೇಗೆ ಬದುಕಿ ಬಾಳಬೇಕು ಎಂಬುದನ್ನು ಎನ್.ಎಸ್.ಎಸ್ಶಿ ಬಿರವು ತಿಳಿಸಿಕೊಡುತ್ತದೆ ಎಂದರು.
ಸಮಾರೋಪ ಭಾಷಣಗೈದ ನರಿಮೊಗರು ಸರಸ್ವತಿ ವಿದ್ಯಾಮಂದಿರದ ಸಂಚಾಲಕರಾದ ಅವಿನಾಶ್ ಕೊಡಂಕಿರಿ ಬದುಕಿನ ಪಾಠವನ್ನು ಕಲಿಯಲು ನಾಯಕತ್ವದ ಗುಣವನ್ನು ಬೆಳೆಯಲು ಎನ್.ಎಸ್.ಎಸ್ ಸಹಕಾರಿ. ಶಿಬಿರಾರ್ಥಿಗಳು ಶಿಬಿರದಲ್ಲಿ ಕಲಿತಂತಹ ವಿಚಾರಗಳನ್ನು ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ವಾರ್ಷಿಕ ವಿಶೇಷ ಶಿಬಿರದ ವರದಿಯನ್ನು ಶಿಭಿರಾರ್ಥಿ ಕು. ಕುಷಿತಾ ವಾಚಿಸಿದರು. ಶಿಭಿರಾರ್ಥಿಗಳಾದ ದೀಕ್ಷಿತ್ ಹಾಗೂ ನಿತ್ಯಶ್ರೀ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಶಿಭಿರಕ್ಕೆ ಸಹಕಾರ ನೀಡಿದ ಎಲ್ಲರನ್ನು ರಾಶ್ಟ್ರೀಯಾ ಸೇವಾ ಸಹ ಸಂಯೋಜನಾಧಿಕಾರಿಗಳಾದ ಕೌಸಲ್ಯಾ ಎಸ್ ಸ್ಮರಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರನ್ನು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜಲಕ್ಷ್ಮೀ ಎಸ್ ರೈ ವರು ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನಾಧಿಕರಿಗಳಾದ ಶ್ರೀ. ನಿರಂಜನ್ ವಿ. ವಂದಿಸಿದರು.
ವೇದಿಕೆಯಲ್ಲಿ ದ.ಕ.ಜಿ.ಹಿ.ಪ್ರಾ ಶಾಲೆ ಶಾಂತಿಗೋಡು ನ ಮುಖ್ಯ ಶಿಕ್ಷಕರಾದ ಡಾ. ವಿನುತಾ ವೈ.ಎಂ, ವಿದ್ಯಾರಶ್ಮಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೀತಾರಾಮ ಕೇವಳ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲರ ಶಶಿಕಲಾ ಎಸ್.ಆಳ್ವ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲರಾದ ಶೇಷಗಿರಿ ಎಂ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರ್ವಹಣೆಯನ್ನು ಪವಿತ್ರಾ ಕೆ. ನಿರ್ವಹಿಸಿದರು.