ಮಾ.11: ಪುತ್ತೂರು ಬಂಟರ ಭವನದಲ್ಲಿ ಮಹಿಳಾ ಬಂಟರ ವಿಭಾಗದ ಸಾರಥ್ಯದಲ್ಲಿ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

0

ಬಂಟ ಸಮಾಜದಲ್ಲಿ ಬಂಟ ಮಹಿಳೆಯರಿಗೆ ವಿಶೇಷ ಗೌರವ- ಹೇಮನಾಥ ಶೆಟ್ಟಿ

ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಬಂಟರ ಸಂಘ ಪುತ್ತೂರು ತಾಲೂಕು ಇದರ ಮಾರ್ಗದರ್ಶನದೊಂದಿಗೆ ಮಹಿಳಾ ಬಂಟರ ವಿಭಾಗದ ಸಾರಥ್ಯದಲ್ಲಿ ವಿದ್ಯಾರ್ಥಿ ಬಂಟರ ವಿಭಾಗ ಬಂಟರ ಸಂಘ ಪುತ್ತೂರು ತಾಲೂಕು ಇವರ ಸಹಕಾರದೊಂದಿಗೆ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮಾ. ೧೧ ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಲಿದೆ ಎಂದು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ತಾಲೂಕು ಬಂಟರ ಸಂಘದ ಮಾರ್ಗದರ್ಶನದಲ್ಲಿ ಮಹಿಳಾ ಬಂಟರ ವಿಭಾಗ ನಡೆಸುವ ಈ ಕಾರ್‍ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಬಂಟ ಸಮಾಜದಲ್ಲಿ ಮಹಿಳೆಯರಿಗೆ ವಿಶೇಷವಾದ ಪ್ರಾತಿನಿಧ್ಯವಿದ್ದು, ಬಂಟ ಸಮಾಜದಲ್ಲಿ ಬಂಟ ಮಹಿಳೆಯರಿಗೆ ವಿಶೇಷ ಗೌರವ ಇದೆ, ಬಂಟ ಮಹಿಳೆಯರಲ್ಲಿ ವಿಶೇಷವಾದ ಪ್ರತಿಭೆ ಇದೆ, ಬಂಟ ಮಹಿಳೆಯರು ಸಮಾಜದ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ, ಆಮೂಲಕ ಬಂಟ ಸಮಾಜಕ್ಕೆ ವಿಶೇಷ ಶಕ್ತಿಯನ್ನು ಮಹಿಳೆಯರು ತುಂಬಿದ್ದಾರೆ. ಸಂಘಟನೆಯ ಮೂಲಕ ತಾಲೂಕು ಮಹಿಳಾ ಬಂಟರ ವಿಭಾಗದಲ್ಲಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌ರವರು ಸ್ಥಾಪಕಾಧ್ಯಕ್ಷರಾಗಿದ್ದರು, ಅ ಬಳಿಕ ಎಲ್ಲಾ ಅಧ್ಯಕ್ಷರು ಮತ್ತು ತಂಡ ಉತ್ತಮ ಕೆಲಸವನ್ನು ಮಾಡಿದೆ, ಪ್ರಸ್ತುತ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ, ಪ್ರಧಾನ ಕಾರ್‍ಯದರ್ಶಿ ಕುಸುಮ ಶೆಟ್ಟಿ ಹಾಗೂ ಕೋಶಾಧಿಕಾರಿ ಅರುಣಾ ಡಿ.ರೈಯವರ ನೇತ್ರತ್ವದ ತಂಡ ಉತ್ತಮವಾದ ಸಮಾಜಮುಖಿ ಕೆಲಸವನ್ನು ಮಾಡುತ್ತಿದ್ದು, ಮಾ. ೧೧ ರಂದು ನಡೆಯುವ ಬಂಟ ಮಹಿಳಾ ದಿನಾಚರಣೆಯಲ್ಲಿ ಸಮಾಜದ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾವು ಹೇಮನಾಥ ಶೆಟ್ಟಿ ವಿನಂತಿಸಿದರು.

ಕಾರ್‍ಯಕ್ರಮದ ವಿವರ
ಪೂರ್ವಾಹ್ನ ಗಂಟೆ ೧೧.೩೦ರಿಂದ ಮಂಗಳೂರು ವಿಶ್ವವಿದ್ಯಾನಿಲಯ ಸಂಜೆ ಕಾಲೇಜಿನ ತುಳು ಉಪನ್ಯಾಸಕಿ ಮಣಿ ಯಂ.ರೈರವರು ಸಭಾ ಕಾರ್‍ಯಕ್ರಮ ಉದ್ಘಾಟಿಸಲಿದ್ದಾರೆ. ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ, ಬಂಟರ ಸಂಘ ಪುತ್ತೂರು ತಾಲೂಕು ಅಧ್ಯಕ್ಷ ಹೇಮನಾಥ ಶೆಟ್ಟಿ. ಮಾಜಿ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಪುತ್ತೂರು ತಾಲೂಕು ಸಂಚಾಲಕ ದುರ್ಗಾಪ್ರಸಾದ್ ರೈ ಕುಂಬ್ರ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಮಲ್ಲಿಕಾ ಪಕ್ಕಳರವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಭಿಮತ ಟಿ.ವಿ. ಆಡಳಿತ ಪಾಲುದಾರರಾದ ಡಾ| ಮಮತಾ ಪಿ. ಶೆಟ್ಟಿರವರು ಆಶಯ ಭಾಷಣ ಮಾಡಲಿದ್ದಾರೆ.


ಮಹಿಳಾ ಬಂಟರ ವಿಭಾಗ ವಿಶೇಷ ಆಹ್ವಾನಿತರಾದ ಸುಮಾ ಅಶೋಕ್ ರೈ,ಮಹಿಳಾ ಬಂಟರ ವಿಭಾಗದ ಮಾಜಿ ಅಧ್ಯಕ್ಷರುಗಳಾದ ಕುಮುದ ಎಲ್.ಎನ್. ಶೆಟ್ಟಿ, ಮೀರಾ ಭಾಸ್ಕರ ರೈ, ಸಬಿತಾ ಭಂಡಾರಿ,ವಿಶೇಷ ಆಹ್ವಾನಿತರಾದ ಮಾಲಿನಿ ಮುತ್ತು ಶೆಟ್ಟಿ, ಯುವ ಬಂಟರ ವಿಭಾಗದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು, ವಿದ್ಯಾರ್ಥಿ ಬಂಟರ ವಿಭಾಗದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳದಡ್ಡರವರುಗಳು ಗೌರವ ಉಪಸ್ಥಿತರಿರುತ್ತಾರೆ ಎಂದು ಹೇಮನಾಥ ಶೆಟ್ಟಿ ತಿಳಿಸಿದರು.

ಸನ್ಮಾನಿತರು:
ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಉಪನ್ಯಾಸಕಿ ಮತ್ತು ಪಥಲೋಜಿ ವಿಭಾಗದದ ಎಚ್‌ಓಡಿ ಡಾ| ಸತ್ಯವತಿ ಆಳ್ವ, ನಿವೃತ್ತ ಮುಖ್ಯ ಶಿಕ್ಷಕಿ ವಾರಿಜ ರಘುನಾಥ ರೈ ನುಳಿಯಾಲು, ನಾಟಿವೈದ್ಯೆ ವಾರಿಜ ಯಂ. ಶೆಟ್ಟಿ ಬರೆಮೇಲು ಕೊಡಿಂಬಾಡಿ, ಡಾ| ರಶ್ಮಾ ಎಂ. ಶೆಟ್ಟಿ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯೆ ಡಾ| ರಶ್ಮಾ ಎಂ. ಶೆಟ್ಟಿ, ಬಹುಮುಖ ಪ್ರತಿಭೆ ಕ್ರೀಡಾಪಟು
ದೀಕ್ಷಾ ರೈ ಪಟ್ಟೆರವರಿಗೆ ಸನ್ಮಾನ ಹಾಗೂ ಬಾಲ ಪ್ರತಿಭೆ ಬೇಬಿ ಶಾನ್ವಿ ವಿ. ಶೆಟ್ಟಿ ಕೈಕಾರರವರಿಗೆ ಗೌರವಾರ್ಪಣೆ ನಡೆಯಲಿದೆ. ಎಂದು ಕಾವು ಹೇಮನಾಥ ಶೆಟ್ಟಿ ಹೇಳಿದರು. ಪ್ರತಿಕಾಗೋಷ್ಠಿಯಲ್ಲಿ ತಾಲೂಕು ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ, ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ. ಶೆಟ್ಟಿ, ಕೊಶಾಧಿಕಾರಿ ಅರುಣಾ ಡಿ. ರೈ, ಸಾಂಸ್ಕೃತಿಕ ವಿಭಾಗದ ಹರಿಣಾಕ್ಷಿ ಜೆ.ಶೆಟ್ಟಿ ಉಪಸ್ಥಿತರಿದ್ದರು.


‘ಮಹಿಷಮರ್ದಿನಿ’ ಯಕ್ಷಗಾನ
ಪೂರ್ವಾಹ್ನ ೧೦.ರಿಂದ :-ಪುತ್ತೂರು ಮಹಿಳಾ ಬಂಟರ ವಿಭಾಗದ ಭಜನಾ ತಂಡದ ಉದ್ಘಾಟನೆ ಮತ್ತು ಭಜನಾ ಕಾರ್ಯಕ್ರಮ ಸೌಪರ್ಣಿಕ ಗುರುರಾಜ್ ರೈ ಈಶ್ವರಮಂಗಲ ಇವರಿಂದ ಗಣಪತಿ ತಾಳಂ, ಜಾನಪದ ನೃತ್ಯ ನಡೆಯಲಿದ್ದು, ಅಪರಾಹ್ನ ಗಂಟೆ ೨.೩೦ರಿಂದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಪೂರ್ಣಿಮ ಯತೀಶ್ ರೈ ಚೆಲ್ಯಡ್ಕ, ನುಳಿಯಾಲು ಇವರ ನಿರ್ದೇಶನದಲ್ಲಿ ಮಹಿಳಾ ಬಂಟರ ವಿಭಾಗ ಪುತ್ತೂರು ಹಾಗೂ ಅತಿಥಿ ಕಲಾವಿದೆಯರ ಕೂಡುವಿಕೆಯಲ್ಲಿ ಯಕ್ಷಗಾನ ‘ಮಹಿಷಮರ್ದಿನಿ’ ಜರಗಲಿದೆ.

ಪೂರ್ಣ ಬೆಂಬಲ ಅಗತ್ಯ
ಮಾ. ೧೧ ರಂದು ನಡೆಯುವ ಮಹಿಳಾ ಬಂಟರ ವಿಭಾಗದ ಮಹಿಳಾ ದಿನಾಚರಣೆ ಅದ್ದೂರಿಯಾಗಿ ನಡೆಯಲಿದೆ. ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಪೂರ್ಣ ರೀತಿಯ ಸಹಕಾರವನ್ನು ನೀಡುತ್ತಿದ್ದಾರೆ. ಕಾರ್‍ಯಕ್ರಮದಲ್ಲಿ ಎಲ್ಲಾ ಬಂಟ ಮಹಿಳೆಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪ್ರೋತ್ಸಾಹವನ್ನು ನೀಡಬೇಕಾಗಿ ವಿನಂತಿ
ಗೀತಾ ಮೋಹನ್ ರೈ, ಅಧ್ಯಕ್ಷರು ಮಹಿಳಾ ಬಂಟರ ವಿಭಾಗ

LEAVE A REPLY

Please enter your comment!
Please enter your name here