ಸವಣೂರು: ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಶನ್-ಸಮಾರೋಪ ಸಮಾರಂಭ

0

ಸವಣೂರು: ಧರ್ಮಸ್ಥಳ ಗ್ರಾಮಾಭಿವೃಧ್ಧಿಯೋಜನೆ ಬಿ ಸಿ ಟ್ರಸ್ಟ್ ಕಡಬ ಆಶ್ರಯ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಭಾಗದಲ್ಲಿ ಮೂರು ತಿಂಗಳ ಉಚಿತ ಶಿಕ್ಷಣದ ಸಮಾರೋಪ ಸಮಾರಂಭವು ಸವಣೂರು ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. 

ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ ಸವಣೂರು ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಕಾಲಘಟ್ಟದಲ್ಲಿ  ಸಿಕ್ಕಿದ ಅವಕಾಶವನ್ನು ಸದುಪಯೋಗಪಡೆದು ಶಾಲೆಗೆ ಶೇ.100ಫಲಿತಾಂಶವನ್ನುತರುವ ಪ್ರಯತ್ನ ಮಾಡಬೇಕು. ಅದುವೇ ನೀವು ಗುರುಗಳಿಗೆ ನೀಡುವ ನಿಜವಾದ ದಕ್ಷಿಣೆ. ಆ ಪ್ರಯತ್ನ ಹಿಂದೆ ಸತತ ಪರಿಶ್ರಮಬೇಕು ಎಂದರು.

ಶಾಲಾ ಮುಖ್ಯ ಶಿಕ್ಷಕ ರಘು ಬಿ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ತರಗತಿ ಯ. ವಿಜ್ಞಾನ ಶಿಕ್ಷಕ ಕಿಶನ್ ಬಿ ವಿ, ಗಣಿತ ಶಿಕ್ಷಕಿ ನಯನ ಮಾತನಾಡಿದರು. ಆಂತರಿಕ  ಲೆಕ್ಕ ಪರಿಶೋಧಕಿ ಶೀಲಾವತಿ,ಜನ ಜಾಗೃತಿ ವೇದಿಕೆ ಯ ಸವಣೂರು ಗ್ರಾಮ ಸಮಿತಿ ಅಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ಉಪಸ್ಥಿತರಿದ್ದರು.  

ಜ್ಞಾನ ವಿಕಾಸ ಸಮನ್ವಯಾಧಿಕಾರಿ ಚೇತನಾ ಪ್ರಾಸ್ತಾವಿಸಿದರು. ಸೇವಾಪ್ರತಿನಿಧಿ ಅಮಿತ ಸ್ವಾಗತಿಸಿ ,ಶಿಕ್ಷಕ ರಾದ  ಕಿಶನ್ ವಂದಿಸಿದರು  ವಿಶೇಷ ತರಗತಿ ಯ ವಿದ್ಯಾರ್ಥಿ ಆಕಾಶ್ ಅನಿಸಿಕೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here