ತೀರ್ಥಹಳ್ಳಿ ನಿವಾಸಿ ಉಪ್ಪಿನಂಗಡಿಯಲ್ಲಿ ಅಸ್ವಸ್ಥ, ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತ್ಯು

0

ಪುತ್ತೂರು: ಮಸಾಲ ಪ್ರೊಡೆಕ್ಟ್‌ಗಳ ಸಾಗಾಟದ ವಾಹನದಲ್ಲಿ ಚಾಲಕನಾಗಿ ಬಂದಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿಯೊಬ್ಬರು ಉಪ್ಪಿನಂಗಡಿಯಲ್ಲಿ ಅಸ್ವಸ್ಥರಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದ ವೇಳೆ ಮೃತಪಟ್ಟ ಘಟನೆ ಮಾ.7ರಂದು ನಡೆದಿದೆ.


ತೀರ್ಥಹಳ್ಳಿ ತಾಲೂಕಿನ ಕೊಳಿಗೆ ನಾಲೂರು ಗ್ರಾಮದ ನಿವಾಸಿ ದಯಾನಂದ ಕೆ.ಟಿ.(51ವ.)ಮೃತಪಟ್ಟವರಾಗಿದ್ದಾರೆ. ಇವರು ಮಸಾಲ ಪ್ರೊಡೆಕ್ಟ್‌ಗಳ ಮಾರಾಟದ ವಾಹನದಲ್ಲಿ ಚಾಲಕನಾಗಿ ಮಾ.7ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರಿನಿಂದ ಹೊರಟು ಸುಳ್ಯಕ್ಕೆ ಹೋಗಿ ಅಲ್ಲಿ ಮಸಾಲ ಪ್ರೊಡೆಕ್ಟ್‌ಗಳನ್ನು ಕೊಟ್ಟು ಅಲ್ಲಿಂದ ಮಧ್ಯಾಹ್ನ 3.40ಕ್ಕೆ ಉಪ್ಪಿನಂಗಡಿ ರಥಬೀದಿಯಲ್ಲಿರುವ ರಾಜೇಶ್‌ರವರ ಅಂಗಡಿಗೆ ಬಂದು ವಾಹನ ನಿಲ್ಲಿಸಿ ಸುಸ್ತು ಆಗುವುದಾಗಿ ತಿಳಿಸಿದ್ದರು. ಈ ವೇಳೆ ರಾಜೇಶ್‌ರವರು ಉಪ್ಪಿನಂಗಡಿ ಶೆಣೈ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಮೇಲ್ದರ್ಜೆಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದಂತೆ ಆಂಬ್ಯುಲೆನ್ಸ್‌ನಲ್ಲಿ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ದಯಾನಂದ ಅವರು ಯಾವುದೋ ಖಾಯಿಲೆಯಿಂದ ಅಥವಾ ಹೃದಯಘಾತದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮೃತ ದಯಾನಂದ ಅವರ ಪುತ್ರ ಅಂಶಿತ್‌ಕುಮಾರ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here