ಮಾ.12 : ಪುಣಚ ನೀರುಮಜಲು ಬ್ರಹ್ಮ ಬೈದೆರ್ಕಳ ಗರಡಿ ನೇಮೋತ್ಸವ

0

ಪುಣಚ: ಪುಣಚ ಗ್ರಾಮದ ನೀರುಮಜಲು ಶ್ರೀ ಕೋಟಿ ಚೆನ್ನಯ ಗರಡಿಯಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಬ್ರಹ್ಮ ಬೈದೆರ್ಕಳ ನೇಮೋತ್ಸವ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಾ.12ರಂದು  ನಡೆಯಲಿದೆ. 


ಮಾ.11ರಂದು ಬೆಳಿಗ್ಗೆ ನಾಗತಂಬಿಲ, ರಾತ್ರಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಕಾರ್ತಿಕ ಪೂಜೆ ನಡೆಯಲಿದೆ.


ಮಾ.12ರಂದು ಬೆಳಿಗ್ಗೆ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರ ಪೌರೋಹಿತ್ಯದಲ್ಲಿ ಮಹಾಗಣಪತಿ ಹೋಮ ನಡೆದು, ಮಧ್ಯಾಹ್ನ ಶುದ್ಧ ಕಲಶಾದಿ ಹೋಮ, ತಂಬಿಲ  ನಡೆಯಲಿದೆ. ರಾತ್ರಿ ಶ್ರೀ ಬೈದರ್ಕಳ ಗರಡಿ ಇಳಿಯುವ ಕಾರ್ಯಕ್ರಮ, ಆಯುಧ ಒಪ್ಪಿಸುವುದು, ಮಾಯಂದಾಳ್ ದೇವಿಯ ಉತ್ಸವ, ಪೂಜಾರಿಗಳ ಸೇಟು, ಬೈದೆರ್ಕಳ ಸೇಟು ನಡೆದು ಮಾ.13ರ ಮುಂಜಾನೆ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಮತ್ತು ರಾತ್ರಿ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗರಡಿಯ ಆಡಳಿತ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here